More

    ಬೆಳೆಹಾನಿ ಪರಿಹಾರ ಕೊಡಿಸಿ

    ಸವದತ್ತಿ, ಬೆಳಗಾವಿ: ಮೂರು ವರ್ಷ ಕಳೆದರೂ ಬೆಳೆಹಾನಿ ಪರಿಹಾರ ಸಿಕ್ಕಿಲ್ಲ. ಜಮೀನು ವಾಟ್ನಿ ಕುರಿತು ಗ್ರಾಮ ಲೆಕ್ಕಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತಾಲೂಕಿನ ರೈತರು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿ, ರೈತರ ಪಹಣಿಯಲ್ಲಿ ನೀರಾವರಿ ನಿಗಮದ ಹೆಸರನ್ನು ದಾಖಲಿಸಲಾಗಿದೆ. ಸಕ್ಕರೆ ಕಾರ್ಖಾನೆಯಲ್ಲಿ ತೂಕ ಮಾಡಿದಾಗ ಹಾಗೂ ಬೇರೆ ಕಡೆ ತೂಕ ಮಾಡಿಸಿದಾಗ ವ್ಯತ್ಯಾಸ ಬರುತ್ತಿದೆ ಎಂದು ರೈತರು ಆರೋಪಿಸಿದರು.

    ಪುರಸಭೆ ವ್ಯಾಪ್ತಿಯಲ್ಲಿ 256 ಮನೆಹಾನಿ 2019 ರಲ್ಲಿ ಅವುಗಳನ್ನು ದಾಖಲಿಸಲಾಗಿಲ್ಲ. ಜೆಇ ನಿರ್ಮಲಾ ನಾಯಕ ಅವರನ್ನು ಜಿಲ್ಲಾಧಿಕಾರಿ ಎದುರು ಜನ ತರಾಟೆಗೆ ತೆಗೆದುಕೊಂಡರು. ಚರಂಡಿ ಶುದ್ಧೀಕರಣ ಘಟಕ ಕಾಮಗಾರಿ ಅಪೂರ್ಣವಾದರೂ ಪುರಸಭೆಯಿಂದ ಹಣ ಪಾವತಿಸಲಾಗಿದೆ. ಈ ಕುರಿತು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ದೂರು ನೀಡಲಾಯಿತು. ಯಲ್ಲಮ್ಮ ದೇವಸ್ಥಾನದಲ್ಲಿ ಇಷ್ಟೊಂದು ಸಿಬ್ಬಂದಿ ಇದ್ದರೂ ದೇವಸ್ಥಾನ ಸ್ವಚ್ಛತೆ ಮರೀಚಿಕೆಯಾಗಿದೆ. ಮುಜರಾಯಿ ಇಲಾಖೆಯ ಎಸಿ ಯೊಂದಿಗೆ ಚರ್ಚಿಸಲಾಗುವುದು ಜಿಲ್ಲಾಧಿಕಾರಿ ನಿತೀಶ ಪಾಟೀಲ ತಿಳಿಸಿದರು.

    ಕೆಲ ವೈಯಕ್ತಿಕ ಅರ್ಜಿಗಳನ್ನು ನೇರವಾಗಿ ನಾಗರಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ನ್ಯಾಯ ಪಡೆಯಿರಿ. ಮನೆ ಹಾನಿ ಪರಿಹಾರ ಸಿಗದ ಅರ್ಜಿದಾರರಿಗೆ ಬಸವ ವಸತಿ ಯೋಜನೆ ಅಥವಾ ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಪರಿಹಾರ ಕಲ್ಪಿಸಲು ತಿಳಿಸಿದರು. ಎಸ್‌ಪಿ ಸಂಜೀವ ಪಾಟೀಲ, ತಹಸೀಲ್ದಾರ್ ಜಿ.ಬಿ.ಜಕ್ಕನಗೌಡರ, ಡಿವೈಎಸ್‌ಪಿ ರಾಮನಗೌಡ ಹಟ್ಟಿ, ಶ್ರೀಶೈಲ ಅಕ್ಕಿ, ಕಾಂಚನಾ ಅಮಠೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts