More

    ಬಿಸಿಯೂಟ ನೌಕರರನ್ನು ಕಾರ್ವಿುಕರೆಂದು ಪರಿಗಣಿಸಿ, ಜಿಲ್ಲಾ ಸಮ್ಮೇಳನದಲ್ಲಿ ಮಾಲಿನಿ ಮೇಸ್ತಾ ಒತ್ತಾಯ

    ಹುಬ್ಬಳ್ಳಿ: ಬಿಸಿಯೂಟ ನೌಕರರನ್ನು ಕಾರ್ವಿುಕರೆಂದು ಪರಿಗಣಿಸಿ ಕನಿಷ್ಠ ವೇತನ ಹಾಗೂ ಸಾಮಾಜಿಕ ಭದ್ರತೆಯ ಸೌಲಭ್ಯಗಳನ್ನು ಸರ್ಕಾರ ಜಾರಿ ಮಾಡಬೇಕು ಎಂದು ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ ಒತ್ತಾಯಿಸಿದರು.

    ಇಲ್ಲಿಯ ಎಪಿಎಂಸಿ ಆವರಣದ ಶ್ರಮಿಕ ಭವನದಲ್ಲಿ ಗುರುವಾರ ಜರುಗಿದ ಬಿಸಿಯೂಟ ನೌಕರರ 2ನೇ ಧಾರವಾಡ ಜಿಲ್ಲಾ ಸಮೆ್ಮೕಳನ ಉದ್ಘಾಟಿಸಿ ಅವರು ಮಾತನಾಡಿದರು.

    ಶಾಲೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸಿ ಬಡಿಸುವ ಮಹತ್ವದ ಕೆಲಸ ಮಾಡುವ ತಾಯಂದಿರಿಗೆ ಅತ್ಯಂತ ಕಡಿಮೆ ವೇತನ ನೀಡಲಾಗುತ್ತಿದೆ. ಬರುವ ಸಂಬಳದಲ್ಲಿ ಜೀವನ ನಿರ್ವಹಣೆ ಕಷ್ಟ ಸಾಧ್ಯವಾಗುತ್ತಿದೆ ಎಂದರು.

    ಯಾವುದೇ ಸೌಲಭ್ಯ ಪರಿಹಾರ ನೀಡದೇ 60 ವರ್ಷವಾದ ಕೆಲಸಗಾರರನ್ನು ಏಕಾಏಕಿ ಬಿಡುಗಡೆ ಮಾಡಿದ್ದು ಅಮಾನವೀಯ. ಕನಿಷ್ಠ ಲಕ್ಷ ರೂ. ಅವರಿಗೆ ನೀಡಬೇಕೆಂದು ಒತ್ತಾಯಿಸಿದರು.

    ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ, ಜಿಲ್ಲಾಧ್ಯಕ್ಷ ಬಿ.ಐ. ಈಳಿಗೇರ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಅಂಜನಾ ಬಡಿಗೇರ ಮಾತನಾಡಿದರು.

    ಗುರುಸಿದ್ದಪ್ಪ ಅಂಬಿಗೇರ, ಮಹೇಶ ಹಿರೇಮಠ, ಸುನಂದಾ ಚಿಗರಿ, ಫಕ್ಕೀರವ್ವ ತೆಂಬದಮನಿ, ಕಲಾವತಿ ಲಕಮಾಪುರ ಮುಂತಾದವರಿದ್ದರು.

    ಸುಮಂಗಲಾ ಜಂಗಲೆಪ್ಪಗೌಡರ ಕಾರ್ಯಕ್ರಮ ನಿರೂಪಿಸಿದರು. ಚನ್ನಮ್ನ ಡೊಳ್ಳಿನ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts