More

    ಬೆಳಗಾವಿಯಲ್ಲಿ ಬ್ಯಾನರ್ ಭರಾಟೆ!

    ಬೆಳಗಾವಿ: ಇಲ್ಲಿನ ಸುವರ್ಣಸೌಧದ ವಿಧಾನಸಭೆ ಸಭಾಂಗಣದಲ್ಲಿ ಮಹನೀಯರ ಭಾವಚಿತ್ರಗಳ ಅನಾವರಣ ಮಾಡಿರುವ ಸುದ್ದಿ ರಾಜ್ಯದೆಲ್ಲೆಡೆ ಸದ್ದು ಮಾಡುತ್ತಿದೆ. ಮತ್ತೊಂದೆಡೆ ಬೆಳಗಾವಿ ನಗರದಲ್ಲಿ ರಾಜಕೀಯ ಮುಖಂಡರ ಬ್ಯಾನರ್‌ಗಳ ಭರಾಟೆ ಜೋರಾಗಿದೆ.

    ಸಾರ್ವತ್ರಿಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ಓಲೈಕೆಗೆ ಟಿಕೆಟ್ ಆಕಾಂಕ್ಷಿಗಳು ಇನ್ನಿಲ್ಲದ ಪ್ರಯತ್ನ ನಡೆಸಿದ್ದು, ಸಚಿವ ಸಂಪುಟ ಸೇರಿ ಮೂರು ರಾಜಕೀಯ ಪಕ್ಷಗಳ ನಾಯಕರಿಗೆ ಆಕಾಂಕ್ಷಿಗಳು ಅಧಿವೇಶನಕ್ಕೆ ಸ್ವಾಗತ ಕೋರಿರುವ ಬ್ಯಾನರ್‌ಗಳು ರಾರಾಜಿಸುತ್ತಿವೆ.

    ನಗರ ಪ್ರವೇಶಿಸುವ ಗಾಂಧಿ ನಗರದಿಂದ ಸಂಕಮ್ ಹೋಟೆಲ್, ಕೋಟೆ ಕೆರೆಯ ಅಶೋಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನಮ್ಮ ವೃತ್ತ, ಅಂಬೇಡ್ಕರ್ ರಸ್ತೆ ಹಾಗೂ ಕೊಲ್ಲಾಪುರ ವೃತ್ತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾನರ್‌ಗಳನ್ನು ಅಳವಡಿಸಲಾಗಿದ್ದು, ನಗರದ ಪ್ರಮುಖ ರಸ್ತೆಗಳ ಎರಡು ಬದಿಗಳಲ್ಲಿ ತಲೆ ಎತ್ತಿವೆ.

    ಬೆಳಗಾವಿ ನಗರ ಸೇರಿ ಜಿಲ್ಲೆಯ ವಿವಿಧ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಶಾಸಕರ ನೂರಾರು ಬ್ಯಾನರ್‌ಗಳನ್ನು ನಗರದಲ್ಲಿ ಅಳವಡಿಸಿದ್ದರೂ ಮಹಾನಗರ ಪಾಲಿಕೆಯಿಂದ ಯಾರೊಬ್ಬರೂ ಅನುಮತಿ ಪಡೆದಿಲ್ಲ. ಅಷ್ಟೇ ಅಲ್ಲದೆ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚಿಸುವ ಬದಲಿಗೆ ಬ್ಯಾನರ್ ಅಳವಡಿಸಿ ನಾಯಕರು ಎಂದು ಗುರುತಿಸಿಕೊಳ್ಳುತ್ತಿರುವುದು ದುರಂತವೇ ಸರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಜ್ಞಾವಂತ ನಾಗರಿಕರು ಪಾಲಿಕೆ ಅಧಿಕಾರಿಗಳಿಗೆ ಕರೆ ಮಾಡಿ ತೆರವು ಮಾಡಲು ಒತ್ತಾಯಿಸುತ್ತಿದ್ದು, ಪ್ರಭಾವಿಗಳು ಮಾಡುವ ತಪ್ಪು ತಮಗೆ ಕಾಣುವುದಿಲ್ಲವೇ ಎಂದು

    ಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಪಾಲಿಕೆ ಅಧಿಕಾರಿಗಳಿಗೆ ಅವರ ಬ್ಯಾನರ್‌ಗಳನ್ನು ತೆರವುಗೊಳಿಸುವುದು ಅನಿವಾರ್ಯವಾಗಿದ್ದು, ಶಾಸಕರು ಸೇರಿ ಎಲ್ಲ ಪಕ್ಷದ ಮುಖಂಡರ ಬ್ಯಾನರ್‌ತೆಗೆಯುವ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts