More

    ಬುದ್ಧಿ ವಿಕಸನಕ್ಕೆ ಶರಣರ ವಚನಗಳು ದಾರಿದೀಪ

    ಪಂಚನಹಳ್ಳಿ: ಶರಣರ ಸಂದೇಶಗಳನ್ನು ಜೀವನದಲ್ಲಿ ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಬೇಕೇ ಹೊರತು ವೇದಿಕೆ ಭಾಷಣಕ್ಕೆ ಸೀಮಿತಗೊಳಿಸಬಾರದು ಎಂದು ಬೆಂಗಳೂರು ಎಂಇಎಸ್ ಕಾಲೇಜಿನ ಉಪನ್ಯಾಸಕ ಡಾ. ಕೆ.ಬಿ.ಲೋಕೇಶ್ವರಪ್ಪ ಹೇಳಿದರು.

    ಕುಂಕನಾಡು ಗ್ರಾಮದಲ್ಲಿ ಶನಿವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮತ್ತು ಕಡೂರಿನ ಯಳನಡು ಮಹಾಸಂಸ್ಥಾನದಿಂದ ಆಯೋಜಿಸಿದ್ದ ಶ್ರಾವಣ ಸಂಜೆ ಶರಣ ಸಂದೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಹೊಸ ಹೊಸ ಪರಿಕಲ್ಪನೆಗಳನ್ನು ಶರಣರು ಹುಟ್ಟುಹಾಕಿದರು. ಮನುಷ್ಯನ ವಿಶೇಷ ಶಕ್ತಿಯಾದ ಬುದ್ಧಿಯನ್ನು ವಿಕಸನ ಮಾಡಲು, ಅಂತಃಸತ್ವ, ತತ್ವಗಳನ್ನು ಪರಿಚಯಿಸಲು ಶರಣರು ಪ್ರಯತ್ನಿಸಿದರು. ತನ್ನೊಳಗಿನ ಸತ್ಯವನ್ನು ಅರಿತುಕೊಂಡು ಜೀವನಕ್ಕೆ ಮಾರಕವಾದ ಸಂಗತಿಗಳಿಂದ ಹೊರಬರುವ ಮಾರ್ಗವನ್ನು ಶರಣರು ಹೇಳಿಕೊಟ್ಟರು. ಇದನ್ನೇ ಶರಣರು ಸತ್ಯಶೋಧನೆ ಎಂದಿದ್ದಾರೆ ಎಂದು ತಿಳಿಸಿದರು.

    ಮುಖಂಡ ಕೆ.ಎಸ್.ನಾಗರಾಜ್ ಮಾತನಾಡಿ, ಶರಣರ ವಿಚಾರಗಳನ್ನು ಜನರಿಗೆ ತಲುಪಿಸಲು ಶ್ರಾವಣ ಸಂಜೆ ಕಾರ್ಯಕ್ರಮ ಸಹಕಾರಿ. ಶ್ರಾವಣ ಮಾಸದಲ್ಲಿ ಧನಾತ್ಮಕ ಗುಣವಿರುತ್ತದೆ ಎಂಬ ನಂಬಿಕೆಯಿದೆ. ಇಂತಹ ಸಂದರ್ಭ ಬದುಕಿಗೆ ದಾರಿದೀಪವಾದ ಶರಣರನ್ನು ಸ್ಮರಿಸುವುದು ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು.

    ಶರಣ ಸಾಹಿತ್ಯ ಪರಿಷತ್ ಹಿರಿಯ ಸದಸ್ಯ ಕೆ.ಮಹೇಶ್ವರಪ್ಪ, ತಾಪಂ ಮಾಜಿ ಅಧ್ಯಕ್ಷ ಕೆ.ಎಂ.ಬಸವರಾಜಪ್ಪ, ಗ್ರಾಪಂ ಅಧ್ಯಕ್ಷೆ ಚಂದ್ರಕಲಾ, ಉಪಾಧ್ಯಕ್ಷ ಡಿ.ಹರೀಶ್, ಸದಸ್ಯೆ ರತ್ನಮ್ಮ, ಶಿಲ್ಪಿ ಇ.ಓಂಕಾರಮೂರ್ತಿ, ಕೆ.ವಿರೂಪಾಕ್ಷಪ್ಪ, ಎಂ.ಆರ್.ಪ್ರಕಾಶ್, ಎ.ಆರ್.ಆನಂದ್, ಜಗದೀಶ್ವರಾಚಾರ್, ಯಗಟಿ ಸತೀಶ್, ವೈ.ಜೆ.ಸತೀಶ್ ಸಣ್ಣಪ್ಪ, ಎಂ.ಎನ್.ಜಗದೀಶ್, ರಾಘವೇಂದ್ರ ಇತರರಿದ್ದರು.

    ನೂರಾರು ಶರಣರನ್ನು ಹೊಂದಿದ್ದ ಸಂಸತ್ತನ್ನು ಜಗತ್ತಿಗೆ ಪರಿಚಯಿಸಿದವರು ಬಸವಣ್ಣ. ಬಸವಣ್ಣನ ವಿಚಾರಧಾರೆಗಳು ಜಗತ್ತಿನ ಮೂಲೆ ಮೂಲೆಗೆ ತಲುಪಿದ್ದರೂ ಭಾರತದಲ್ಲಿ ಮಾತ್ರ ಅವುಗಳನ್ನು ಅನುಸರಿಸುತ್ತಿರುವವರ ಕೊರತೆ ಇದೆ. ವಚನಗಳ ಮೂಲಕ ಹೊಸ ಸಾಹಿತ್ಯ ರಚನೆಗೆ ಬಸವಣ್ಣ ನಾಂದಿ ಹಾಡಿದರು. ಜಾತಿ ವ್ಯವಸ್ಥೆಯನ್ನು ಮೀರಿದ ಲಿಂಗಾಯತ ಧರ್ಮವನ್ನು ಜಾರಿಗೆ ತಂದರು. ಇಷ್ಟಲಿಂಗ ಪೂಜೆಯನ್ನು ಪರಿಚಯಿಸಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts