More

    ಬೆಂಬಲ ಬೆಲೆ ಕಡಲೆ ಖರೀದಿ ಆರಂಭ

    ಬೆಳವಣಿಕಿ (ತಾ.ರೋಣ): ಸಮೀಪದ ಮಲ್ಲಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಶುಕ್ರವಾರ ಬೆಂಬಲ ಬೆಲೆಯಡಿ ಕಡಲೆ ಖರೀದಿ ಆರಂಭಿಸಲಾಯಿತು.

    ಪ್ರಗತಿಪರ ರೈತ ಶಂಕ್ರಣ್ಣ ಕಳಿಗೊಣ್ಣವರ ಸಾಂಕೇತಿಕವಾಗಿ ಕಡಲೆ ತೂಕ ಮಾಡಿದರು. ಕಳೆದ ತಿಂಗಳು 27ರಿಂದಲೇ ಮಲ್ಲಾಪೂರ ಸಹಕಾರಿ ಸಂಘದಲ್ಲಿ ಬೆಂಬಲ ಬೆಲೆಯಡಿ ಕಡಲೆ ಖರೀದಿ ಆರಂಭಿಸಲಾಗಿದೆ. ರೈತರು ಪಹಣಿ, ಆಧಾರ್​ಕಾರ್ಡ್, ಬ್ಯಾಂಕ್ ಪಾಸ್ ಬುಕ್ ನಕಲು ಪ್ರತಿಯೊಂದಿಗೆ ಸಂಘದ ಕಚೇರಿಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಸಂಘದ ಪದಾಧಿಕಾರಿಗಳು ಕೋರಿದ್ದಾರೆ.

    ತಾಲೂಕು ಕೃಷಿ ಸಮಾಜದ ಅಧ್ಯಕ್ಷ ಶಿವಣ್ಣ ಅರಹುಣಶಿ, ಸಂಘದ ಅಧ್ಯಕ್ಷ ಲಿಂಗರಾಜ ಪಾಟೀಲ, ಉಪಾಧ್ಯಕ್ಷ ಶ್ರೀಶೈಲಪ್ಪ ಸತ್ತಿಗೇರಿ, ರೈತರಾದ ಯಲ್ಲಪ್ಪಗೌಡ ಪಾಟೀಲ, ಮಲ್ಲಿಕಾರ್ಜುನ ದಾನರಡ್ಡಿ, ಸಿದ್ದನಗೌಡ ಪಾಟೀಲ, ಬಸವಂತಪ್ಪ ಶಿರೋಳ, ಬಿ.ಟಿ. ರಬ್ಬನಗೌಡ, ಅಶೋಕ ಉಗಲಾಟ, ಅಂದಪ್ಪ ಬಳಿಗೇರ, ನಾಗನಗೌಡ ಪಾಟೀಲ, ಸಂಗಮೇಶ ದಾನರಡ್ಡಿ, ಕಾರ್ಯನಿರ್ವಾಹಕ ಭರಮಗೌಡ ಹಿರೇಗೌಡ್ರ, ಬಾಬು ಮಾಸ್ತಿ, ಕುಮಾರ ಯಂಡಿಗೇರಿ, ಮನೋಜಗೌಡ ಪಾಟೀಲ, ಇತರರಿದ್ದರು.

    ಸರ್ಕಾರದ ಯೋಜನೆ ಸದುಪಯೋಗಪಡಿಸಿಕೊಳ್ಳಿ

    ಲಕ್ಷ್ಮೇಶ್ವರ: ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡಿ ಅವರಿಗಾಗುವ ನಷ್ಟ ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ರೈತರ ಫಸಲನ್ನು ಬೆಂಬಲಬೆಲೆಯಡಿ ಖರೀದಿಸುವ ಮೂಲಕ ರೈತರ ಹಿತ ಕಾಪಾಡುವ ಕಾರ್ಯ ಮಾಡಿದೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

    ಸಮೀಪದ ಯಳವತ್ತಿ ಗ್ರಾಮದಲ್ಲಿ ಬೆಂಬಲಬೆಲೆಯ ಕಡಲೆ ಖರೀದಿ ಕೇಂದ್ರಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ಸಿಂಎ ಬಿ.ಎಸ್. ಯಡಿಯೂರಪ್ಪನವರು ಎಲ್ಲ ಹಂತದಲ್ಲೂ ನೆರವಿಗೆ ನಿಲ್ಲುವ ರೈತ ನಾಯಕರಾಗಿದ್ದಾರೆ. ಪ್ರಸಕ್ತ ವರ್ಷ ಸಕಾಲಿಕವಾಗಿ ಹತ್ತಿ, ಶೇಂಗಾ. ಕಡಲೆ, ತೊಗರಿ ಸೇರಿ ಬಹುತೇಕ ಬೆಳೆಗಳನ್ನು ಬೆಂಬಲ ಬೆಲೆಯಡಿ ಖರೀದಿಸಲಾಗಿದೆ. ರೈತರಿಗಾಗಿ ಇರುವ ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸುತ್ತಿದೆ. ರೈತರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

    ಸಂಘದ ಕಾರ್ಯದರ್ಶಿ ಚಂದ್ರಶೇಖರ ಸೊರಟೂರ ಮಾತನಾಡಿ, ರೈತರು 1ಎಕರೆಗೆ 3 ಕ್ವಿಂಟಾಲ್ ಅಥವಾ 1 ಖಾತೆಗೆ ಗರಿಷ್ಠ 10 ಕ್ವಿಂಟಾಲ್ ಕಡಲೆ ತಂದು ಮಾರಾಟ ಮಾಡಬಹುದು. ಪ್ರತಿ ಕ್ವಿಂಟಾಲ್​ಗೆ 4875 ರೂ. ದರದಲ್ಲಿ ಖರೀದಿ ಮಾಡಲಾಗುವುದು. ರೈತರು ಆಧಾರ್ ಕಾರ್ಡ್, ಎಫ್​ಐಡಿ ನೋಂದಾಯಿತ ಉತಾರ, ಬ್ಯಾಂಕ್ ಪಾಸ್ ಬುಕ್ ತರಬೇಕು ಎಂದರು.

    ಈ ವೇಳೆ ತಾಪಂ ಅಧ್ಯಕ್ಷೆ ಹುಸೇನಬಿ ಅತ್ತಿಗೇರಿ, ಗ್ರಾಪಂ ಅಧ್ಯಕ್ಷೆ ಜೈತುನಬಿ ಗಮ್ಮಣ್ಣವರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಹಾದೇವಪ್ಪ ಒಣರೊಟ್ಟಿ, ಎಪಿಎಂಸಿ ಉಪಾಧ್ಯಕ್ಷ ರಾಮಣ್ಣ ಕಪಲಟ್ಟಿ, ಗ್ರಾಪಂ ಉಪಾಧ್ಯಕ್ಷ ಕುಬೇರಪ್ಪ ಶಿಗ್ಲಿ, ಎಪಿಎಂಸಿ ಸದಸ್ಯ ವೆಂಕರೆಡ್ಡಿ ಹೊಂಬಳ, ಬಸಪ್ಪ ಪಾಪಲಟ್ಟಿ, ಫಕ್ಕೀರಪ್ಪ ಹೂಗಾರ, ಜಿ.ಬಿ.ಹೊಂಬಳ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts