More

    ಬಿಮ್ಸ್‌ಗೆ ಅಧಿಕಾರಿಗಳ ಪ್ರದಕ್ಷಿಣೆ!

    ಬೆಳಗಾವಿ: ಜಿಲ್ಲಾಸ್ಪತ್ರೆ (ಬಿಮ್ಸ್)ಯ ಆಡಳಿತ ವ್ಯವಸ್ಥೆ ಸುಧಾರಿಸಲು ಸರ್ಕಾರ ಮೇಲುಸ್ತುವಾರಿ ನೋಡಿಕೊಳ್ಳಲು ವಿಶೇಷ ಅಧಿಕಾರಿ ನೇಮಿಸಿದ ಹಿನ್ನೆಲೆಯಲ್ಲಿ ಬಿಮ್ಸ್‌ನ ವಿವಿಧ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ವ್ಯವಸ್ಥೆ ಹಾಗೂ ಕ್ರಮಗಳನ್ನು ಪರಿಶೀಲಿಸಿದ್ದಾರೆ.
    ಇಷ್ಟು ದಿನ ಜಿಲ್ಲಾಸ್ಪತ್ರೆಯ ಕಾರ್ಯವೈಖರಿ, ಜನರಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತದಿಯೇ-ಇಲ್ಲವೋ ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳದ ಅಧಿಕಾರಿಗಳು ಭಾನುವಾರವಾಗಿದ್ದರೂ ದೌಡಾಯಿಸಿ, ಆಸ್ಪತ್ರೆಯಲ್ಲಿ ರೌಂಡ್ಸ್ ಹಾಕಿದರು.

    ಪರಿಶೀಲನೆ: ಬಿಮ್ಸ್‌ನ ಕೆಲ ಅಧಿಕಾರಿಗಳು ಇದುವರೆಗೂ ಪಿಪಿಇ ಕಿಟ್ ಧರಿಸಿಯೇ ಇರಲಿಲ್ಲ. ಕೋವಿಡ್ ವಾರ್ಡ್ ಎಲ್ಲಿದೆ ಎಂದು ಕಣ್ಣೆತ್ತಿಯೂ ನೋಡಿರಲಿಲ್ಲ. ಆದರೆ, ಭಾನುವಾರ ಪಿಪಿಇ ಕಿಟ್ ಧರಿಸಿ ಆಗಮಿಸಿದ್ದರು. ಬಿಮ್ಸ್ ಪ್ರಭಾರಿ ನಿರ್ದೇಶಕ ಉಮೇಶ ಕುಲಕರ್ಣಿ, ಅಡಳಿತಾಧಿಕಾರಿ ಸಯೀದಾ ಆಫ್ರಿನ್ ಬಳ್ಳಾರಿ, ಜಿಲ್ಲಾ ಸರ್ಜನ್ ಡಾ.ಸುಧಾಕರ, ವೈದ್ಯಕೀಯ ಅಧೀಕ್ಷಕ ಗಿರೀಶ ದಂಡಗಿ ಹಾಗೂ ಬಿಮ್ಸ್ ಆಡಳಿತ ಮಂಡಳಿಯ ಇನ್ನಿತರ ಸಿಬ್ಬಂದಿ ಆಸ್ಪತ್ರೆಯ ಪ್ರದಕ್ಷಿಣೆ ಮಾಡಿದರು. ಕೋವಿಡ್ ಸೋಂಕಿತರಿಗೆ ನೀಡುತ್ತಿರುವ ಚಿಕಿತ್ಸಾ ವ್ಯವಸ್ಥೆ ಪರಿಶೀಲಿಸಿದರು.

    ವಿಶೇಷ ಅಧಿಕಾರಿ ನೇಮಕ: ಇತ್ತೀಚೆಗೆ ಸಿಎಂ ಆಯೋಜಿದ್ದ ವಿಡಿಯೋ ಸಂವಾದದಲ್ಲಿ ಶಾಸಕ ಅಭಯ ಪಾಟೀಲ ಅವರು ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ಥೆ ಕುರಿತಾಗಿ ನೇರವಾಗಿ ಆರೋಪಿಸಿದ್ದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಶಾಸಕ ಪಾಟೀಲ ನಡುವೆ ವಾಕ್ಸಮರ ನಡೆದಿತ್ತು.

    ಬಳಿಕ ಸಿಎಂ ಯಡಿಯೂರಪ್ಪ ಅವರೇ ಇಬ್ಬರನ್ನೂ ಸಮಾಧಾನ ಪಡಿಸಿ, ಖುದ್ದು ಬೆಳಗಾವಿಗೆ ಬಂದು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಅದರಂತೆ ಜೂ. 4ರಂದು ಬೆಳಗಾವಿಗೆ ಆಗಮಿಸಿದ್ದ ಯಡಿಯೂರಪ್ಪ, ಬಿಮ್ಸ್ ಆಡಳಿತ ವ್ಯವಸ್ಥೆ ಸುಧಾರಿಸಲು ಹಾಗೂ ವ್ಯವಸ್ಥೆಯ ಮೇಲುಸ್ತುವಾರಿ ನೋಡಿಕೊಳ್ಳಲು ಬೆಳಗಾವಿ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲಾನ್ ಬಿಸ್ವಾಸ್ ಅವರನ್ನು ವಿಶೇಷ ಅಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts