More

    ಬಿಜೆಪಿ ಮುಖಂಡನಿಂದ ಸಾವಿರಾರು ಗಣೇಶ ಮೂರ್ತಿ ವಿತರಣೆ


    ಪಾಂಡವಪುರ
    : ಗೌರಿ-ಗಣೇಶ ಹಬ್ಬದ ಪ್ರಯುಕ್ತ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಗಣೇಶ ಪ್ರತಿಷ್ಠಾಪಿಸುವ ಸಲುವಾಗಿ ಬಿಜೆಪಿ ಮುಖಂಡ ಡಾ.ಎನ್.ಎಸ್.ಇಂದ್ರೇಶ್ ಅವರು ಮಂಗಳವಾರ ಉಚಿತವಾಗಿ ಸಾವಿರಾರು ಗಣೇಶ ಮೂರ್ತಿಗಳನ್ನು ವಿತರಿಸಿದರು.


    ಕ್ಷೇತ್ರದ ಪ್ರತಿ ಗ್ರಾಮಕ್ಕೂ ಎರಡರಿಂದ ಮೂರರಂತೆ ಸಾವಿರಕ್ಕೂ ಅಧಿಕ ಐದು ಅಡಿಗೂ ಎತ್ತರದ ಗಣೇಶ ಮತ್ತು ಗೌರಿ ಮೂರ್ತಿಗಳನ್ನು ವಿತರಿಸಲಾಯಿತು.


    ಗಣೇಶ ಮೂರ್ತಿಗಳನ್ನು ಪಡೆಯುವುದಕ್ಕಾಗಿ ಯುವ ಸಮುದಾಯ ಡಾ.ಇಂದ್ರೇಶ್ ಅವರ ಪರಿವರ್ತನಾ ಟ್ರಸ್ಟ್ ಕಚೇರಿ ಮುಂಭಾಗ ಬೆಳಗ್ಗೆ 7ರಿಂದಲೇ ಜಮಾವಣೆಗೊಂಡು ಸರತಿಯಂತೆ ಗಣೇಶ ಮತ್ತು ಗೌರಿ ಮೂರ್ತಿಗಳನ್ನು ಪಡೆದು ತಮ್ಮ ತಮ್ಮ ವಾಹನಗಳಲ್ಲಿ ಎಚ್ಚರಿಕೆಯಿಂದ ಗ್ರಾಮಕ್ಕೆ ಕೊಂಡೊಯ್ದರು.


    ನಂದಿ, ಸಿಂಹ, ಹುಲಿ, ಸಾರಂಗ, ಗರುಡ, ನವಿಲುರೂಢನಾಗಿರುವ ವಿವಿಧ ಭಂಗಿಯ ಪರಿಸರ ಸ್ನೇಹಿ ಗಣಪತಿಗಳನ್ನು ವಿತರಿಸಲಾಯಿತು. ನಿರೀಕ್ಷೆಗೂ ಮೀರಿ ಯುವಕರು ಗಣಪತಿ ಮೂರ್ತಿ ಪಡೆಯಲು ಆಗಮಿಸಿದ್ದರಿಂದ ಉಚಿತವಾಗಿ ವಿತರಿಸಲು ಖರೀದಿಸಲಾಗಿದ್ದ ಗಣಪತಿ ಮೂರ್ತಿಗಳು ಖಾಲಿಯಾದವು. ಬಳಿಕ ಮತ್ತೆ ಖರೀದಿಸಿ ಆಗಮಿಸಿದ್ದ ಎಲ್ಲ ಗ್ರಾಮಗಳ ಯುವಕರಿಗೆ ಗಣೇಶನ ಮೂರ್ತಿಗಳನ್ನು ವಿತರಿಸಲಾಯಿತು.


    ಗಣೇಶ ಮೂರ್ತಿಗಳನ್ನು ವಿತರಿಸಿದ ಬಳಿಕ ಡಾ.ಇಂದ್ರೇಶ್ ಮಾತನಾಡಿ, ಎರಡು ವರ್ಷಗಳಿಂದ ಕೋವಿಡ್ ಪರಿಣಾಮ ಗಣೇಶ ಹಬ್ಬವನ್ನು ಮೊದಲಿನಂತೆ ಆಚರಿಸಲು ಸಾಧ್ಯವಾಗಿರಲಿಲ್ಲ. ವಿಘ್ನ ನಿವಾರಕ ವಿನಾಯಕನ ಕೃಪಾ ಕಟಾಕ್ಷದಿಂದ ದೇಶದಲ್ಲಿ ಕರೊನಾ ಮಹಾಮಾರಿ ಶಾಶ್ವತವಾಗಿ ತೊಲಗಿ ದೇಶದ ಪ್ರತಿಯೊಬ್ಬರೂ ಶಾಂತಿ, ನೆಮ್ಮದಿ, ಸುಖವಾಗಿ ಬಾಳಲಿ ಎಂಬ ಆಶಯದೊಂದಿಗೆ ದುದ್ದ ಹೋಬಳಿ ಸೇರಿದಂತೆ ಕ್ಷೇತ್ರದ ಪ್ರತಿ ಗ್ರಾಮಗಳಿಗೂ ಗಣೇಶ ಮೂರ್ತಿಗಳನ್ನು ವಿತರಿಸಲಾಗಿದೆ. ಗಣೇಶ ಮೂರ್ತಿಗಳನ್ನು ಕೇಳಿದ ಪ್ರತಿಯೊಬ್ಬರಿಗೂ ವಿತರಿಸಲಾಗಿದೆ. ಇಂತಹ ಪುಣ್ಯದ ಕೆಲಸದಿಂದ ಸಮಾಧಾನ ಸಿಕ್ಕಿದೆ ಎಂದರು.


    ಬಿಜೆಪಿ ಮುಖಂಡರಾದ ಬಳಘಟ್ಟ ಅಶೋಕ್, ಚಿಕ್ಕಮರಳಿ ನವೀನ್, ನಂದೀಶ್, ರಾಜೀವ್ ತಮ್ಮಣ್ಣ, ಕರುಣ್‌ಕುಮಾರ್, ಎಲೆಕೆರೆ ಈರೇಗೌಡ, ಕೆನ್ನಾಳು ರುದ್ರೇಶ್, ಮಹೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts