More

    ಮನಗೂಳಿ ಪಪಂ ಉಳಿತಾಯ ಬಜೆಟ್ ಮಂಡನೆ

    ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣ ಪಂಚಾಯಿತಿಯ ಬಜೆಟ್‌ನ್ನು ಆಡಳಿತಾಧಿಕಾರಿ ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಮಂಡಿಸಲಾಯಿತು.

    2024-25ನೇ ಸಾಲಿನ ಆಯವ್ಯಯ ಅಂದಾಜು ಪತ್ರಿಕೆಗೆ ಅನುಮೋದನೆ ನೀಡುವುದರೊಂದಿಗೆ 29ಸಾವಿರ ರೂ.ಗಳ ಉಳಿತಾಯ ಬಜೆಟ್ ಮಂಡಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಬ್ಬೀರ ರೇವೂರಕರ ತಿಳಿಸಿದರು.

    ವಿವಿಧ ಮೂಲಗಳಿಂದ ಒಟ್ಟು 6.41 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದ್ದು, ಆದಾಯ ಮೂಲಗಳಾದ ರಾಜಸ್ವ ಮತ್ತು ರಾಜ್ಯ ಹಣಕಾಸು ಆಯೋಗದ ಬಂಡವಾಳ 1.2 ಕೋಟಿ ರೂ, ಕೇಂದ್ರ ಸರ್ಕಾರರಿಂದ 15ನೇ ಹಣಕಾಸು ಮತ್ತು ಸ್ವಚ್ಚ ಭಾರತ ಸೇರಿ 2.10 ಕೋಟಿ ರೂ. ರಾಜಸ್ವ ಸ್ವೀಕೃತಿಗಳಾದ ಆಸ್ತಿ ತೆರಿಗೆ, ನೀರಿನ ಕರ, ಅಂಗಡಿಗಳ ಬಾಡಿಗೆ, ಲೈಸನ್ಸ್ ಫೀ, ಕಟ್ಟಡ ಪರವಾನಿಗೆ ಶುಲ್ಕ ಮತ್ತು ಇತರ ಮೂಲಗಳಿಂದ 2.87 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ರಾಜಸ್ವ ಪಾವತಿಗಳಾದ ಕುಡಿಯುವ ನೀರು, ಚರಂಡಿ, ಎಸ್‌ಡಬ್ಲುಎಂ ಮತ್ತು ಉಪಕರಣ, ವಾಹನ ಖರೀದಿ ಒಳಗೊಂಡಂತೆ ಇತರೆ ಅಭಿವೃದ್ಧಿ ಕಾರ್ಯಗಳಿಗಾಗಿ 2.87 ಕೋಟಿ ಹಣವನ್ನು ಮೀಸಲಿಡಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts