More

    ಬೇಡಿಕೆಗೆ ತಕ್ಕಂತೆ ಬಸ್ ಸಂಚಾರ

    ಕುಮಟಾ: ಪ್ರಯಾಣಿಕರಿಗಾಗಿ ಬಸ್​ಗಳ ಸಮಯ ಪಟ್ಟಿ ನಿಗದಿಪಡಿಸುವುದು ಗೊಂದಲವಾಗಿದೆ. ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಮಾರ್ಗದ ಜನ ಸಂಚಾರ ಗಮನಿಸಿ ಬಸ್ ಬಿಡುತ್ತಿದ್ದೇವೆ ಎಂದು ವಾಕರಸಾ ಸಂಸ್ಥೆ ಡಿಪೋ ವ್ಯವಸ್ಥಾಪಕಿ ಸೌಮ್ಯಾ ನಾಯಕ ಹೇಳಿದರು.

    ತಾಪಂ ಸಭಾಭವನದಲ್ಲಿ ಶುಕ್ರವಾರ ತಾಪಂ ಅಧ್ಯಕ್ಷೆ ವಿಜಯಾ ಪಟಗಾರ ಅಧ್ಯಕ್ಷತೆಯಲ್ಲಿ ಜರುಗಿದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಕೆಲ ಗ್ರಾಮೀಣ ಮಾರ್ಗಗಳಲ್ಲಿ ಈಗಾಗಲೆ ಬಸ್ ಬೇಡ ಎಂಬ ಅಭಿಪ್ರಾಯವೂ ಇದೆ. ಜನರಿಂದ ಮಿಶ್ರ ಪ್ರತಿಕ್ರಿಯೆ ಇದೆ ಎಂದರು. ಇಒ ಸಿ.ಟಿ. ನಾಯ್ಕ ಪ್ರತಿಕ್ರಿಯಿಸಿ, ಹಳ್ಳಿಗಳಿಂದ ಪ್ರಯಾಣಿಕರನ್ನು ತಾಲೂಕು ಕೇಂದ್ರಕ್ಕೆ ಹೊತ್ತು ತಂದರೆ ಸಾಲದು. ಸಂಜೆ ಅವರನ್ನು ಮರಳಿ ಊರಿಗೆ ತಲುಪಿಸುವುದಕ್ಕೆ ಒಂದು ಬಸ್ ವ್ಯವಸ್ಥೆ ಇರಬೇಕು. ಮಳೆಗಾಲ ಆರಂಭವಾಗುತ್ತಿರುವುದರಿಂದ ದೂರದ ಸ್ಥಳಗಳಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣ ಮಾಡುವುದು ಸುರಕ್ಷಿತವಲ್ಲ. ಈ ಬಗ್ಗೆ ಪರಾಮಶಿಸಿ ಎಂದು ಸೂಚಿಸಿದರು. ಕೃಷಿ ಸಹಾಯಕ ನಿರ್ದೇಶಕ ಶಂಕರ ಹೆಗಡೆ ಮಾತನಾಡಿ, ತಾಲೂಕಿನಲ್ಲಿ 2860 ಹೆಕ್ಟೇರ್ ಭತ್ತದ ಇಳುವರಿ ಇದ್ದು, ಸುಧಾರಿತ ತಳಿಯತ್ತ ರೈತರ ಆಸಕ್ತಿ ಇದೆ. 1,038 ಕ್ವಿಂಟಾಲ್ ಬೀಜ ಬಂದಿದ್ದು, 725 ಕೆ.ಜಿ. ವಿತರಿಸಲಾಗಿದೆ. ರಾಸಾಯನಿಕ ಗೊಬ್ಬರ ದಾಸ್ತಾನು ಸಾಕಷ್ಟಿದೆ ಎಂದರು.

    ತೋಟಗಾರಿಕೆ ಸಹಾಯಕ ನಿರ್ದೇಶಕ ಚೇತನ ನಾಯ್ಕ, ಹೂವು, ತರಕಾರಿ ಬೆಳೆಗಾರರಿಗೆ ಸರ್ಕಾರದ ನಿರ್ದೇಶನದಂತೆ ಹಾನಿ ಪರಿಹಾರ ವಿತರಿಸಲಾಗುವುದು ಎಂದರು. ಪಶು ಸಂಗೋಪನೆ ಸಹಾಯಕ ನಿರ್ದೇಶಕ ಡಾ. ವಿ.ಕೆ. ಹೆಗಡೆ, ಬಿಇಒ ಆರ್.ಎಲ್. ಭಟ್ಟ, ಜಿಪಂ ಎಇ ರಾಮದಾಸ ಗುನಗಿ, ಇಒ ಸಿ.ಟಿ. ನಾಯ್ಕ, ಆಯುಷ್ ವೈದ್ಯೆ ಡಾ. ಭಾರತಿ ಪಿ.ಬಿ. ತಮ್ಮ ಇಲಾಖೆ ಕುರಿತು ಮಾಹಿತಿ ನೀಡಿದರು.

    ಬಳಿಕ ಆಯುಷ್ ಇಲಾಖೆಯಿಂದ ಪೂರೈಕೆಯಾದ ಚ್ಯವನಪ್ರಾಶ ಅನ್ನು ಸಭೆಯಲ್ಲಿ ವಿತರಿಸಲಾಯಿತು. ಮೀನುಗಾರಿಕೆ ಪ್ರಭಾರ ಅಧಿಕಾರಿ ಆರ್.ಬಿ. ಪಾಟೀಲ, ಸಮುದ್ರ ಕೊರೆತ ವಿಭಾಗದ ಅಧಿಕಾರಿ ರಾಮದಾಸ ಭಂಡಾರಿ, ಹೆಸ್ಕಾಂ ಎಇ ಎಂ.ಎ. ಪಠಾಣ ಇತರರು ಪ್ರಗತಿ ವರದಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts