More

    ಹುಟ್ಟಿದ ಮಗುವಿಗೆ ಎದೆ ಹಾಲೇ ಅಮೃತ

    ಬೀದರ್: ಜನಿಸಿದ ಮಗುವಿಗೆ ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನ. ಹುಟ್ಟಿದಾಕ್ಷಣ ಮಗುವಿಗೆ ಕಡ್ಡಾಯವಾಗಿ ಎದೆ ಹಾಲನ್ನು ಮಾತ್ರ ಕೊಡಬೇಕು. ಇದರಲ್ಲಿನ ಪ್ರೊಟೀನ್ ಸೇರಿದಂತೆ ಇತರೆ ಪೌಷ್ಠಿಕಾಂಶ ಮಗುವಿನ ಮೆದುಳು ಬೆಳವಣಿಗೆಗೆ ಸಹಕಾರಿ ಎಂದು ಇಲ್ಲಿನ ಬ್ರಿಮ್ಸ ಆಸ್ಪತ್ರೆ ವೈದ್ಯ ಡಾ. ಶರಣ ಬುಳ್ಳಾ ಹೇಳಿದರು.
    ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚ್ಯೂರಿ, ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೇಷನ್ ಹಾಗೂ ಬ್ರಿಮ್ಸ್ ಮಕ್ಕಳ ವಿಭಾಗದಿಂದ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಸ್ತನಪಾನ ಸಪ್ತಾಹದಲ್ಲಿ ಮಾತನಾಡಿ, ಮಗು ಹುಟ್ಟಿದ ಒಂದು ಗಂಟೆಯ ಒಳಗಾಗಿ ಸ್ತನಪಾನ ಮಾಡಬೇಕು. ಆರು ತಿಂಗಳು ಯಾವುದೇ ಆಹಾರ ನೀಡದೆ ಕೇವಲ ಎದೆಹಾಲು ಉಣಿಬೇಕು. 6 ತಿಂಗಳ ನಂತರ ಸ್ತನಪಾನ ಜತೆಗೆ ಅಲ್ಪ ಪ್ರಮಾಣದ ಆಹಾರ ನೀಡಬಹುದು. ಎರಡು ವರ್ಷದವರೆಗೂ ಸ್ತನಪಾನ ಮಾಡಿಸುವುದು ಮಕ್ಕಳ ಬೆಳವಣಿಗೆ ಹಿತದಿಂದ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
    ಪ್ರತಿ ವರ್ಷ 1 ರಿಂದ 7ನೇ ಆಗಸ್ಟ್ವರೆಗೆ ವಿಶ್ವ ಸ್ತನಪಾನ ಸಪ್ತಾಹ ಎಂದು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇತರ ಸಂಸ್ಥೆಗಳು ಸ್ತನಪಾನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡುತ್ತಿವೆ. ಸ್ತನಪಾನ ಮಾಡುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಲು ಸಾಧ್ಯ ಎಂದರು.
    ಡಾ. ಕಪಿಲ್ ಪಾಟೀಲ್ ಮಾತನಾಡಿದರು. ಪಿಎಫ್ಎಐ ಬೀದರ್ ಶಾಖೆ ಅಧ್ಯಕ್ಷೆ ಡಾ.ಆರತಿ ರಘು ಕೃಷ್ಣಮೂರ್ತಿ, ರೋಟರಿ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ , ಡಾ. ನಿತೇಶಕುಮಾರ ಬಿರಾದಾರ, ಶಿವಕುಮಾರ ಪಾಕಾಲ್, ಡಾ. ಶಿಲ್ಪಾ ಬುಳ್ಳಾ, ಡಾ. ನಾಗೇಶ ಪಾಟೀಲ್ ಇದ್ದರು. ಎಫ್ಪಿಎಐ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts