More

    ಬೆಳೆ ಹಾನಿ ಪರಿಹಾರಕ್ಕೆ ರೈತರ ಮನವಿ

    ನರೇಗಲ್ಲ: ಹೆಸರು ಬೆಳೆಗೆ ಹಸಿರು ರೋಗ ಕಾಣಿಸಿಕೊಂಡಿದ್ದು, ಬಹುತೇಕ ಬೆಳೆ ಹಾನಿಗೊಳಗಾಗಿದೆ. ಆದ್ದರಿಂದ ಸರ್ಕಾರ ಬೆಳೆ ಹಾನಿ ನೀಡಬೇಕು ಎಂದು ಆಗ್ರಹಿಸಿ ರೈತ ಸೇನಾ ನೇತೃತ್ವದಲ್ಲಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

    ಈ ಸಂದರ್ಭದಲ್ಲಿ ಮಾತನಾಡಿದ ರೈತ ಸೇನಾ ಅಧ್ಯಕ್ಷ ಆನಂದ ಕೋಟಗಿ, ‘ನರೇಗಲ್ಲ ಹೋಬಳಿಯಾದ್ಯಂತ 9 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆ ಬಿತ್ತನೆ ಮಾಡಲಾಗಿದೆ. ಹೆಸರು ಮೊಳಕೆಯೊಡೆಯುವ ಹಂತದಲ್ಲಿ ಇಲಿ, ಮಿಡತೆ ಹಾಗೂ ಚಿಗರಿ ಹಾವಳಿಯಿಂದ ಶೇ.70ರಷ್ಟು ಬೆಳೆ ಹಾನಿಯಾಗಿದೆ. ಅಲ್ಲದೆ, ಈಗ ಹಳದಿ ರೋಗ ಕಾಣಿಸಿಕೊಂಡಿದ್ದರಿಂದ ಬೆಳೆ ಸಂಪೂರ್ಣ ಹಾಳಾಗಿದೆ. ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದಾರೆ. ಹಳದಿ ರೋಗ ವ್ಯಾಪಕವಾಗಿ ಹರಡುತ್ತಿದ್ದು, ಹತೋಟಿಗೆ ಬರುತ್ತಿಲ್ಲ. ಆದ್ದರಿಂದ, ಹೆಸರು ಬೆಳೆ ಹಾನಿಯ ಸಮೀಕ್ಷೆ ಕೈಗೊಂಡು, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

    ಮನವಿ ಸಲ್ಲಿಸಿದ ರೈತರು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಜಗದೀಶ ಹಾದಿಮನಿ ಅವರನ್ನು ಹಳದಿ ರೋಗ ಪೀಡಿತ ಜಮೀನುಗಳಿಗೆ ಭೇಟಿ ನೀಡುವಂತೆ ಒತ್ತಾಯಿಸಿದರು. ಆಗ, ಗಜೇಂದ್ರಗಡ ರಸ್ತೆಯ ಜಮೀನೊಂದಕ್ಕೆ ರೈತರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಧಿಕಾರಿ, ಹೆಸರು ಅಲ್ಪಾವಧಿ ಬೆಳೆಯಾಗಿದ್ದು, ಕಡ್ಡಾಯವಾಗಿ ಪ್ರತಿ ಕೆ.ಜಿ. ಬೀಜಕ್ಕೆ 3-4 ಮಿ.ಲೀ. ಇಮಿಡಾಕ್ರೊಪ್ರಿಡ್ ದ್ರಾವಣದಿಂದ ಬೀಜೋಪಚಾರ ಮಾಡಬೇಕು. ಉತ್ತಮ ಬೀಜಗಳನ್ನು ಬಿತ್ತನೆ ಮಾಡಬೇಕು. ಪ್ರಾರಂಭದ ಹಂತದಲ್ಲಿ ರೋಗಕ್ಕೆ ತುತ್ತಾಗುವ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ರೋಗದ ಹತೋಟಿಗೆ ಶೇ.5 ರಷ್ಟು ಬೇವಿನ ಕಷಾಯ ಅಥವಾ ನಿಮಾರಿನ್, ನಿಮಾಜಾಲ್/ನಿಂಬಿಸಿಡಿನ್, ನಿಂಬಿಕ್ಸ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಕೀಟನಾಶಕಗಳಾದ 1.7 ಮೀ.ಲೀ. ಡೈಮಿಥೊಯೊಟ್ ಅಥವಾ 0.5 ಮಿ.ಲೀ ಪಾಸ್ಪೋಮಿಡಾನ್ ಅಥವಾ 0.3 ಮಿ.ಲೀ ಇಮಿಡಾಕ್ಲೋಪ್ರಿಡ್ ಅಥವಾ 2.0 ಮಿ.ಲೀ ಟ್ರೆಯಾಜೊಫಾಸ್ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಣೆ ಮಾಡುವುದರಿಂದ ರೋಗ ಹರಡುವುದನ್ನು ತಡೆಯಬಹುದಾಗಿದೆ ಎಂದರು.

    ರೈತರಾದ ಬಾಳಪ್ಪ ಸೋಮಗೊಂಡ, ಶಿವನಗೌಡ ಕಡದಳ್ಳಿ, ರಾಜು ಜೋಗಿ, ಶರಣಪ್ಪ ಧರ್ವಯತ, ಚಂದ್ರು ಹೊನವಾಡ, ಬಸವರಾಜ ಪಾಟೀಲ, ವಿರುಪಾಕ್ಷಪ್ಪ ಲಕ್ಕನಗೌಡ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts