More

    ಬೆಟ್ಕುಳಿ ಆಮ್ಲಜನಕ ಘಟಕಕ್ಕೆ ಸಚಿವರ ಭೇಟಿ

    ಗೋಕರ್ಣ: ಬೆಟ್ಕುಳಿಯಲ್ಲಿರುವ ಆಮ್ಲಜನಕ ಮರುಪೂರಣ ಘಟಕ ಪದ್ಮಾವತಿ ಇಂಡಸ್ಟ್ರಿಯಲ್ ಗ್ಯಾಸಸ್​ಗೆ ಕುವೈಟಿನಿಂದ ಬಂದ 20 ಕೆಎಲ್ ಸಾಮರ್ಥ್ಯದ ಆಮ್ಲಜನಕದ ಟ್ಯಾಂಕರ್​ಅನ್ನು ಮಂಗಳವಾರ ಸಚಿವ ಶಿವರಾಮ ಹೆಬ್ಬಾರ ವೀಕ್ಷಿಸಿದರು. ರಾಜ್ಯಕ್ಕೆ ಬಂದ 4 ಟ್ಯಾಂಕರ್​ಗಳ ಪೈಕಿ ಒಂದು ಟ್ಯಾಂಕ್​ಅನ್ನು ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಸೇರಿ ಸರ್ಕಾರ ಒದಗಿಸಿದೆ. ಇದೇ ವೇಳೆ ಸಚಿವರು ಆಮ್ಲಜನಕ ಮರುಪೂರಣ ಘಟಕದ ವಿವಿಧ ವಿಭಾಗಕ್ಕೆ ಭೇಟಿಯಿತ್ತು ಕಾರ್ಯ ನಿರ್ವಹಣೆಯನ್ನು ಪರಿಶೀಲಿಸಿದರು. ಈ ವೇಳೆ ಶಾಸಕ ದಿನಕರ ಶೆಟ್ಟಿ, ವಿಭಾಗೀಯ ಅಧಿಕಾರಿ ಅಜಿತ ಎಂ., ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ತಾಪಂ ಸದಸ್ಯ ಮಹೇಶ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ರಮೇಶ ಪ್ರಸಾದ,ಸಿಪಿಐ ಶಿವಪ್ರಸಾದ ನಾಯ್ಕ,ಪಿಎಸ್​ಐ ನವೀನ ನಾಯ್ಕ ಮುಂತಾದವರಿದ್ದರು.

    ಮನವಿ: ಗೋಕರ್ಣ ಭಾಗದ ಆರು ಪಿಎಚ್​ಸಿಗಳಿಗೆ ಕಳೆದ ಅನೇಕ ದಿನಗಳಿಂದ ಕೊವಿಡ್ ಲಸಿಕೆ ಪೂರೈಕೆ ಇಲ್ಲದೆ ಈಗಾಗಲೇ ಮೊದಲ ಡೋಸ್ ಪಡೆದ ನೂರಾರು ಜನರ ಸಮಯ ಮಿತಿ ಮುಗಿಯುತ್ತ ಬಂದಿದೆ. ತಾಲೂಕು ಆಸ್ಪತ್ರೆಗೆ ಮಾತ್ರ ಲಸಿಕೆ ಒದಗಿಸಲಾಗುತ್ತಿದ್ದು ಗ್ರಾಮಾಂತರಕ್ಕೆ ಕೂಡ ಅವುಗಳನ್ನು ತ್ವರಿತವಾಗಿ ವಿತರಿಸುವಂತೆ ತಾಪಂ ಸದಸ್ಯ ಮಹೇಶ ಶೆಟ್ಟಿ ಮುಂತಾದವರು ಸಚಿವರಲ್ಲಿ ಮನವಿ ಮಾಡಿದರು. ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳ ಬಳಿ ರ್ಚಚಿಸಿ ಸಮಸ್ಯೆ ಬಗೆ ಹರಿಸಲಾಗುವುದು ಎಂದು ಶಿವರಾಮ ಹೆಬ್ಬಾರ ಭರವಸೆಯಿತ್ತರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts