More

    ಬಿಜೆಪಿ ತೆಕ್ಕೆಗೆ ಪಿಎಲ್​ಡಿ ಬ್ಯಾಂಕ್

    ಹಾನಗಲ್ಲ: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರ ಎಲ್ಲ ಸ್ಥಾನಗಳಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಅಕ್ಕಿಆಲೂರಿನಲ್ಲಿರುವ ಪಿಎಲ್​ಡಿ ಬ್ಯಾಂಕ್​ನ 14 ಸ್ಥಾನಗಳಲ್ಲಿ 13 ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ನಡೆಯಿತು. ಬೆಳಗಾಲಪೇಟೆ ಕ್ಷೇತ್ರಕ್ಕೆ ಅಭ್ಯರ್ಥಿಗಳಿಲ್ಲದ ಕಾರಣ ಚುನಾವಣೆ ನಡೆಯಲಿಲ್ಲ. ನೂತನ ನಿರ್ದೇಶಕರನ್ನು ಶಾಸಕ ಉದಾಸಿ ತಮ್ಮ ಗೃಹ ಕಚೇರಿಯಲ್ಲಿ ಸನ್ಮಾನಿಸಿದರು. ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘1978ರಿಂದಲೂ ಈ ಬ್ಯಾಂಕ್​ಗೆ ನಮ್ಮ ಪಕ್ಷದ ಅಭ್ಯರ್ಥಿಗಳೇ ಸತತವಾಗಿ ಆಯ್ಕೆಯಾಗುತ್ತ ಬಂದಿರುವುದು ಇಲ್ಲಿನ ವಿಶೇಷ. ಆಡಳಿತ ಮಂಡಳಿಯ ಕಾರ್ಯದಕ್ಷತೆಯನ್ನು ಮತದಾರ ಸದಸ್ಯರು ಮೆಚ್ಚಿಕೊಂಡರೆ ಮಾತ್ರ ಮರು ಆಯ್ಕೆ ಸಾಧ್ಯವಾಗುತ್ತದೆ. ಸಾಲ ನೀಡುವಾಗಿನ ಹುಮ್ಮಸ್ಸು ವಸೂಲಾತಿಯಲ್ಲೂ ತೋರಿದರೆ ಸಂಸ್ಥೆ ಆರ್ಥಿಕವಾಗಿ ಅಭಿವೃದ್ಧಿಯಾಗುತ್ತದೆ. ಸಾಲಗಾರರೂ ಸಂಸ್ಥೆಯನ್ನು ಬೆಳೆಸುವ ನಿಟ್ಟಿನಲ್ಲಿ ಸಾಲ ಮರುಪಾವತಿಸುವಲ್ಲಿ ಸಹಕರಿಸಬೇಕು ಎಂದರು.

    ವಿಜೇತ ಅಭ್ಯರ್ಥಿಗಳು: ಪಿಎಲ್​ಡಿ ಬ್ಯಾಂಕಿನ ಚುನಾವಣೆಯಲ್ಲಿ ದೇವೇಂದ್ರಪ್ಪ ಹುಲ್ಲಾಳ, ಮುರುಡನಗೌಡ ದೊಡ್ಮನಿ, ಶಿವಾನಂದಪ್ಪ ಯಲಿಗಾರ, ಹನುಮಂತಪ್ಪ ಗೊಂದಿ, ಸಿದ್ದಪ್ಪ ಬಾಳೂರ, ಮಹೇಶ ಬಣಕಾರ, ಶಕುಂತಲಾ ಮರೆಮ್ಮನವರ, ಅನುರಾಧಾ ಪಾಟೀಲ, ಲೋಕೇಶ ಬುಡ್ಡನವರ, ಸುಭಾಸ ಕೋಳಿನಿಂಗಣ್ಣನವರ, ದುಷ್ಯಂತ ನಾಗರವಳ್ಳಿ, ಪ್ರಭಾಕರ ಬಾಬಜಿ, ನಿಂಗಪ್ಪ ಚೆಂಗಳೆಮ್ಮನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಬಿಜೆಪಿ ತಾಲೂಕು ಅಧ್ಯಕ್ಷ ರಾಜು ಗೌಳಿ, ಪ್ರಧಾನ ಕಾರ್ಯದರ್ಶಿ ಶಿವಲಿಂಗಪ್ಪ ತಲ್ಲೂರ, ಜಿಪಂ ಸದಸ್ಯ ಮಾಲತೇಶ ಸೊಪ್ಪಿನ, ತಾಪಂ ಸದಸ್ಯ ಬಸವರಾಜ ಬೂದಿಹಾಳ, ಸಕ್ಕರೆ ಕಾರ್ಖಾನೆ ಅಧ್ಯಕ್ಷ ಜಿ.ಎಸ್.ದೇಶಪಾಂಡೆ, ಮುಖಂಡರಾದ ಪದ್ಮನಾಭ ಕುಂದಾಪುರ, ಬಿ.ಎಸ್. ಅಕ್ಕಿವಳ್ಳಿ, ಕಲ್ಯಾಣಕುಮಾರ ಶೆಟ್ಟರ್, ಹನುಮಂತಪ್ಪ ಗೊಂದಿ, ಉದಯ ವಿರುಪಣ್ಣನವರ, ರಾಜಣ್ಣ ಗೌಳಿ, ರಾಜಣ್ಣ ಪಟ್ಟಣದ, ನಿಂಗಪ್ಪ ಗೊಬ್ಬೆರ, ಚಂದ್ರಪ್ಪ ಜಾಲಗಾರ, ಬಸಣ್ಣ ಸಂಶಿ, ಬಸಣ್ಣ ಸೂರಗೊಂಡರ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಅಶೋಕ ಯಮನೂರ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts