More

    ಬಾವಿ ನಿರ್ವಣದ ಎಸ್​ಆರ್ ದರ ಹೆಚ್ಚಳ

    ತೀರ್ಥಹಳ್ಳಿ: ರಿಂಗ್ ಬಾವಿಗಳ ನಿರ್ವಣದ ಎಸ್.ಆರ್. ದರ ಹೆಚ್ಚಿಸುವ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ನೀಡಿದರು.

    ಕರೊನಾ ನಿಯಂತ್ರಣ ಹಾಗೂ ತಾಲೂಕಿನ ಅಭಿವೃದ್ಧಿಗೆ ಸಂಬಂಧಿಸಿ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಶನಿವಾರ ಪ್ರಗತಿ ಪರಿಶೀಲಿಸಿ ಮಾತನಾಡಿ, ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುವುದು ಅಗತ್ಯ. ಪ್ರಧಾನಮಂತ್ರಿಗಳ ಆದೇಶದಂತೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಪ್ರತಿ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಬೇಕು. ಈ ಯೋಜನೆಗೆ ಹೆಚ್ಚು ಒತ್ತು ನೀಡಬೇಕಿದ್ದು ಪ್ರಸ್ತಾವನೆಗಳನ್ನು ಕಳಿಸುವಂತೆ ಸೂಚಿಸಿದರು.

    ಹಣಗೆರೆ ಗ್ರಾಪಂ ವ್ಯಾಪ್ತಿಯ ಸಂಕ್ಲಾಪುರ ಹಾಗೂ ಕೊಂಬಿನಕೈ ಗ್ರಾಮದಲ್ಲಿ ಅಂಗನವಾಡಿ ನಿರ್ವಣಕ್ಕೆ ಅಡ್ಡಿಪಡಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ತಾವೇ ಖುದ್ದಾಗಿ ರ್ಚಚಿಸುವುದಾಗಿ ತಿಳಿಸಿದರು.

    ಗ್ರಾಪಂ ಚುನಾವಣೆ ಮುಂದಕ್ಕೆ: ಕರೊನಾ ಹಿನ್ನೆಲೆಯಲ್ಲಿ ಗ್ರಾಪಂಗಳ ಚುನಾವಣೆ 6 ತಿಂಗಳ ಅವಧಿಗೆ ಮುಂದೂಡಲ್ಪಟ್ಟಿದೆ. ಗ್ರಾಪಂಗಳ ಆಡಳಿತಾತ್ಮಕ ನಿರ್ವಾತ ತಪ್ಪಿಸಲು ಬದಲಿ ಆಡಳಿತ ವ್ಯವಸ್ಥೆ ಮಾಡಬೇಕಿದೆ. ಆಡಳಿತ ಸಮಿತಿಗಳನ್ನು ನೇಮಿಸಲು ಡಿಸಿ ಅಧಿಕಾರ ಹೊಂದಿದ್ದಾರೆ. ರಾಜ್ಯದ 6,021 ಗ್ರಾಪಂಗಳಿಗೆ 96 ಸಾವಿರ ಪ್ರತಿನಿಧಿಗಳನ್ನು ಹಂತಹಂತವಾಗಿ ನೇಮಿಸಲಾಗುವುದು ಎಂದರು.

    ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಅಗ್ರಹಾರ ಹೋಬಳಿಯ ಹುಂಚದಕಟ್ಟೆ ಮತ್ತು ಆಗುಂಬೆ ಹೋಬಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ತುಂಗಾನದಿಯಿಂದ ನೀರೊದಗಿಸಬೇಕಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ನೊಣಬೂರು ಗ್ರಾಪಂ ವ್ಯಾಪ್ತಿಯ ಬಾವಿಗಳ ನೀರಿನಲ್ಲಿ ಫ್ಲೋರೈಡ್ ಅಂಶ ಕಂಡುಬಂದಿದೆ ಎಂದರು.

    ಶರಾವತಿ ನದಿಯ ಉಗಮ ಸ್ಥಾನವಾದ ಅಂಬುತೀರ್ಥ ಅಭಿವೃದ್ಧಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ 3 ಕೋಟಿ ರೂ. ಅನುದಾನ ಘೊಷಿಸಿದ್ದು ಶೀಘ್ರ ಕಾಮಗಾರಿಗೆ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಧಾರ್ವಿುಕ ಕಾರ್ಯದಲ್ಲಿ ಪಾಲ್ಗೊಂಡ ಈಶ್ವರಪ್ಪ ದಂಪತಿ: ನೊಣಬೂರು ಗ್ರಾಪಂ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿ ಹಾಗೂ ನರೇಗಾ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳ ವೀಕ್ಷಣೆಗೆ ಆಗಮಿಸಿದ ಕೆ.ಎಸ್.ಈಶ್ವರಪ್ಪ ಅವರು ಪತ್ನಿ ಜಯಲಕ್ಷ್ಮೀ ಅವರೊಂದಿಗೆ ಅಂಬುತೀರ್ಥ ದೇವಸ್ಥಾನದಲ್ಲಿ ನಡೆದ ಧಾರ್ವಿುಕ ಕಾರ್ಯದಲ್ಲಿ ಪಾಲ್ಗೊಂಡರು. ಶಾಸಕ ಆರಗ ಜ್ಞಾನೇಂದ್ರ ಜೀವನ ಪರ್ಯಂತ ಶಾಸಕರಾಗಿರುತ್ತಾರೆ ಎಂದು ಹೇಳಿದ ಸಚಿವ ಈಶ್ವರಪ್ಪ, ಅವರ ಚಟುವಟಿಕೆ ನನಗೂ ಕೂಡ ಮಾರ್ಗಸೂಚಿಯಾಗಿದೆ. ಅವರೂ ಸಚಿವರಾಗಬೇಕೆಂಬುದು ನನ್ನ ಆಶಯ ಎಂದು ಪುನರುಚ್ಚರಿಸಿದರು.

    ಜಿಪಂ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಸದಸ್ಯರಾದ ಕೆ.ಶ್ರೀನಿವಾಸ್, ಅಪೂರ್ವ ಶರಧಿ, ತಾಪಂ ಸದಸ್ಯರಾದ ಚಂದವಳ್ಳಿ ಸೋಮಶೇಖರ್, ಲಕ್ಷ್ಮೀ ಉಮೇಶ್, ಗೀತಾ ಶೆಟ್ಟಿ, ಗ್ರಾಪಂ ಅಧ್ಯಕ್ಷ ಧರಣೇಶ್, ಜಿಪಂ ಸಿಇಒ ವೈಶಾಲಿ, ತಹಸೀಲ್ದಾರ್ ಡಾ. ಎಸ್.ಬಿ.ಶ್ರೀಪಾದ, ತಾಪಂ ಇಒ ಆಶಾಲತಾ, ಅಂಬುತೀರ್ಥ ರಾಘವೇಂದ್ರ, ನಾರಾಯಣ ರಾವ್, ಶಿವಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts