More

    ಬಿಜೆಪಿ ಬೆಳೆಸಿದ್ದು ದೀನದಯಾಳ್ ಉಪಾಧ್ಯಾಯರು – ಸಂಜಯ ಪಾಟೀಲ

    ಬೆಳಗಾವಿ: ರಾಷ್ಟ್ರೀಯ ವಿಚಾರಧಾರೆಗಳನ್ನು ದೇಶದ ಜನತೆಯಲ್ಲಿ ಬಿತ್ತುವದರೊಂದಿಗೆ ಬಿಜೆಪಿ ಕಟ್ಟಿ ಬೆಳೆಸಿದ ಕೀರ್ತಿ ಪಂಡಿತ ದೀನದಯಾಳ್ ಉಪಾಧ್ಯಾಯ ಅವರಿಗೆ ಸಲ್ಲುತ್ತದೆ ಎಂದು ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಹೇಳಿದರು.

    ನಗರದ ಆರ್‌ಪಿಡಿ ವೃತ್ತದಲ್ಲಿರುವ ಪಕ್ಷದ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಪಂ.ದೀನದಯಾಳ್ ಉಪಾಧ್ಯಾಯ ಅವರ 55ನೇ ವರ್ಷದ ಸಮರ್ಪಣಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
    ಉಪಾಧ್ಯಾಯ ಅವರನ್ನು ಎಲ್ಲರೂ ಪ್ರೀತಿಯಿಂದ ದೀನ ಎಂದೇ ಸಂಬೋಧಿಸುತಿದ್ದರು. ಬಾಲ್ಯದಲ್ಲಿ ಕಷ್ಟದ ಜೀವನ ಸಾಗಿಸಿದರು. ಅವರು ಅನುಭವಿಸಿದ ಆ ಕಷ್ಟದ ದಿನಗಳೇ ದೇಶದ ದೀನ ದಲಿತರಿಗೆ ಆಸರೆಯಾಗುವ ಕಾರ್ಯಗಳನ್ನು ಮಾಡಲು ಅನುಕೂಲವಾಯಿತು. ಶಾಲಾ ದಿನಗಳಲ್ಲಿ ಅವರು ಅದ್ಭುತ ವಿದ್ವಾಂಸರಾಗಿದ್ದರು. ಅವರ ಅರ್ಹತೆ ಗುರುತಿಸಿ ವಿದ್ಯಾರ್ಥಿ ಜೀವನದಲ್ಲಿ ಚಿನ್ನದ ಪದಕ, ಮಾಸಿಕ 10 ರೂ. ಮತ್ತು 250 ರೂ. ವಿದ್ಯಾರ್ಥಿ ವೇತನದೊಂದಿಗೆ ಶಿಕ್ಷಣ ಪಡೆದ ಮೇಧಾವಿ ಇವರಾಗಿದ್ದರು ಎಂದರು.

    ಪಕ್ಷದ ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್. ಸಿದ್ದನಗೌಡರ ಮಾತನಾಡಿ, ಪಂ.ದೀನದಯಾಳ್ 1937ರಲ್ಲಿ ಆರ್‌ಎಸ್‌ಎಸ್‌ಗೆ ಸೇರಿ ನಾನಾಜಿ ದೇಶಮುಖ ಮತ್ತು ಭಾವು ಜುಗಾಡೆ ಅವರ ಪ್ರಭಾವಕ್ಕೆ
    ಒಳಗಾಗಿ ಸಂಘದ ಆಜೀವ ಪ್ರಚಾರಕರಾದರು. ನಂತರ ಸಂಘದ ಮೂಲಕ ರಾಜಕೀಯಕ್ಕೆ ಪ್ರವೇಶಿಸಿ, ಭಾರತೀಯ ಜನಸಂಘದ ಪ್ರಾರಂಭದಿಂದ 1967ರವರೆಗೆ ಪ್ರಧಾನ ಕಾರ್ಯದರ್ಶಿಯಾಗಿ ನಂತರ ಜನಸಂಘದ ಅಧ್ಯಕ್ಷರಾದರು. 1968ರ ಫೆ.11ರಂದು ಮೊಘಲ್ ಸರಾಯ್‌ನಲ್ಲಿ ರೈಲ್ವೆ ಹಳಿಯ ಮೇಲೆ ಅವರ ಪಾರ್ಥಿವ ಶರೀರ ಕಂಡು ದೇಶವೇ ಮಮ್ಮಲ ಮರಗಿತ್ತು. ಆಗ ಅವರಿಗೆ 52 ವಯಸ್ಸಾಗಿತ್ತು. ಜೀವನದುದ್ದಕ್ಕೂ ದೇಶದ ಭದ್ರತೆ, ದುರ್ಬಲರ ಆಸರೆಗೆ ಸದಾ ಮಿಡಿದಿರುವುದರಿಂದ ಮೃತರಾದ ದಿನವನ್ನು ಸಮರ್ಪಣಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

    ಅವರು ಸೃಜನಶೀಲ ಲೇಖಕರಾಗಿ ‘ರಾಷ್ಟ್ರ ಧರ್ಮ ಮತ್ತು ಪಾಂಚಜನ್ಯ’ ಸಂಪಾದಕರಾಗಿ ಕೆಲಸ ಮಾಡಿದರು. ಪತ್ರಿಕೋದ್ಯಮದಲ್ಲಿ ಸುದ್ದಿ ತಿರುಚಬೇಡಿ ಎಂಬುದು ಅವರ ಮಂತ್ರವಾಗಿತ್ತು. ಮಾನವತಾವಾದ, ಏಕಾತ್ಮವಾದ ಪುಸ್ತಕ ಬರೆದರು. ಸಾಮರಸ್ಯ, ಸಾಂಸ್ಕೃತಿಕ-ರಾಷ್ಟ್ರೀಯ ಪ್ರಾಮುಖ್ಯತೆ ಮತ್ತು ಶಿಸ್ತಿನ ಮೌಲ್ಯದ ಬಗ್ಗೆ ಸದಾ ಬೋಧಿಸಿದರು. ಅಂತ್ಯೋದಯ ಪರಿಕಲ್ಪನೆ ನೀಡಿದ ಪಂಡಿತ್ ದೀನದಯಾಳ್ ಉಪಾಧ್ಯಾಯರು ಭಾರತೀಯ ಸಂಸ್ಕೃತಿ ತಳಹದಿ ಮೇಲೆ ಬಲವಾದ ಮತ್ತು ಸಮೃದ್ಧ ಭಾರತೀಯ ರಾಷ್ಟ್ರ ನಿರ್ಮಿಸುವ ಗುರಿ ಹೊಂದಿದ್ದರು. ಅದು ಮೋದಿಜಿಯವರ ನೇತೃತ್ವದಲ್ಲಿ ಸಾಕಾರಗೊಂಡಿದೆ ಎಂದರು.
    ನಿತಿನ ಚೌಗಲೆ, ಸಂತೋಷ ದೇಶನೂರ, ವೀರಭದ್ರಯ್ಯ ಪೂಜಾರ, ಅಕ್ಷಯ ಪಾಟೀಲ, ರಾಜೇಶ ಪಾಟೀಲ, ಗಂಗಾಧರ ಗಸಾರೆ, ಯಲ್ಲೇಶ ಕೋಲಕಾರ, ಬಾಪು ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts