More

    ಬಾಗಿನ ನೀಡುವುದು ಪುಣ್ಯದ ಕೆಲಸ

    ಆಲೂರು: ಗೌರಿ-ಗಣೇಶ ಹಬ್ಬದ ದಿನದಂದು ಮಹಿಳೆಯರಿಗೆ ಬಾಗಿನ ನೀಡುವ ಕಾರ್ಯ ಮಹತ್ತರವಾದ ಹಾಗೂ ಪುಣ್ಯದ ಕೆಲಸ ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ತಾಲೂಕಿನ ಪಾಳ್ಯ ಹೋಬಳಿ ಕಾರ್ಜುವಳ್ಳಿ ಗ್ರಾಮದಲ್ಲಿರುವ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ, ಸಂಸ್ಥಾನ ಕಾರ್ಜುವಳ್ಳಿ ಹಿರೇಮಠದಲ್ಲಿ ಮಂಗಳವಾರ ಸ್ವರ್ಣಗೌರಿ ವ್ರತ ಆಚರಣೆ ಪ್ರಯುಕ್ತ ಆಯೋಜಿಸಿದ್ದ ಮಹಿಳೆಯರಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಆಧುನಿಕ ಭರಾಟೆಯಲ್ಲಿ ಜೀವನಶೈಲಿ ಬದಲಾದರೂ ಗೌರಿ ಹಬ್ಬ ಪಾರಂಪರಿಕ ಸಂಸ್ಕೃತಿಯನ್ನು ಇನ್ನು ಉಳಿಸಿಕೊಂಡು ಬಂದಿರುವುದು ಸಾಕ್ಷಿಯಾಗಿದೆ. ಈ ಸ್ವರ್ಣಗೌರಿ ಹಬ್ಬದಲ್ಲಿ ಬಾಗಿನ ಕೊಡುವುದು ಒಂದು ವಿಶೇಷ. ಅಂದರೆ ಅದನ್ನು ಗೌರವಪೂರ್ವಕವಾಗಿ ಕೊಡುವ ದಾನ ಅಥವಾ ಸತ್ಕಾರವೆಂದು ಕರೆಯುತ್ತಾರೆ. ಆದರೆ ಇಂದು ಕೆಲವು ಕುಟುಂಬಗಳಲ್ಲಿ ಆಸ್ತಿ ಮತ್ತಿತರ ಯಾವುದೋ ಒಂದು ವಿಚಾರಕ್ಕಾಗಿ ತವರು ಮನೆಯವರು ತಮ್ಮ ಹೆಣ್ಣು ಮಗಳಿಗೆ ಬಾಗಿನ ಕೊಡುವುದನ್ನು ನಿಲ್ಲಿಸಿರುವುದನ್ನು ನಾವು ಕಾಣುತ್ತೇವೆ. ಹೆಣ್ಣು ಮಕ್ಕಳಿಗೆ ಪ್ರಿಯವಾದ ಹಬ್ಬ ಇದಾಗಿರುವುದರಿಂದ ಯಾವುದೇ ಹೆಣ್ಣು ಮಗಳು ನೊಂದುಕೊಳ್ಳಬಾರದು ಎಂಬ ದೂರ ದೃಷ್ಟಿಯಿಂದ ಶ್ರೀಮಠದಲ್ಲಿ 300ಕ್ಕೂ ಹೆಚ್ಚು ಮಹಿಳೆಯರಿಗೆ ಬಾಗಿನ ನೀಡಲಾಗುತ್ತಿದೆ ಎಂದರು.

    ಕಾರ್ಯಕ್ರಮದಲ್ಲಿ ವೀರಶೈವ ಸಂಘದ ತಾಲೂಕು ಅಧ್ಯಕ್ಷ ರೇಣುಕಾ ಪ್ರಸಾದ್, ನಿರ್ದೇಶಕ ರಾಜೇಶ್, ಆಲೂರು ಕಟ್ಟಾಯ ಮಂಡಲದ ಬಿಜೆಪಿ ಅಧ್ಯಕ್ಷ ನಾಗರಾಜ್ ಹುಲ್ಲಹಳ್ಳಿ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗರಾಜ, ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಚಿಕ್ಕೋಟೆ ಮಹೇಶ್ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts