More

    ಬಸವ ಜಯಂತಿಯ ಭವ್ಯ ಶೋಭಾಯಾತ್ರೆ

    ಬಾಗಲಕೋಟೆ: ಸರ್ವರಿಗೂ ಸಮಪಾಲು, ಸರ್ವರಿಗೂ ಸಮಪಾಲು ಎಂದು ಸಾರಿದ ವಿಶ್ವಗುರು ಬಸವಣ್ಣನವರ ಕಾಯಕ ತತ್ವ ಸರ್ವಕಾಲಕ್ಕೂ ಪ್ರಸ್ತುತ ಎಂದು ಮಾಜಿ ಶಾಸಕರು, ಬವಿವ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.

    ಅವರು ಬಿ.ವ್ಹಿ.ವ್ಹಿ.ಸಂಘ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಅಕ್ಕನ ಬಳಗ,ಶಿವಾನುಭವ ಸಮಿತಿ,ಶರಣ ಸಾಹಿತ್ಯ ಪರಿಷತ್ತ್ ಸಹಯೋಗದಲ್ಲಿ ವಿಶ್ವಗುರು ಶ್ರೀ ಬಸವ ಜಯಂತಿ ನಿಮಿತ್ಯ ಹಮ್ಮಿಕೊಂಡ ಬಸವಣ್ಣನ ಭಾವ ಚಿತ್ರದ ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

    12ನೇ ಶತಮಾನದಲ್ಲಿಯೇ ಸಮಾಜಿಕ ಕ್ರಾಂತಿಯ ಹರಿಕಾರರಾಗಿ ಅನುಭವ ಮಂಟಪದ ಮುಖಾಂತರ ಪ್ರಜಾಪ್ರಭುತ್ವದ ಕಲ್ಪನೆಯನ್ನು ನೀಡಿ, ಎಲ್ಲ ಸಮುದಾಯದ ಎಲ್ಲ ಜನರಿಗೂ ಸಮಬಾಳು,ಸಮಪಾಲು ಎಂಬ ತತ್ವದಡಿ ಸಮಾನತೆಯನ್ನು ಸಾರುವ ಮೂಲಕ ಕಾಯಕ ಮಹತ್ವವನ್ನು ತಿಳಿಸಿದ್ದು ವಿಶ್ವಗುರು ಬಸವಣ್ಣ, ಅವರ ಕಾಯಕವೇ ಕೈಲಾಸ, ಇಂದಿಗೂ ಪ್ರಸ್ತೂತವಾಗಿದೆ ಎಂದರು.

    ಟೀಕಿನಮಠದ ಮಲ್ಲಿಕಾರ್ಜುನ ಶ್ರೀಗಳು, ಬಿಲ್ ಕೆರೂರಿನ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ಜರುಗಿದ ಶೋಭಾಯಾತ್ರೆ, ಬಿ.ವ್ಹಿ.ವ್ಹಿ.ಸಂಘ ಬೀಳೂರ ಗುರುಬಸವ ದೇವಸ್ಥಾನದಿಂದ ಬೃಹತ ಮೆರವಣಿಗೆ ಪ್ರಾರಂಭವಾಗಿ ಕಾಲೇಜು ರಸ್ತೆ, ಬಸವೇಶ್ವರ ವೃತ್ತ, ಮಹಾತ್ಮಗಾಂಧಿ ರಸ್ತೆ, ಪೋಲಿಸ್ ಚೌಕ್, ವಲ್ಲಬಾಯಿ ಚೌಕ್, ಅಡತ್ ಬಜಾರ್,ಟೀಕಿನ ಮಠ, ಚರಂತಿಮಠದ ಶಿವಾನುಭವ ಮಂಟಪ ತಲುಪಿ ಶೋಭಾಯಾತ್ರೆ ಮುಕ್ತಾಯಗೊಂಡಿತು.

    ಗಮನ ಸೆಳೆದ ಏತ್ತುಗಳು, ಬಸವಜಯಂತಿ ನಿಮಿತ್ಯ ರೈತಾಪಿ ಜನರು ಏತ್ತುಗಳಿಗೆ ಸ್ನಾನ ಮಾಡಿಸಿ ಅವುಗಳನ್ನು ಶೃಂಗರಿಸಿ ಪೂಜೆ ಸಲ್ಲಿಸಿದ ಸುಮಾರು 25ಕ್ಕೂ ಹೆಚ್ಚು ಜೋಡಿ ಏತ್ತುಗಳನ್ನು ಶೋಭಾಯಾತ್ರೆಯ ಮೆರವಣಿಗೆಯಲ್ಲಿ ಪಾಲ್ಘೋಂಡು ಜನರ ಗಮನ ಸೆಳೆದವು

    ಮೇರವಣಿಗೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಜಿ.ಎನ್.ಪಾಟೀಲ. ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಅಶೋಕ ಸಜ್ಜನ ಬೇವೂರ, ಗುರುಬಸವ ಸೂಳಿಬಾವಿ, ಮಹಾಂತೇಶ ಶೆಟ್ಟರ, ಚಂದ್ರಶೇಖರ ಶೇಟ್ಟರ, ಬಸವರಾಜ ಮುಕೂಪಿ, ಬಸವರಾಜ ಯಂಕಂಚಿ, ಪಂಡಿತ ಆರಾಧ್ಯ, ಅಶೋಕ ರೇಣುಕೊಪ್ಪ, ಶರಣಪ್ಪ ಗುಳೆದ, ವಿಜಯಕುಮಾರ ಅಂಗಡಿ, ಕುಮಾರ ಹಿರೇಮಠ, ಚೆನ್ನಯ್ಯ ಬಳೂಲಮಠ, ಪ್ರಕಾಶ ರೇವಡಿಗಾರ, ಎ.ಎಸ್.ಪಾವಟೆ, ಶಿವಾನಂದ ಟವಳಿ, ರಾಜೇಂದ್ರ ತಪಶೆಟ್ಟಿ, ಸಂಗಯ್ಯ ಗಣಾಚಾರಿ, ಸುರೇಶ ಮಜ್ಜಗಿ, ಬಸವರಾಜ ತಡಲಗಿ ಅಕ್ಕನ ಬಳಗ ಸದಸ್ಯರು, ರೈತ ಬಾಂಧವರು ಸೇರಿದಂತೆ ಅನೇಕರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts