More

    ಬೀದಿ ನಾಯಿಗಳ ಹಸಿವು ನೀಗಿಸುತ್ತಿರುವ ಕಾಂಟ್ರ್ಯಾಕ್ಟರ್

    ಹುಬ್ಬಳ್ಳಿ: ಲಾಕ್ ಡೌನ್​ನಿಂದ ಮುಚ್ಚಿರುವ ಹೋಟೆಲ್​ಗಳಿಂದಾಗಿ ಬೀದಿ ನಾಯಿಗಳು ತಿನ್ನಲು ಆಹಾರ ಇಲ್ಲದೆ ಪರದಾಡುತ್ತಿವೆ. ರಸ್ತೆ ಬದಿಯ ಡಬ್ಬಾ ಅಂಗಡಿಗಳು, ಹೋಟೆಲ್ ಗಳಲ್ಲಿನ ತಿಂಡಿ, ತಿನಿಸುಗಳೇ ಬೀದಿ ನಾಯಿಗಳ ಹಸಿವು ನೀಗಿಸುತ್ತಿದ್ದAವು. ಆದರೆ ಕಳೆದ ಸುಮಾರು ಒಂದು ತಿಂಗಳಿನಿಂದ ಮುಚ್ಚಿರುವ ಹೋಟೆಲ್ ನಿಂದಾಗಿ ಬೀದಿ ನಾಯಿಗಳಿಗೆ ತಿನ್ನಲು ಆಹಾರ ಇಲ್ಲದಂತಾಗಿದೆ.

    ಇಂತಹ ಪರಿಸ್ಥಿತಿಯಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಮೂಲಕ ಅವುಗಳ ಹಸಿವು ಇಂಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಹುಬ್ಬಳ್ಳಿ ಕೇಶ್ವಾಪುರದ ನಕ್ಷತ್ರ ಕಾಲನಿ ನಿವಾಸಿ ಇಲೆಕ್ಟ್ರಿಕಲ್ ಮತ್ತು ಸಿವಿಲ್ ಕಾಂಟ್ರ್ಯಾಕ್ಟರ್ ನಿಖಿಲೇಶ ಕುಂದಗೋಳ.

    ನಿತ್ಯ ಸಂಜೆ 4ರಿಂದ ರಾತ್ರಿ 11 ಗಂಟೆಯವರೆಗೆ ಕೇಶ್ವಾಪುರ ಕುಸುಗಲ್ ರಸ್ತೆಯಿಂದ ಸ್ಟೇಶನ್ ರಸ್ತೆ, ಗೋಕುಲ ರಸ್ತೆ, ಹಳೇಹುಬ್ಬಳ್ಳಿ, ವಿದ್ಯಾನಗರ, ಉಣಕಲ್ಲ, ಬೈರಿದೇವರಕೊಪ್ಪ ಸೇರಿದಂತೆ ವಿವಿಧೆಡೆ ಸಂಚರಿಸಿ 50ರಿಂದ 80 ನಾಯಿಗಳಿಗೆ ಆಹಾರ ಹಾಕುತ್ತಿದ್ದಾರೆ. ಪ್ಯುವರ್ ಪೆಟ್ ಎಂಬ ನಾಯಿಗಳಿಗೆ ಹಾಕುವ ಆಹಾರದ 100 ಪ್ಯಾಕೆಟ್​ಗಳನ್ನು ಅವರು ಸ್ವಂತ ಹಣ ಮತ್ತು ಸ್ನೇಹಿತರ ನೆರವಿನಿಂದ ಖರೀದಿಸಿ ನಾಯಿಗಳ ಹಸಿವು ಇಂಗಿಸಿದ್ದಾರೆ.

    ಈ ಮೊದಲು ರಸ್ತೆಗಳಲ್ಲಿ ತಿರುಗುವ ಜಾನುವಾರುಗಳಿಗೂ ಸ್ನೇಹಿತರೊಂದಿಗೆ ಸೇರಿ ಮೇವು ಹಾಕುತ್ತಿದ್ದೆವು. ಆದರೆ ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸಾಧ್ಯವಾಗಲಿಲ್ಲ. ತರಕಾರಿ ಮತ್ತು ಇತರ ಮಾರುಕಟ್ಟೆಯಿಂದ ಜಾನುವಾರುಗಳಿಗೆ ಆಹಾರ ಸಿಗುತ್ತಿದೆ. ನಾಯಿಗಳ ಪಾಡು ಕಂಡು, ಕೈಲಾದ ಮಟ್ಟಿಗೆ ಸ್ಪಂದಿಸುತ್ತಿದ್ದೇನೆ.
    | ನಿಖಿಲೇಶ ಕುಂದಗೋಳ
    ಕಾಂಟ್ರ್ಯಾಕ್ಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts