More

    ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆ ಸರ್ವಕಾಲಕ್ಕೂ ಪ್ರಸ್ತುತ

    ಭದ್ರಾವತಿ: ಕೇರಳದಲ್ಲಿ ದೊಡ್ಡ ಕಾಂತ್ರಿಯನ್ನೇ ಮಾಡಿದ ನಾರಾಯಣ ಗುರುಗಳ ಚಿಂತನೆಗಳು, ವಿಚಾರಧಾರೆಗಳು ಸರ್ವ ಕಾಲಕ್ಕೂ ಪ್ರಸ್ತುತ. ಅವುಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವ ಅಗತ್ಯವಿದೆ ಎಂದು ತಹಸೀಲ್ದಾರ್ ಆರ್.ಪ್ರದೀಪ್ ತಿಳಿಸಿದರು.
    ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ ಹಾಗೂ ಶ್ರೀ ನಾರಾಯಣಗುರು ವಿಚಾರ ವೇದಿಕೆ ಶನಿವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ 168ನೇ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಸರ್ಕಾರದಿಂದ ಆಚರಿಸುತ್ತಿರುವ ಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಸಮಾಜದ ಎಲ್ಲಾ ಸಂಘ-ಸಂಸ್ಥೆಗಳು ಒಗ್ಗೂಡಿ ಆಚರಿಸಬೇಕು ಎಂದರು.
    ಉಪನ್ಯಾಸ ನೀಡಿದ ಕ್ಷೇತ್ರ ಸಮನ್ವಯಾಧಿಕಾರಿ ವಿ.ಎಚ್.ಪಂಚಾಕ್ಷರಿ, ಶೋಷಿತ ಸಮಾಜದ ಗುರುಗಳಾಗಿ ನಾರಾಯಣ ಗುರುಗಳು ಬುದ್ಧ, ಬಸವ, ಅಂಬೇಡ್ಕರ್ ಅವರಂತೆ ವಿಶ್ವಕ್ರಾಂತಿ ಮಾಡಿದವರು. ಯಾವುದೆ ಒಂದು ಜಾತಿಗೆ ಸೀಮಿತರಾದವರಲ್ಲ. ಬುದ್ಧ, ಬಸವಣ್ಣರು ಧರ್ಮ, ಸಂಪ್ರದಾಯ ಅನಿಷ್ಟತೆಗೆ ರೋಸಿ ಹೋಗಿ ಬೇರೆ ಧರ್ಮ ಕಟ್ಟಿದರೆ, ನಾರಾಯಣ ಗುರುಗಳು ಇರುವ ಧರ್ಮದಲ್ಲಿಯೆ ಸುಧಾರಣೆ ತಂದರು. ಕೇರಳದಲ್ಲಿ ನೂರಕ್ಕೆ ನೂರರಷ್ಟು ಸಾಕ್ಷರತೆ ಇದೆ ಎಂದಾದರೆ ಅದಕ್ಕೆ ನಾರಾಯಣ ಗುರುಗಳು ಕಾರಣ ಎಂದರು.
    ನಗರಸಭಾ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಸಮಾಜದಲ್ಲಿ ಇರುವ ಒಳಪಂಗಡಗಳು ಒಂದಾದಾಗ ಮಾತ್ರ ಸಮಾಜ ಅಭಿವೃದ್ಧಿ ಆಗುತ್ತದೆ. ಕಾಗೋಡು ತಿಮ್ಮಪ್ಪ, ಬಂಗಾರಪ್ಪ ಅವರಂತಹ ಉನ್ನತ ವ್ಯಕ್ತಿಗಳನ್ನು ನೀಡಿದ ಸಮಾಜ ಇದಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts