More

    ಬಿಮ್ಸ್‌ನಲ್ಲಿ ರೋಗಿಗಳ ಆರ್ತನಾದ

    ಬೆಳಗಾವಿ: ನಗರದಲ್ಲಿರುವ ಜಿಲ್ಲಾಸ್ಪತ್ರೆ (ಬಿಮ್ಸ್)ಯಲ್ಲಿ ವೆಂಟಿಲೇಟರ್ ಬೆಡ್ ಸಿಗದೆ ಕೋವಿಡ್ ರೋಗಿಗಳು ತೀವ್ರ ಪರದಾಡುತ್ತಿದ್ದು, ಬೆಡ್ ನೀಡುವಂತೆ ರೋಗಿಯ ಕುಟುಂಬಸ್ಥರು ಗೋಳಾಡುತ್ತಿದ್ದಾರೆ. ವೆಂಟಿಲೇಟರ್‌ಬೆಡ್ ಸಿಗದೆ ಕರೊನಾ ರೋಗಿಗಳು ಸಂಕಷ್ಟ ಅನುಭವಿಸುತ್ತಲಿದ್ದು, ಸಣ್ಣ-ಪುಟ್ಟ ಅನಾರೋಗ್ಯಕ್ಕೊಳಗಾದವರಿಗೂ ಇಲ್ಲಿ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿವೆ.

    ಚಿತ್ರಣ ಬಿಚ್ಚಿಟ್ಟ ಜನರು: ಬಿಮ್ಸ್‌ನಲ್ಲಿ ರೋಗಿಗಳು ಅನುಭವಿಸುತ್ತಿರುವ ನರಕ ಯಾತನೆಯ ಕುರಿತಾಗಿ ಅವರ ಸಂಬಂಧಿಕರು ಮಾಧ್ಯಮಗಳಿಗೆ ಮಾಹಿತಿ ನೀಡತೊಡಗಿದ್ದಾರೆ. ವೈದ್ಯಕೀಯ ಸೌಲಭ್ಯಗಳ ಕೊರತೆ ಹಾಗೂ ವೈದ್ಯರ ನಿರ್ಲಕ್ಷೃಕ್ಕೆ ಜನ ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಆರೋಪಿಸುತ್ತಿದ್ದಾರೆ. ಅಲ್ಲದೆ, ಕೆಲವರು ಮೊಬೈಲ್‌ನಲ್ಲಿ ಅಲ್ಲಿನ ಅವ್ಯವಸ್ಥೆಯನ್ನು ಚಿತ್ರೀಕರಿಸಿ, ಸಾಮಾಜಿಕ ಜಾಲತಾಣಗಳ ಮೂಲಕ ವೈರಲ್ ಮಾಡತೊಡಗಿದ್ದಾರೆ.

    ಆಕ್ಸಿಜನ್, ವೆಂಟಿಲೇಟರ್ ಬೆಡ್ ಕೊಡುವಂತೆ ರೋಗಿಗಳ ಸಂಬಂಧಿಕರು ಆಸ್ಪತ್ರೆ ಮುಂದೆ ಅಂಗಲಾಚುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ
    ಮಹಾಂತೇಶ ನಗರದ ವ್ಯಕ್ತಿಯೊಬ್ಬರು ಕಫ ಸಮಸ್ಯೆಯಿಂದ ಬಿಮ್ಸ್‌ಗೆ ದಾಖಲಾಗಿದ್ದು, ವೆಂಟಿಲೇಟರ್ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡುವುದಾಗಿ ವೈದ್ಯರು ಹೇಳುತ್ತಾರೆ. ಆದರೆ, ಇಲ್ಲಿ ನೋಡಿದರೆ ಪರಿಸ್ಥಿತಿ ಬೇರೆಯದೇ ಇದೆ. ನಾವು ಯಾವ ವೈದ್ಯರನ್ನು ಸಂಪರ್ಕಿಸಿದರೂ ವೆಂಟಿಲೇಟರ್ ಬೆಡ್ ಸಿಗುತ್ತಿಲ್ಲ ಎಂದು ಜನರು ಆರೋಪಿಸಿದ್ದಾರೆ.

    ರೋಗಿಯ ಕೈ ಕಾಲು ತಣ್ಣಗಾಗುತ್ತಿವೆ, ನಮಗೆ ಆತಂಕವಾಗುತ್ತಿದೆ ಎಂದು ರೋಗಿಯ ಸಂಬಂಧಿಕರೋರ್ವರು ಇದೇ ವೇಳೆ ಅಳಲು ತೋಡಿಕೊಂಡಿದ್ದಾರೆ. ಇನ್ನೋರ್ವ ರೋಗಿಯ ಸಂಬಂಧಿ ಮುಝಮ್ಮಿಲ್ ಡೋಣಿ ಮಾತನಾಡಿ, ಚಿಕಿತ್ಸೆಗೆ ವೆಂಟಿಲೇಟರ್ ಇಲ್ಲ ಎನ್ನುತ್ತಿದ್ದಾರೆ. ಇಲ್ಲಿ ಆಕ್ಸಿಜನ್ ಸಮಸ್ಯೆ ತೀವ್ರವಾಗಿದೆ.

    ಬಿಮ್ಸ್ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ. ಬೆಳಗ್ಗೆಯಿಂದ ನಾಲ್ಕು ಮೃತದೇಹಗಳನ್ನು ಸಾಗಿಸಿದ್ದನ್ನು ಇಲ್ಲಿರುವ ನಾವೆಲ್ಲ ನೋಡಿದ್ದೇವೆ.
    ಸರ್ಕಾರ ಇಲ್ಲಿನ ಅವ್ಯವಸ್ಥೆ ಸರಿಪಡಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಜನರ ಆರೋಗ್ಯ ಹಾಗೂ ಜೀವ ರಕ್ಷಣೆಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts