More

    ಬೀದರ್​ ಜಿಲ್ಲಾದ್ಯಂತ ಅದ್ದೂರಿ ರಾಮನವಮಿ

    ಬೀದರ್: ನಗರ ಸೇರಿದಂತೆ ಜಿಲ್ಲಾದ್ಯಂತ ಶ್ರೀ ರಾಮ ನವಮಿಯನ್ನು ಭಾನುವಾರ ಶ್ರದ್ಧೆ, ಭಕ್ತಿಯೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು. ಮರ್ಯಾದಾ ಪುರುಷೋತ್ತಮನಿಗೆ ವಿಶೇಷ ಪೂಜಾಭಿಷೇಕ ನಡೆದವು. ರಾಮನಿಗೆ ಮಾಡಿದ ಪುಷ್ಪಾಲಂಕಾರ ಕಣ್ಮನ ಸೆಳೆವ ಜತೆಗೆ ಭಕ್ತಿಭಾವ ಮೂಡಿಸಿತು. ಅಲ್ಲಲ್ಲಿ ಶ್ರೀರಾಮನ ಕುರಿತು ಉಪನ್ಯಾಸ ನಡೆದವು. ರಾಮಕಥಾ ಸಹ ಹೇಳಲಾಯಿತು.

    ನಗರದ ಪಾಪನಾಶ ರಸ್ತೆಯ ಶ್ರೀ ಸಮರ್ಥ ರಾಮ ಮಂದಿರದಲ್ಲಿ ಬೆಳಗ್ಗೆಯಿಂದ ತಡರಾತ್ರಿವರೆಗೆ ವಿವಿಧ ಕಾರ್ಯಕ್ರಮ ನಡೆದವು. ಇಲ್ಲಿರುವ ಆಕರ್ಷಕ ಶ್ರೀರಾಮ, ಲಕ್ಷ್ಮಣ ಹಾಗೂ ಸೀತಾ ಮಾತೆ ಮೂತರ್ಿಗಳಿಗೆ ಮಾಡಿದ ವಿಶೇಷ ಪುಷ್ಪ ಅಲಂಕಾರ ಕಣ್ಮನ ಸೆಳೆದವು. ವಿಶೇಷ ಪೂಜೆ, ಅಭಿಷೇಕ ನಡೆದವು. ಮಹಿಳಾ ಬಳಗದಿಂದ ಶ್ರೀರಾಮನಿಗೆ ತೊಟ್ಟಿಲು ಸೇವೆ ನಡೆಯಿತು.

    ಮಂದಿರಕ್ಕೆ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆದರು. ಎಲ್ಲರಿಗೂ ಅಚ್ಚುಕಟ್ಟಾಗಿ ದಿನವಿಡಿ ಮಹಾಪ್ರಸಾದ ವಿತರಣೆ ನಡೆಯಿತು. ನಗರದ ಹಳೆ ಭಾಗದ ವನವಾಸಿ ರಾಮ ಮಂದಿರದಲ್ಲೂ ಶ್ರದ್ಧೆ, ಭಕ್ತಿಯಿಂದ ನಾನಾ ಕಾರ್ಯಕ್ರಮ ನಡೆದವು.

    ಜೈ ಭಾರತ ಮಾತಾ ಸೇವಾ ಸಮಿತಿ ಹಾಗೂ ಶ್ರೀರಾಮ ಸೇನೆ ಜಿಲ್ಲಾ ಘಟಕದಿಂದ ಈ ಸಲ ಅದ್ದೂರಿ ಸಮಾರಂಭ ನಡೆಯಿತು. ಇಲ್ಲಿನ ಕೆಇಬಿ ಹತ್ತಿರದ ಶ್ರೀ ಹನುಮಾನ ಮಂದಿರದಲ್ಲಿ ಬೆಳಗ್ಗೆ ವಿಶೇಷ ಪೂಜೆ ಮತ್ತಿತರೆ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ರಾಮನ ತೊಟ್ಟಿಲು ಸಡಗರದಿಂದ ನೆರವೇರಿತು. ನಂತರ ಮಹಾಪ್ರಸಾದ ವಿತರಣೆ ಮಾಡಲಾಯಿತು.

    ಸಂಜೆ ನಗರದಲ್ಲಿ ಭವ್ಯ ಶೋಭಾಯಾತ್ರೆ ನಡೆಯಿತು. ಕೆಇಬಿ ಹತ್ತಿರ ಮೆರವಣಿಗೆಗೆ ಕೇಂದ್ರ ಸಚಿವ ಭಗವಂತ ಖೂಬಾ ಚಾಲನೆ ನೀಡಿದರು. ಮೆರವಣಿಗೆ ಹಳೇ ಬಸ್ ನಿಲ್ದಾಣ, ಅಂಬೇಡ್ಕರ್ ರಸ್ತೆ, ಬಸವೇಶ್ವರ ವೃತ್ತ, ಚೌಬಾರಾ, ಗವಾನ್ ಚೌಕ್ ಮೂಲಕ ಶ್ರೀ ರಾಮ ಮಂದಿರವರೆಗೆ ತೆರಳಿ ಕೊನೆಗೊಂಡಿತು.

    ಪ್ರಮುಖರಾದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ಬಿಡಿಎ ಅಧ್ಯಕ್ಷ ಬಾಬು ವಾಲಿ, ಕೆಎಸ್ಐಐಡಿಸಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಈಶ್ವರಸಿಂಗ್ ಠಾಕೂರ್, ಡಾ.ರಜನೀಶ್ ವಾಲಿ, ಡಿವೈಎಸ್ಪಿ ಸತೀಶ, ಸಿಪಿಐ ಕಪಿಲ್, ಪ್ರಮುಖರಾದ ಕಾಶೀನಾಥ ಬೆಲ್ದಾಳೆ, ಶಕುಂತಲಾ ಬೆಲ್ದಾಳೆ, ಸಿದ್ರಾಮಯ್ಯ ಸ್ವಾಮಿ, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ, ಜೈ ಭಾರತ ಮಾತಾ ಸೇವಾ ಸಮಿತಿ ಭಾಲ್ಕಿ ಅಧ್ಯಕ್ಷ ಪಪ್ಪು ಪಾಟೀಲ್, ಅಮೃತ ಪಾಟೀಲ್, ಬಸವರಾಜ ಬಂಬೂಳಗಿ, ಪ್ರತೀಕ್ ಠಾಕೂರ್, ಅಭಿನಯ, ರಾಜೇಶ್ವರಿ ಖ್ಯಾಮಾ, ಸಚಿನ್ ಗುರುನಗರ, ಆಕಾಶ ಕೊಡಗೆ, ಜಗನ್ನಾಥ ಕರಂಜೆ, ಶಂಕರ ಖ್ಯಾಮಾ, ಶಿವಕುಮಾರ, ದಿಲೀಪ ಪಾಟೀಲ್, ವಿಷ್ಟುಕಾಂತ, ವಿಶ್ವ ಶಂಭು, ಅಶ್ವಿನರಾಜ್, ನಾಗು ಜಾಬಶೆಟ್ಟಿ, ಸಂಗಮೇಶ, ಮಣಿ, ಗಣಪತಿ, ಭೀಮಣ್ಣ, ಮಲ್ಲು ಕೊಳಾರ್, ಆನಂದ, ಗುರು, ಸಾಗರ, ರಿಷಿ ಕೊಳಾರ್, ಆದಿತ್ಯ, ನಂದೇಶ, ರಾಮಲಿಂಗ, ವೀರಶೆಟ್ಟಿ ಕೊಳಾರ್, ಈಶ್ವರ, ರವಿ ಮಾಲ್ಕಪುರ, ಶಿವು, ಸಿದ್ದಪ್ಪ, ಸುರೇಶ ಇತರರು ಪಾಲ್ಗೊಂಡಿದ್ದರು.

    ಜೋರ್ದಾರ್ ಶೋಭಾಯಾತ್ರೆ: ಜೈ ಭಾರತ ಮಾತಾ ಸೇವಾ ಸಮಿತಿ ಮತ್ತು ಶ್ರೀರಾಮ ಸೇನೆಯಿಂದ ಭಾನುವಾರ ಸಂಜೆ ನಗರದಲ್ಲಿ ಜೋರ್ದಾರ್ ಶೋಭಾಯಾತ್ರೆ ನಡೆಯಿತು. ಅಲಂಕೃತ ವಾಹನದಲ್ಲಿ ರಾಮನ ಆಕರ್ಷಕ ಭಾವಚಿತ್ರ ಗಮನ ಸೆಳೆಯಿತು. ಭಗವಾ ಬಣ್ಣದಿಂದ ಮಾಡಿದ ಅಲಂಕಾರ ನೋಡುಗರಿಗೆ ಆಕರ್ಷಿಸಿತು. ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ಎಲ್ಲೆಡೆ ಕೇಸರಿ ಧ್ವಜಗಳು ರಾರಾಜಿಸಿದವು. ಡಿಜೆ ಸೌಂಡ್ ಮೇಲೆ ಯುವಕರು ಕುಣಿದು, ಕುಪ್ಪಳಿಸಿದರು. ಉದ್ದುದ್ದ ಭಗವಾ ಧ್ವಜ ಹಿಡಿದಿದ್ದ ಯುವ ಸಮೂಹ, ಇವುಗಳನ್ನು ಮೇಲಕ್ಕೆ ಹಾರಾಡಿಸುತ್ತ ಜೋಶ್ನಲ್ಲಿ ಮರೆವಣಿಗೆಯಲ್ಲಿ ಭಾಗಿಯಾದರು. ನಗರದಲ್ಲಿನ ವಿವಿಧ ಬಡಾವಣೆಗಳಲ್ಲೂ ರಾಮ ನವಮಿಯನ್ನು ಯುವಪಡೆ ಈ ಸಲ ಆಸಕ್ತಿಯಿಂದ ಆಯೋಜಿಸಿದ್ದು ವಿಶೇಷವೆನಿಸಿತು. ಮೆರವಣಿಗೆಗಳ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಆಯಕಟ್ಟಿನ ಜಾಗದಲ್ಲಿ ಹೆಚ್ಚಿನ ನಿಗಾ ಇರಿಸಲಾಗಿತ್ತು.

    ಆದರ್ಶ ಕಾಲನಿಯಲ್ಲಿ ಭವ್ಯ ಮೆರವಣಿಗೆ: ಬೀದರ್​ನ ಹಳೆಯ ಆದರ್ಶ ಬಡಾವಣೆ ಶ್ರೀ ಸಾಯಿ ಮಂದಿರದಲ್ಲಿ ರಾಮ ನವಮಿ ನಿಮಿತ್ತ ಶ್ರೀ ಸಾಯಿ ಸೇವಾ ಸಮಿತಿಯಿಂದ ರುದ್ರಾಭಿಷೇಕ, ಮಂಗಳಾರತಿ, ತೊಟ್ಟಿಲು ಕಾರ್ಯಕ್ರಮ ನಡೆದವು. ಸಂಜೆ ಬಡಾವಣೆಯಲ್ಲಿ ಆಕರ್ಷಕ ಪಲ್ಲಕ್ಕಿ ಮೆರವಣಿಗೆ ನಡೆಯಿತು. ರಾತ್ರಿ ಭಜನೆ ಕಾರ್ಯಕ್ರಮ ಮೂಲಕ ರಾಮ ನವಮಿಗೆ ತೆರೆ ಬಿತ್ತು. ಸೇವಾ ಸಮಿತಿ ಅಧ್ಯಕ್ಷ ಕಿರಣ ಹೊನ್ನಾ, ಪ್ರಮುಖರಾದ ಡಾ.ರೂಪೇಶ ಏಕಲಾರಕರ್, ಗಂಗಾಧರ ಕುಲಕರ್ಣಿ, ರಾಜು ನೀಲಾ, ಶ್ರೀನಿವಾಸ ಕುಲಕರ್ಣಿ, ಲಕ್ಷ್ಮೀ ಕೋಳಿ, ಮಾಲಾಶ್ರೀ ಪಾಟೀಲ್, ರಮೇಶ ಮೀನಕೇರಾ, ರಮೇಶ ಬಶೆಟ್ಟಿ, ಶಂಕರರಡ್ಡಿ ಚಿಟ್ಟಾ, ವೆಂಕಟೇಶ ಏಕಲಾರಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts