More

    ಬಿಟುಮಿನ್ ಖಾಲಿ ಮಾಡಲು ದೊರೆಯದ ಅನುಮೋದನೆ

    ಕಾರವಾರ: ಬಿಟುಮಿನ್ ತುಂಬಿಕೊಂಡು ಇಲ್ಲಿನ ಬಂದರಿಗೆ ಬಂದ ಎರಡು ಹಡಗುಗಳು ಖಾಲಿ ಮಾಡಲಾಗದೆ ನಿಂತಿವೆ. ಇದಕ್ಕೆ ಕಾರಣ ಕಸ್ಟಮ್್ಸ ಹಾಗೂ ಮರ್ಕಂಟೈಲ್ ಮರೈನ್ ಇಲಾಖೆ(ಎಂಎಂಡಿ)ಗಳ ಅನುಮತಿ ದೊರೆಯದಿರುವುದು.

    ಬಿಟುಮಿನ್(ಡಾಂಬರು) ತುಂಬಿಕೊಂಡು ಮುಂಬೈನಿಂದ ಅ.3 ರಂದು ಆಗಮಿಸಿದ ಎಂ.ಟಿ. ಆರ್. ಓಶನ್ ಹೆಸರಿನ ಹಡಗಿಗೆ ಕಸ್ಟಮ್್ಸ ಇಲಾಖೆ ಖಾಲಿ ಮಾಡಲು ಅನುಮೋದನೆ ನೀಡಿಲ್ಲ. ಇದರಿಂದ ಕಳೆದ ಕೆಲ ದಿನಗಳ ಹಿಂದೆ ಬಂದರಿನಿಂದ ಹೊರಗೆ ತೆರಳಿ ಲಂಗರು ಹಾಕಿ ಕಾದು ನಿಂತಿತ್ತು. ಈಗ ಮತ್ತೆ ಬಂದರಿಗೆ ಬಂದು ನಿಂತಿದೆ. ಯುಎಇ ಕೋರ್ ಅಲ್ ಫಕಾನ್​ದಿಂದ ಬಿಟುಮಿನ್ ತುಂಬಿಕೊಂಡು ಅ.13 ರಂದು ಆಗಮಿಸಿದ ಪನಾಮಾ ನೋಂದಣಿಯ ಎಂ.ಟಿ.ವರ್ಧಮಾನ ಹೆಸರಿನ ಹಡಗನ್ನು ಮರ್ಕಂಟೈಲ್ ಮರೈನ್ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಹಡಗು ಅಂತಾರಾಷ್ಟ್ರೀಯ ಮಾರ್ಗದಲ್ಲಿ ಸಂಚರಿಸಲು ಅರ್ಹತೆ ಪಡೆ ಯಲು ಹಲವು ನಿರ್ವಹಣೆ ಕಾರ್ಯಗಳನ್ನು ಮಾಡಬೇಕು ಎಂದು ಒಟ್ಟು 21 ಅಂಶಗಳ ಪಟ್ಟಿ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಆ ಹಡಗೂ ಕೂಡ ಬಿಟುಮಿನ್ ಖಾಲಿ ಮಾಡಿ ಕಾರವಾರ ಬಂದರು ಬಿಡಲು ಕಾಯುತ್ತಿದೆ. ಇದು ಮರೈನ್ ಮರ್ಕಂಟೈನ್ ಡಿಪಾರ್ಟ್​ವೆುಂಟ್ ಹಾಗೂ ಕಸ್ಟಮ್ಸ್​ನ ವಾರ್ಷಿಕ ಪರಿಶೀಲನೆಯಾಗಿದೆ. ಇಲಾಖೆಗಳ ಅನುಮೋದನೆಗಾಗಿ ಹಡಗುಗಳನ್ನು ನಿಲ್ಲಿಸಲಾಗಿದೆ. ಒಂದೆರಡು ದಿನದಲ್ಲಿ ಕಸ್ಟಮ್್ಸ ಇಲಾಖೆಯ ಅನುಮೋದನೆ ಸಿಕ್ಕ ನಂತರ ಹಡಗು ಬಿಟುಮಿನ್ ಇಳಿಸಿ ವಾಪಸಾಗುವುದಾಗಿ ಬಂದರು ಇಲಾಖೆ ಅಧಿಕಾರಿ ಸುರೇಶ ಶೆಟ್ಟಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಅನುಮತಿ ಏಕೆ?: ಹಡಗುಗಳು ಯಾವುದೇ ಭಾರತೀಯ ಬಂದರುಗಳಲ್ಲಿ ಸಾಮಗ್ರಿಗಳನ್ನು ಇಳಿಸಲು, ತುಂಬಿಕೊಳ್ಳಲು ಹಾಗೂ ಇಲ್ಲಿಂದ ತೆರಳಲು ಕಸ್ಟಮ್್ಸ ಇಲಾಖೆಯ ಅನುಮತಿ ಅಗತ್ಯ. ಕಸ್ಟಮ್್ಸ ಇಲಾಖೆ ಹಡಗು ತುಂಬಿಕೊಂಡು ಬಂದ ಸರಕು ಕಾನೂನು ಬದ್ಧವಾಗಿದೆಯೇ ಎಂಬುದನ್ನು ಪರಿಶೀಲಿಸುತ್ತದೆ. ಜತೆಗೆ ಆಮದು, ರಫ್ತಿಗೆ ಸಂಬಂಧಿಸಿದ ಶುಲ್ಕವನ್ನು ಆಕರಿಸುತ್ತದೆ. ಹಾಗೊಮ್ಮೆ ಸರಕುಗಳ ಕಾನೂನುಬದ್ಧತೆಯ ಬಗ್ಗೆ ಅನುಮಾನವಿದ್ದಲ್ಲಿ, ಪರವಾನಗಿ ನೀಡಲು ವಿಳಂಬ ಮಾಡುವುದಿದೆ.

    ಮುಂಬೈನ ಡೈರೆಕ್ಟರ್ ಜನರಲ್ ಆಫ್ ಶಿಪ್ಪಿಂಗ್ ಅಡಿ ಬರುವ ಮರ್ಕಂಟೈಲ್ ಮರೈನ್ ಇಲಾಖೆ ಅಂತಾರಾಷ್ಟ್ರೀಯ ಸಮುದ್ರಕ್ಕೆ ತೆರಳುವ ಹಡಗುಗಳ ತಾಂತ್ರಿಕ ಸುರಕ್ಷತೆ, ಸಮುದ್ರ ನಿಯಮಾಪವಳಿಗಳ ಪಾಲನೆ ಬಗ್ಗೆ ಪರಿಶೀಲಿಸುತ್ತದೆ. ಎಂಎಂಡಿ ಅನುಮತಿ ಇಲ್ಲದೆ ಹಡಗುಗಳು ಅಂತಾರಾಷ್ಟ್ರೀಯ ಸಮುದ್ರದಲ್ಲಿ ಸಂಚರಿಸುವಂತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts