More

    ಶರಣರ ಹಿತಚಿಂತನೆಗಳಿಂದ ಉತ್ತಮ ಸಮಾಜ ನಿರ್ಮಾಣ

    ಯಲಬುರ್ಗಾ: ತ್ರಿವಿಧ ದಾಸೋಹ ಸೇವೆಯಲ್ಲಿ ಮಠ ಮಾನ್ಯಗಳ ಕೊಡುಗೆ ಅಪಾರ ಎಂದು ಸಂಸ್ಥಾನ ಹಿರೇಮಠ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

    ಇದನ್ನೂ ಓದಿ: ಶರಣರ ಸತ್ಸಂಗದಿಂದ ಒತ್ತಡದ ಬದುಕಿಗೆ ನೆಮ್ಮದಿ ಪ್ರಾಪ್ತಿ

    ಪಟ್ಟಣದ ಮೊಗ್ಗಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಶ್ರೀಧರ ಮುರಡಿ ಹಿರೇಮಠದ ಪೀಠಾಧಿಪತಿ ಶ್ರೀ ಬಸವಲಿಂಗೇಶ್ವರ ಸ್ವಾಮಿಗಳ 22ನೇ ವರ್ಷದ ಪೀಠಾರೋಹಣ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು.

    ಶರಣರ ಹಿತಚಿಂತನೆ ಮೈಗೂಡಿಸಿಕೊಳ್ಳುವುದರಿಂದ ಸಮಾಜ ಉತ್ತಮ ರೀತಿಯಲ್ಲಿ ನಡೆಯಲು ಸಾಧ್ಯ. ಪ್ರತಿಯೊಬ್ಬರೂ ಜೀವನದಲ್ಲಿ ದಾನ, ಧರ್ಮ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಧರ್ಮ ಜಾಗೃತಿ, ಸಮಾಜದ ಒಳಿತಿಗೆ ಮಠಗಳು ಸೇವೆ ಸಲ್ಲಿಸುತ್ತಾ ಬಂದಿವೆ.

    ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಕಾಯಕಯೋಗಿಗಳಾಗಿ ಸಮಾಜಮುಖಿ ಕಾರ್ಯ ಕೈಗೊಳ್ಳುವ ಮೂಲಕ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದರು.
    ಹಂಪಸಾಗರದ ನವಲಿಹಿರೇಮಠದ ಅಭಿನವ ಶ್ರೀ ಶಿವಲಿಂಗೇಶ್ವರ ರುದ್ರಮುನಿ ಸ್ವಾಮೀಜಿ ಮಾತನಾಡಿ, ಶ್ರೀಧರ ಮುರಡಿ ಹಿರೇಮಠ ಭಕ್ತರ ಒಳಿತಿಗೆ ಅನೇಕ ಧಾರ್ಮಿಕ ಕಾರ್ಯಕ್ರಮ ನಡೆಸುತ್ತಾ ಬಂದಿದೆ.

    ಗೋಶಾಲೆ, ಶಿಕ್ಷಣ ಸಂಸ್ಥೆ, ಯೋಗಕೇಂದ್ರ ಹೀಗೆ ವಿವಿಧ ಸತ್ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು. ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ತುಲಾಭಾರ ಸೇವೆಯನ್ನು ಭಕ್ತರು ನೆರವೇರಿಸಿದರು. ಕುಕನೂರಿನ ಮುಂಡರಗಿ ಅನ್ನದಾನೇಶ್ವರ ಶಾಖಾ ಮಠದ ಡಾ.ಮಹಾದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

    ಪ್ರಮುಖರಾದ ಶಿವಕುಮಾರ ಭೂತೆ, ಭವರಸಿಂಗ್ ರಾಜಪುರೋಹಿತ, ಜೀವನಸಿಂಗ ರಾಜಪುರೋಹಿತ, ನಿಂಗಪ್ಪ ಹೂಗಾರ, ರಾಚಯ್ಯ ಸಾಲಿಮಠ, ವಿರೂಪಾಕ್ಷಪ್ಪ ಗದ್ದಿ, ಶರಣಪ್ಪ ಬನ್ನಿಕೊಪ್ಪ, ಹಮೀದಸಾಬ್ ಅತ್ತಾರ, ಲಿಂಗರಾಜ ಸುರಕೋಡ, ಶ್ರೀಶೈಲಪ್ಪ ಗೊಂಡಬಾಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts