More

    ಬೆಳೆಹಾನಿ ಅಜರ್ಿ ದಾಖಲಿಸಲು ರೈತರ ಪರದಾಟ

    ಹುಲಸೂರು: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಸೋಯಾ, ಉದ್ದು, ಹೆಸರು, ತೊಗರಿ, ಕಬ್ಬು ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿದ್ದು, ಈ ಬಗ್ಗೆ ಬೆಳೆವಿಮೆ ಮಾಡಿರುವ ಕಂಪನಿಗಳಿಗೆ ಅಜರ್ಿ ಸಲ್ಲಿಸುವಂತೆ ಕೇಂದ್ರ ಸಚಿವ ಭಗವಂತ ಖೂಬಾ ಅವರು ಸೂಚನೆ ನೀಡಿದ್ದರಿಂದ ರೈತ ಸಂಪರ್ಕ ಕೇಂದ್ರದಲ್ಲಿ ಶುಕ್ರವಾರ ನೂಕುನುಗ್ಗಲು ಉಂಟಾಗಿತ್ತು.

    ಬೆಳೆ ವಿಮೆ ಪಡೆದಿರುವ ಕಂಪನಿಗಳು ಶುಕ್ರವಾರವೇ ಕೊನೇ ದಿನ ನೀಡಿದ್ದರಿಂದ ಹುಲಸೂರು, ದೇವನಾಳ, ಮಾಚನಾಳ, ಬೇಲೂರ, ಮುಚಳಂಬ, ತೊಗಲೂರು, ಹಾಲಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಬೆಳೆ ಹಾನಿಯಾದ ಅಜರ್ಿ ಸಲ್ಲಿಸಲು ಏಕಕಾಲಕ್ಕೆ ಆಗಮಿಸಿದ್ದರಿಂದ ಕೇಂದ್ರದ ಆವರಣ ಗದ್ದಲದ ಗೂಡಾಗಿತ್ತು.

    ಸಾಕಷ್ಟು ರೈತರಿಗೆ ಅಜರ್ಿ ಸಲ್ಲಿಸುವ ಮಾಹಿತಿ ಇಲ್ಲ. ಇನ್ವಸಲ್ ಸೋಂಪು ಕಂಪನಿಯವರು ಏಕಾಏಕಿ ಇಂದೇ ಕೊನೆ ದಿನ ಎಂದು ಹೇಳುತ್ತಿರುವುದು ರೈತರಲ್ಲಿ ಆತಂಕ ಉಂಟಾಗಿದೆ. ಜಿಲ್ಲಾಡಳಿತ ರೈತರ ಸಮಸ್ಯೆಯನ್ನು ಅರಿತು ದಿನಾಂಕ ಮುಂದೂಡಬೇಕು. ಎಲ್ಲ ರೈತರ ಬೆಳೆ ಹಾನಿಯಾಗಿದ್ದು, ಸಮೀಕ್ಷೆ ಮಾಡಿ ವಿಮೆ ಹಣ ಬಿಡುಗಡೆ ಮಾಡಬೇಕು ಎಂದು ರೈತರಾದ ಕೈಲಾಸ ಪಾರಶೆಟ್ಟಿ, ವಿಜಯಕುಮಾರ ಚಾಂಗಲೂರೆ, ರಾಯಪ್ಪ ಉದಾನೆ, ದೊಳಪ್ಪ ಚಿಲ್ಲಾಬಟ್ಟೆ, ಸಂಗಶೆಟ್ಟಿ ಮಾಶೆಟ್ಟೆ, ವಿಜಯಕುಮಾರ ಭುರೆ, ಜಗನ್ನಾಥ ತಂಬೋಳೆ, ಶಾಂತಕುಮಾರ ಜ್ಯೋತೆಪ್ಪ, ಬಸವರಾಜ ಪೊಲೀಸ್ಪಾಟೀಲ್ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts