More

    ಬೆಲ್ಲದ ಬಾಗೇವಾಡಿಗೆ ಹೊಸ ಹೊಳಪು!

    ಹುಕ್ಕೇರಿ: ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮವು ಸ್ವಚ್ಛತೆ ಕಾಪಾಡುವಿಕೆ ಹಾಗೂ ಕಸ ನಿರ್ವಹಣೆಯಲ್ಲಿ ಉತ್ತಮ ಪ್ರಗತಿ ಹೊಂದಿದ್ದು, ಕತ್ತಿ ಸಹೋದರರ ಮಾರ್ಗದರ್ಶನದಲ್ಲಿ ಸಮಗ್ರ ಅಭಿವೃದ್ಧಿಯತ್ತ ದಾಪುಗಾಲಿಟ್ಟಿದೆ. ನ ಮತ್ತು ದ್ರವ ತ್ಯಾಜ್ಯವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುತ್ತಿರುವ ಗ್ರಾಮದಲ್ಲಿ ಇದೀಗ ಬೀದಿ ದೀಪ, ಸುಸಜ್ಜಿತ ರಸ್ತೆ, ಚರಂಡಿ ಕಾಮಗಾರಿ ಕೈಗೊಳ್ಳುವ ಮೂಲಕ ಗ್ರಾಮದ ಸೌಂದರ್ಯ ಇಮ್ಮಡಿಗೊಂಡಿದೆ.


    ಅರಣ್ಯ, ಆಹಾರ ಇಲಾಖೆ ಸಚಿವ ಉಮೇಶ ಕತ್ತಿ ಹಾಗೂ ಬಿಡಿಸಿಸಿ ಬ್ಯಾಂಕ್​ ಅಧ್ಯ ರಮೇಶ ಕತ್ತಿ ಅವರ ತವರು ಗ್ರಾಮವಾದ ಬೆಲ್ಲದ ಬಾಗೇವಾಡಿ ಗ್ರಾಮ ಪಂಚಾಯಿತಿಯು ಸರ್ಕಾರ ಕೊಡಮಾಡುವ ಗಾಂಧಿ ಗ್ರಾಮ ಪುರಸ್ಕಾರವನ್ನು 3 ಬಾರಿ ಪಡೆದು ಹ್ಯಾಟ್ರಿಕ್​ ಸಾಧನೆ ಮಾಡಿದೆ. ಕಳೆದ ವರ್ಷ 4ನೇ ಬಾರಿ ಪುರಸ್ಕಾರಕ್ಕೆ ಅರ್ಹತೆ ಪಡೆದರೂ ಕರೊನಾ ನಿಮಿತ್ತ ಪ್ರಶಸ್ತಿ ವಿತರಿಸಿಲ್ಲ. 4 ಬಾರಿ ಪ್ರಶಸ್ತಿಗೆ ಭಾಜನವಾಗಲು ಗ್ರಾಪಂನ ಅತ್ಯುತ್ತಮ ಆಡಳಿತವೇ ಕಾರಣ.

    ಗ್ರಾಮ ವಿಕಾಸ ಸಮಿತಿ ಮಾರ್ಗದರ್ಶಕ ರಮೇಶ ಕತ್ತಿ ನೇತೃತ್ವದಲ್ಲಿ ಮತ್ತು ಸಚಿವ ಉಮೇಶ ಕತ್ತಿ ಮಾರ್ಗದರ್ಶನದಲ್ಲಿ ಮುಂಬರುವ 5 ದಶಕಗಳಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಮದ ಜನಸಂಖ್ಯೆಗನುಗುಣವಾಗಿ ರಸ್ತೆ ಅಗಲೀಕರಣ, ಸಮರ್ಪಕ ತ್ಯಾಜ್ಯ ನಿರ್ವಹಣೆ, ಚರಂಡಿ ವ್ಯವಸ್ಥೆ, ಬೀದಿ ದೀಪಗಳ ಅಳವಡಿಕೆ ಕಾಮಗಾರಿ ಕೈಗೊಂಡಿದ್ದಾರೆ.

    ಲೋಕೋಪಯೋಗಿ ಇಲಾಖೆಯಿಂದ 1 ಕೋಟಿ ರೂ. ವೆಚ್ಚದಲ್ಲಿ ಗ್ರಾಮದ ಸುತ್ತುವರಿಯುವ ಚಕ್ರಿರಸ್ತೆ, ಟಪ್ರಭಾ ರಸ್ತೆ ಸಂಪರ್ಕಿಸುವ ಸಿ.ಸಿ ರಸ್ತೆ ನಿರ್ಮಿಸಿ ಎರಡೂ ಬದಿಗೆ 52 ಬೀದಿ ದೀಪ ಅಳವಡಿಸಿದ್ದಾರೆ. ಅವುಗಳನ್ನು ಗ್ರಾಮದ ವಿರಕ್ತಮಠದ ಶಿವಾನಂದ ಮಹಾಸ್ವಾಮಿಗಳು, ಪಂಚಾಯತಿ ಅಧ್ಯ, ಉಪಾಧ್ಯರು ಮತ್ತು ಸದಸ್ಯರು ಹಾಗೂ ಮುಖಂಡರ ಸಮ್ಮುಖದಲ್ಲಿ ಜು.4ರಂದು ರಾತ್ರಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

    ಗ್ರಾಮ ಅಥವಾ ಪಟ್ಟಣ ಸುಂದರವಾಗಿಸಲು ಸಚಿವ ಉಮೇಶ ಕತ್ತಿ ಅವರು ಹಲವು ಯೋಜನೆ ಅನುಷ್ಠಾನಕ್ಕೆ ತಂದಿದ್ದಾರೆ. ಆದರೆ, ಗ್ರಾಮ ಸುಂದರವಾಗಿಡುವಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಅವಶ್ಯ.


    ಬೆಲ್ಲದ ಬಾಗೇವಾಡಿಯಲ್ಲಿ ಸ್ಥಳಿಯರು ಹಾಗೂ ಪರವೂರಿನಿಂದ ಆಗಮಿಸುವವರು ಎಲ್ಲೆಂದರಲ್ಲಿ ವಾಹನ ಪಾರ್ಕ್​ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು. ಬೀದಿ ಬದಿ ಅಂಗಡಿಕಾರರು ರಸ್ತೆ ಅತಿಕ್ರಮಣ ಮಾಡುವುದನ್ನು, ಜನರು ಚರಂಡಿಯಲ್ಲಿ ಪ್ಲಾಸ್ಟಿಕ್​ ಎಸೆಯುವುದನ್ನು ನಿಲ್ಲಿಸಬೇಕು. ಹಾಗಾದಾಗ ಸ್ವಚ್ಛ ಗ್ರಾಮಗಳ ಕನಸು ಸಾಕಾರವಾಗುತ್ತದೆ. ಪ್ರತಿಯೊಬ್ಬರೂ ಜವಾಬ್ದಾರಿ ಅರಿತು ಗ್ರಾಪಂನೊಂದಿಗೆ ಕೈಜೋಡಿಸಬೇಕು.
    | ರಮೇಶ ಕತ್ತಿ ಬಿಡಿಸಿಸಿ ಬ್ಯಾಂಕ್​ ಅಧ್ಯ

    ಹುಕ್ಕೇರಿ ೇತ್ರದಲ್ಲಿ ಯೋಜನೆ ಅನುಷ್ಠಾನಗೊಳಿಸಲು ಸಚಿವರು ತಾಲೂಕಾಡಳಿತಕ್ಕೆ ಎಲ್ಲ ಸಹಕಾರ, ಮಾರ್ಗದರ್ಶನ ನೀಡುವ ಮೂಲಕ ಬೆಂಬಲಿಸುತ್ತಾರೆ. ಇದರಿಂದ ಹುಕ್ಕೇರಿಯು ರಾಜ್ಯದಲ್ಲಿ ಮಾದರಿ ಕ್ಷೇತ್ರವಾಗಿ ಗುರುತಿಸಿಕೊಂಡಿದೆ.
    |ಉಮೇಶ ಸಿದ್ನಾಳ, ಹುಕ್ಕೇರಿ ತಾಪಂ ಇಒ

    ಬೆಲ್ಲದ ಬಾಗೇವಾಡಿ ಗ್ರಾಮದ ಅಭಿವೃದ್ಧಿ ಕಾರ್ಯಗಳಲ್ಲಿ ಕತ್ತಿ ಸಹೋದರರ ಕೊಡುಗೆ ಇದೆ. ಅವರ ರ್ನಿಣಯಗಳನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ಗ್ರಾಮದ ಸರ್ವತೋಮುಖ ಏಳ್ಗೆಗೆ ಸಹಕರಿಸುತ್ತಿದ್ದೇವೆ.
    |ಸಿದ್ಲಿಂಗಯ್ಯ ಕಡಹಟ್ಟಿ, ಗ್ರಾಪಂ ಸದಸ್ಯ

    | ಬಾಬು ಸುಂಕದ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts