More

    ಬ್ರಿಮ್ಸ್ ಅವ್ಯವಸ್ಥೆಗೆ ಶೀಘ್ರ ಬ್ರೇಕ್

    ಬೀದರ್: ಬೆಂಗಳೂರಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬ್ರಿಮ್ಸ್) ಸುಧಾರಣೆ ಬಗ್ಗೆ ಸಮಗ್ರವಾಗಿ ಚಚರ್ಿಸಲಾಗುವುದು. ಇಲ್ಲಿನ ಅವ್ಯವಸ್ಥೆಗೆ ಶೀಘ್ರವೇ ಲಗಾಮು ಹಾಕುವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದರು.
    ಬ್ರಿಮ್ಸ್ ಆಸ್ಪತ್ರೆ ಸಭಾಂಗಣದಲ್ಲಿ ಭಾನುವಾರ ಜನಪ್ರತಿನಿಧಿಗಳು ಮತ್ತು ವೈದ್ಯಾಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಜಿಲ್ಲೆಯ ಶಾಸಕರು ಇಲ್ಲಿನ ಅವ್ಯವಸ್ಥೆ ನೋಡಿ ನೋಡಿ ಸಾಕಾಗಿ ಹೋಗಿದೆ ಎಂದು ತೀವ್ರ ಅತೃಪ್ತಿ ಹೊರಹಾಕಿದ ನಂತರ ಸಚಿವರು ಈ ಭರವಸೆ ನೀಡಿದರು. ಬ್ರಿಮ್ಸ್ ಸರಿದಾರಿಗೆ ತರುವ ವಿಷಯವನ್ನು ಸವಾಲಾಗಿ ಸ್ವೀಕರಿಸಿರುವೆ. ಸ್ವಲ್ಪ ಸಮಯ ಕೊಡಿ. ಎಲ್ಲವೂ ಸರಿಪಡಿಸಿ ತೋರಿಸುವೆ ಎಂದರು.
    ಬ್ರಿಮ್ಸ್ನಲ್ಲಿ 71 ಗ್ರೂಪ್ ಎ, 1 ಗ್ರೂಪ್ ಬಿ, 135 ಗ್ರೂಪ್ ಸಿ, 82 ಗ್ರೂಪ್ ಡಿ ಸೇರಿ 289 ಹುದ್ದೆ ಹಾಗೂ ಬೋಧಕ ಆಸ್ಪತ್ರೆಯಲ್ಲಿ ಗ್ರೂಪ್ ಎ 12, ಗ್ರೂಪ್ ಬಿ 2, ಗ್ರೂಪ್ ಸಿ 71 ಮತ್ತು ಗ್ರೂಪ್ ಡಿ 15 ಸೇರಿ 100 ಹುದ್ದೆ (ಒಟ್ಟು 389) ಭರ್ತಿ ಆಗುವುದು ಬಾಕಿ ಇದೆ ಎಂದು ಬ್ರಿಮ್ಸ್ ನಿರ್ದೇಶಕರು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
    ಖಾಲಿ ಇರುವ 5 ಪ್ರೊಫೆಸರ್, 3 ಅಸೋಸಿಯೇಟ್ ಪ್ರೊಫೆಸರ್ ಮತ್ತು 8 ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳ ನೇಮಕ ಪ್ರಕ್ರಿಯೆ ಶೀಘ್ರ ಆರಂಭಿಸುವಂತೆ ಸಚಿವರು ನಿರ್ದೇಶನ ನೀಡಿದರು.
    ಸಂಸದರಾದ ಡಾ.ಉಮೇಶ ಜಾಧವ್, ಭಗವಂತ ಖೂಬಾ, ಶಾಸಕರಾದ ರಾಜಶೇಖರ ಪಾಟೀಲ್, ರಹೀಮ್ ಖಾನ್, ಬಿ.ನಾರಾಯಣರಾವ, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್, ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ, ಜಿಲ್ಲಾಧಿಕಾರಿ ರಾಮಚಂದ್ರನ್, ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಎಸ್ಪಿ ಡಿ.ಎಲ್. ನಾಗೇಶ, ಬ್ರಿಮ್ಸ್ ನಿರ್ದೇಶಕ ಡಾ.ಶಿವಕುಮಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts