More

    ಬಸವೇಶ್ವರ ಬ್ಯಾಂಕ್ ಬೆಳಗಾವಿಗೆ ಹೆಮ್ಮೆ

    ಬೆಳಗಾವಿ: ಸಮಾಜಕ್ಕಾಗಿ ತನ್ನನ್ನು ಸಮರ್ಪಿಸಿಕೊಂಡಿರುವ ಬೆಳಗಾವಿ ಶ್ರೀ ಬಸವೇಶ್ವರ ಕೋ- ಆಪರೇಟಿವ್ ಬ್ಯಾಂಕ್ ವಜ್ರ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಬೆಳಗಾವಿಗರಿಗೆ ಹೆಮ್ಮೆಯ ವಿಷಯ ಎಂದು ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ತಿಳಿಸಿದರು.

    ನಗರದ ಕೆಪಿಟಿಸಿಎಲ್ ನೌಕರರ ಸಮುದಾಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೆಳಗಾವಿ ಶ್ರೀಬಸವೇಶ್ವರ ಕೋ- ಆಪರೇಟಿವ್ ಬ್ಯಾಂಕ್‌ನ 60ನೇ ವರ್ಷದ ವಜ್ರ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹಿರಿಯರು ಸಮಾಜದಲ್ಲಿನ ಎಲ್ಲ ವರ್ಗದ ಬಡ ಮಕ್ಕಳಿಗೆ, ಬಡ ಕುಟುಂಬಗಳ ಬಗ್ಗೆ ಎಷ್ಟು ಚಿಂತನೆ ಮಾಡುತ್ತಿದ್ದರು ಎಂಬುದಕ್ಕೆ 1963ರಲ್ಲಿ ಸ್ಥಾಪನೆಗೊಂಡ ಶ್ರೀಬಸವೇಶ್ವರ ಕೋ- ಆಪರೇಟಿವ್ ಬ್ಯಾಂಕ್ ಸಾಕ್ಷಿಯಾಗಿದೆ ಎಂದರು. 1963ರಲ್ಲಿ ಬಸವೇಶ್ವರ ಹೆಸರಿನಲ್ಲಿ 20,400 ಷೇರು ಬಂಡವಾಳದೊಂದಿಗೆ ಸ್ಥಾಪನೆಗೊಂಡ ಬೆಳಗಾವಿ ಶ್ರೀಬಸವೇಶ್ವರ ಕೋ- ಆಪರೇಟಿವ್ ಬ್ಯಾಂಕ್ ತನ್ನ 60 ವರ್ಷದ ಅವಧಿಯಲ್ಲಿ ಕೋಟ್ಯಂತರ ರೂ. ಬಂಡವಾಳದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಬಸವಣ್ಣವರ ತತ್ತ್ವ, ಸಿದ್ಧಾಂತಗಳ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ಎಲ್ಲ ವರ್ಗದ ಕಲ್ಯಾಣಕ್ಕಾಗಿ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ಹೇಳಿದರು.

    ಬೆಳಗಾವಿ ಶ್ರೀ ಬಸವೇಶ್ವರ ಕೋ- ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರು, ಅಧಿಕಾರಿ ಹಾಗೂ ಸಿಬ್ಬಂದಿ ಪ್ರಾಮಾಣಿಕ, ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ಹಾಗಾಗಿಯೇ ಯಾವುದೇ ಕಪ್ಪುಚುಕ್ಕೆಯಿಲ್ಲದೆ ಬ್ಯಾಂಕ್ ಬೆಳಗಾವಿ ನಗರ ಸೇರಿ ವಿವಿಧ ಜಿಲ್ಲೆಗಳಲ್ಲೂ ತನ್ನ ಶಾಖೆಗಳನ್ನು ವಿಸ್ತರಿಸಿಕೊಂಡಿದೆ. ಮುಂಬರುವ ದಿನಗಳಲ್ಲಿ ಎಲ್ಲ ವರ್ಗದವರಿಗೂ ಇನ್ನುಷ್ಟು ಸೌಲಭ್ಯ ಸಿಗಲಿ. ಶತಮಾನೋತ್ಸವ ಆಚರಿಸಿಕೊಳ್ಳಲಿ ಎಂದು ಶುಭ ಹಾರೈಸಿದರು.

    ಶ್ರೀ ಬಸವೇಶ್ವರ ಕೋ- ಆಪರೇಟಿವ್ ಬ್ಯಾಂಕ್ ನಿರ್ದೇಶಕ ರಮೇಶ ಕಳಸಣ್ಣವರ ಮಾತನಾಡಿ, ಗ್ರಾಹಕರ ಸೇವೆಯಲ್ಲಿ ಬ್ಯಾಂಕ್ ಯಶಸ್ವಿಯಾಗಿ 60 ವರ್ಷ ಪೂರೈಸಿದೆ. 1963ರಿಂದ 2023ರ ನಡುವಿನ ಅವಧಿಯಲ್ಲಿ ಬ್ಯಾಂಕ್ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಸಾಕಷ್ಟು ಜನರು ಬ್ಯಾಂಕ್‌ನ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ ಎಂದು ಸ್ಮರಿಸಿದರು.

    ಬ್ಯಾಂಕ್ ಅಧ್ಯಕ್ಷ ಬಸವರಾಜ ವಿ.ರೊಂಡ, ಉಪಾಧ್ಯಕ್ಷೆ ದೀಪಾ ಎಂ.ಕುಡಚಿ, ನಿರ್ದೇಶಕರಾದ ಬಾಳಪ್ಪ ಬಿ. ಕಗ್ಗಣಗಿ, ವಿಜಯಕುಮಾರ ಅಂಗಡಿ, ಪ್ರಕಾಶ ಬಾಳೇಕುಂದ್ರಿ, ರಮೇಶ ಸಿದ್ದಣ್ಣವರ, ಸರಳಾ ಎಸ್.ಹೇರೆಕರ, ಬಸವರಾಜ ಉಪ್ಪಿನ, ಗಿರೀಶ ಕತ್ತಿಶೆಟ್ಟಿ, ಗಿರೀಶ ಬಾಗಿ, ಸಚಿನ ಆರ್.ಶಿವಣ್ಣ, ವೀರಣ್ಣ ಹುಲಮನಿ, ಸತೀಶ ಕೆ. ಪಾಟೀಲ, ಚಂದ್ರಕಾಂತ ಕಟ್ಟಿಮನಿ, ಮಹೇಶ ಅಥಣಿ, ಚಂದ್ರಶೇಖರ ಹಿರೇಮಠ, ವ್ಯವಸ್ಥಾಪಕ ಎಸ್.ಎಸ್.ವಾಲಿ, ಉಪವ್ಯವಸ್ಥಾಪಕ ಬಿ.ಜಿ.ನ್ಯಾಮಗೌಡ, ಬ್ಯಾಂಕ್‌ನ ಗ್ರಾಹಕರು, ಅಧಿಕಾರಿ, ಸಿಬ್ಬಂದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts