More

    ಬರ ಪರಿಹಾರ ಬಿಡುಗಡೆಗೆ ಆಗ್ರಹ

    ಚಿತ್ರದುರ್ಗ: ಬರ ಪರಿಹಾರ ಬಿಡುಗಡೆಗೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ರಾಜ್ಯ ರೈತಸಂಘ ಜಿಲ್ಲಾ ಘಟಕದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

    ವಿದ್ಯುತ್ ಹೊಸ ಕಾಯ್ದೆ ಹಿಂಪಡೆದು, ಹಿಂದಿನಂತೆ ಅಕ್ರಮ-ಸಕ್ರಮಕ್ಕೆ ಅವಕಾಶ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

    ರಾಜ್ಯದ 193 ತಾಲೂಕುಗಳು ತೀವ್ರ ಬರಗಾಲಕ್ಕೆ ಒಳಗಾಗಿವೆ. ಆದರೆ, ಸರ್ಕಾರ ಬಿಡುಗಡೆಗೊಳಿಸಿರುವ 2ಸಾವಿರ ರೂ. ಪರಿಹಾರ ಕೆಲ ರೈತರಿಗೆ ಮಾತ್ರ ದೊರೆತಿದ್ದು, ಬಹುತೇಕರ ಖಾತೆಗೆ ಜಮಾ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಜಿಲ್ಲೆಯಲ್ಲಿ 3.38 ಲಕ್ಷ ರೈತರು ಎಫ್‌ಐಡಿಗೆ ನೋಂದಾಯಿಸಿದ್ದು, ಅದರಲ್ಲಿ 83,551 ಮಂದಿ ಮಾತ್ರ ಬೆಳೆ ವಿಮೆಗೆ ಅರ್ಹರಾಗಿದ್ದಾರೆ. ಇನ್ನುಳಿದ 2,54,449 ರೈತರಿಗೆ ಸರ್ಕಾರದಿಂದ ಯಾವುದೇ ಪರಿಹಾರ ಬಂದಿಲ್ಲ. ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಧಾವಿಸಬೇಕು. ಅದಕ್ಕಾಗಿ ಕೂಡಲೇ ಎಕರೆಗೆ 25 ಸಾವಿರ ರೂ. ನಂತೆ ಹಣ ಬಿಡುಗಡೆ ಮಾಡಬೇಕು ಎಂದು ಕೋರಿದರು.

    ಸಂಘದ ತಾಲೂಕು ಘಟಕದ ಅಧ್ಯಕ್ಷ ಧನಂಜಯ, ಮುಖಂಡರಾದ ಕೆ.ಪಿ.ಭೂತಯ್ಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ತಿಪ್ಪೇಸ್ವಾಮಿ, ರೇವಣ್ಣ, ಶಿವಕುಮಾರ್, ಏಕಾಂತಪ್ಪ, ಟಿ.ಹಂಪಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts