More

    ಮತದಾನ ಹೆಚ್ಚಳಕ್ಕೆ ಎಲ್ಲರ ಸಹಕಾರ ಅಗತ್ಯ

    ಹುಲಸೂರು: ಕಳೆದ ಸಾರಿಗಿಂತ ಈ ಸಾರಿ ಜಿಲ್ಲೆಯಲ್ಲಿ ಮತದಾನ ಹೆಚ್ಚಳಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳೂ ಆದ ಜಿಲ್ಲಾ ಚುನಾವಣಾಧಿಕಾರಿ ಗೋವಿಂದರಡ್ಡಿ ಹೇಳಿದರು.

    ಪಟ್ಟಣದಲ್ಲಿ ಜಿಲ್ಲಾ ಆಡಳಿತದಿಂದ ಮತದಾನ ಜಾಗೃತಿಗಾಗಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ವಾಕಥಾನ್‌ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಮೇ ೭ರಂದು ಮತದಾನ ನಡೆಯಲಿದ್ದು, ಮತದಾರರು ರಾಜಕೀಯ ಪಕ್ಷಗಳು, ಮುಖಂಡರ ಯಾವುದೇ ಆಸೆ, ಆಮಿಷ, ಒತ್ತಡಗಳಿಗೆ ಒಳಗಾಗದೆ ಮತಗಟ್ಟೆ ಕೇಂದ್ರಗಳಿಗೆ ತೆರಳಿ ಹಕ್ಕು ಚಲಾಯಿಸಬೇಕು ಹಾಗೂ ಇತರರಿಗೂ ಅರಿವು ಮೂಡಿಸಬೇಕು ಎಂದು ಹೇಳಿದರು.

    ಜಿಲ್ಲೆಯ ಎಲ್ಲ ಇಲಾಖೆಗಳ ಸಿಬ್ಬಂದಿ ಮೊದಲು ಮತದಾನ ಮಾಡಬೇಕು. ತಮ್ಮ ಸುತ್ತಲಿನ ಪರಿಸರದಲ್ಲಿ ಮತದಾನ ಜಾಗೃತಿ ಮೂಡಿಸಬೇಕು . ೮೦ಪ್ರತಿಶತ ಮತದಾನ ಮಾಡುವ ಗುರಿ ಹೊಂದಿದ್ದು ಇದಕ್ಕೆ ಅಧಿಕಾರಿಗಳು ಸಹಕರಿಸಬೇಕು ಎಂದರು.

    ವಿವಿಧ ಇಲಾಖೆಗಳ ಸಿಬ್ಬಂದಿ ಸಮವಸ್ತ್ರದೊಂದಿಗೆ ಬೆಳಗ್ಗೆ ಪಟ್ಟಣದ ಅಲ್ಲಮಪ್ರಭು ಶೂನ್ಯ ಪೀಠದ ಆವರಣದಿಂದ ಆರಂಭವಾದ ಜನಜಾಗೃತಿ ಜಾಥಾ ಪ್ರಮುಖ ರಸ್ತೆಗಳ ಮೂಲಕ ಜೆಬಿಕೆ ಶಾಲಾ ಆವರಣದವರೆಗೆ ನಡೆಯಿತು.

    ವಾಕಥಾನ್ ಬಳಿಕ ಇಕ್ಬಾಲ್ ಪಟೇಲ್ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕ್ರಿಕೆಟ್ ಪಂದ್ಯಾವಳಿ ನಡೆಸಿ ವಿನೂತನ ರೀತಿಯಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಿದರು.

    ಎಸ್‌ಪಿ ಚನ್ನಬಸವಣ್ಣ ಲಂಗೋಟಿ, ಡಿಎಚ್‌ಒ ಡಾ.ನಿರಗುಡೆ, ಸಹಾಯಕ ಆಯುಕ್ತ ಅನಿಲಕುಮಾರ ಡವಳಗಿ, ತಹಸೀಲ್ದಾರ್ ರಮೇಶ ಬಾಬು, ತಾಪಂ ಇಒ ಮಹಾದೇವ ಬಂಬುಳಗೆ, ಸಿಡಿಪಿಒ ಗೌತಮ ಸೇರಿ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts