More

    ಸಂಪ್ರಾದಯ ಸಂಸ್ಕೃತಿಯ ಪ್ರತಿರೂಪ

    ಮಾನ್ವಿ: ಪಟ್ಟಣದ ನಗರೇಶ್ವರ ದೇವಸ್ಥಾನದಲ್ಲಿ ಬುಧವಾರ ರಾಮ ನವಮಿ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ಸೀತಾ ರಾಮ ಕಲ್ಯಾಣೋತ್ಸವ ಬೆಂಗಳೂರಿನ ಶ್ರೀನಿವಾಸ ಉತ್ಸವ ಬಳಗದ ವಾದಿರಾಜ ಆಚಾರ್ಯ ತಂಡದಿಂದ ಜರುಗಿತು.

    ವಾದಿರಾಜ ಆಚಾರ್ಯ ಮಾತನಾಡಿ, ಸೃಷ್ಠಿಯಲ್ಲಿ ಒಬ್ಬನೇ ಭಗವಂತ. ಭೂಮಿಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯವು ಕೂಡ ಅವನ ಅಣತಿಯಂತೆ ನಡೆಯುತ್ತದೆ. ದೇವರು ಭಕ್ತರಿಗೆ ಸನ್ಮಾರ್ಗ ತೋರಿ ಮೋಕ್ಷವನ್ನು ತೋರಿದ್ದಾನೆ ಎಂದರು. ಭಗವಂತ ಸಜ್ಜನರಿಗೆ ರಕ್ಷೆ, ದುರ್ಜನರಿಗೆ ಶಿಕ್ಷೆಯನ್ನು ನೀಡುತ್ತಾ ಬಂದಿದ್ದಾನೆ. ಸುಖ ಮತ್ತು ದುಃಖಗಳು ಒಂದೇ ಮನಸ್ಥಿತಿಯಲ್ಲಿ ತಗೆದುಕೊಳ್ಳಬೇಕು. ಸಂಪ್ರಾದಯ ಸಂಸ್ಕೃತಿಯ ಪ್ರತಿರೂಪವಾಗಿದೆ. ಆಚರಣೆಗಳನ್ನು ಪ್ರತಿಯೊಬ್ಬರು ಮರೆಯದೆ ಪಾಲಿಸಿಕೊಂಡು ಬರಬೇಕು ಎಂದು ತಿಳಿಸಿದರು.

    ಬೆಂಗಳೂರಿನ ಶ್ರೀಕಾಂತ ಭಟ್ ಹಾಗೂ ಸಂಗಡಿಗರು ಗಾಯನವನ್ನು ಪ್ರಸ್ತುತಪಡಿಸಿದರು. ಮಾನ್ವಿಯ ವಾಸವಿ ಭಜನಾ ಮಂಡಳಿಯ ಸದಸ್ಯರು ಶ್ರೀರಾಮ ಭಕ್ತಿ ಗೀತೆಗಳನ್ನು ಹಾಡಿದರು. ನಗರೇಶ್ವರ ಆರ್ಯವೈಶ್ಯ ಸಂಘದ ಗೌರವ ಅಧ್ಯಕ್ಷ ಶಿವಕುಮಾರ ಶೆಟ್ಟಿ, ಮಹಿಳಾ ಮಂಡಳಿಯ ಅಧ್ಯಕ್ಷೆ ಜಿ.ಲಕ್ಷ್ಮೀ ರಾಮಾಂಜನೇಯ್ಯ ಶೆಟ್ಟಿ, ಪ್ರಮುಖರಾದ ಆರ್.ಮುತ್ತುರಾಜ್ ಶೆಟ್ಟಿ, ಬಿ.ಈರಣ್ಣ ಶೆಟ್ಟಿ, ವಾಸವಿ ಬಿಚ್ಚಾಲಿ ರಾಘವೇಂದ್ರ ಶೆಟ್ಟಿ, ದ್ವಾರಕನಾಥ ಶೆಟ್ಟಿ, ಪುರುಷೋತ್ತಮಯ್ಯ, ವೆಂಕಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts