More

    ಬರೆಯಲು ಬಾರದಿದ್ದರೆ ತರಬೇತಿ ನೀಡ್ತೇನೆ, ಕಾರ್ಯದರ್ಶಿಗಳ ವಿರುದ್ಧ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಕಿಡಿ, ಪ್ರಗತಿ ಪರಿಶೀಲನಾ ಸಭೆಯಲ್ಲಿ ವಾಚಾಮಗೋಚರವಾಗಿ ನಿಂದನೆ

    ಗೌರಿಬಿದನೂರು: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ, ಮನಬಂದಂತೆ ಮಾತನಾಡುವ ಮೂಲಕ ಕಾರ್ಯದರ್ಶಿಗಳನ್ನು ಕೊಳಕು ಭಾಷೆಯಿಂದ ನಿಂದಿಸಿದ ಪ್ರಸಂಗ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂಡುಬಂತು.

    ನಗರದ ಡಿಸಿಸಿ ಬ್ಯಾಂಕ್‌ನ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗೌಡರಿಗಿಂತ ವಯಸ್ಸಿನಲ್ಲಿ ಹಿರಿಯರಾದ ಕಾರ್ಯದರ್ಶಿಗಳೂ ಭಾಗವಹಿಸಿದ್ದರು. ಇದ್ಯಾವುದನ್ನೂ ಲೆಕ್ಕಿಸದೆ, ನಗದು ಪುಸ್ತಕ ನಿರ್ವಹಣೆ ಕುರಿತಂತೆ ಕಾರ್ಯದರ್ಶಿಗಳನ್ನು ಬಾಯಿಗೆ ಬಂದಂತೆ ವಾಚಾಮಗೋಚರ ನಿಂದಿಸಿದರು. ಕೆಲ ಕಾರ್ಯದರ್ಶಿಗಳು ಖಾಸಗಿಯವರಿಂದ ವ್ಯವಸಾಯ ಸೇವಾ ಸಹಕಾರ ಬ್ಯಾಂಕಿನ ನಗದು ಪುಸ್ತಕ ಬರೆಸುತ್ತಿರುವುದು ಸರಿಯ್ಲ. ನಿಮಗೆ ಬರೆಯಲು ಬಾರದಿದ್ದರೆ ತರಬೇತಿ ನೀಡುತ್ತೇನೆ, ಪಡೆದುಕೊಳ್ಳಿ. 60 ವರ್ಷ ವಯಸ್ಸಾಗಿರುವವರನ್ನು ಓಡಿಸಿ ವಿದ್ಯಾವಂತರನ್ನು ನೇಮಕ ಮಾಡಿಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಗೋವಿಂದೇಗೌಡ, ಬಾಯಿ ಹರಿಬಿಟ್ಟರೂ ಕಾರ್ಯದರ್ಶಿಗಳು ಮೌನಕ್ಕೆ ಶರಣಾದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಮರಳೂರು ಹನುಮಂತರೆಡ್ಡಿ ಮಾತನಾಡಿ, ಜ.25 ರೊಳಗೆ ವ್ಯವಸಾಯ ಸೇವಾ ಸಹಕಾರ ಸಂಗಳಿಗೆ ನೀಡಿರುವ ಠೇವಣಿ ಗುರಿ ಸಂಗ್ರಹಿಸಬೇಕು, ಠೇವಣಿ ಸಂಗ್ರಹಿಸದ ವ್ಯವಸಾಯ ಸೇವಾ ಸಹಕಾರ ಸಂಗಳ ಸಾಲ ಮಂಜೂರಾತಿ ತಡೆಹಿಡಿಯಲಾಗುವುದು ಎಂದು ಎಚ್ಚರಿಸಿದರು.

    ಬ್ಯಾಂಕ್‌ನ ಎಂ.ಡಿ.ಶಿವಕುಮಾರ್, ಪ್ರಧಾನ ವ್ಯವಸ್ಥಾಪಕ ಬೈರೇಗೌಡ, ವ್ಯವಸ್ಥಾಪಕ ಮೊಹಮ್ಮದ್ ಅಸ್ಲಾಂ ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗ, ವ್ಯವಸಾಯ ಸೇವಾ ಸಹಕಾರ ಸಂಗಳ ಕಾರ್ಯದರ್ಶಿಗಳು, ಅಧ್ಯಕ್ಷರು, ನಿರ್ದೇಶಕರು ಹಾಜರಿದ್ದರು.

    ಕಾರ್ಯದರ್ಶಿಗಳ ವಿರುದ್ಧ ಅಸಮಾಧಾನ: ತಾಲೂಕಿನಲ್ಲಿ 35 ಸೇವಾ ಸಹಕಾರ ಸಂಗಳಿದ್ದು, 27 ಸಂಗಳು ಗಣಕೀಕೃತವಾಗಿವೆ. ಇನ್ನು 15 ದಿನಗಳಲ್ಲಿ ಶೇ.100 ಗಣಕೀಕೃತಗೊಳಿಸಲಾಗುವುದು ಎಂದು ಭರವಸೆ ನೀಡಿದ ಗೋವಿಂದಗೌಡ, ಕಾರ್ಯದರ್ಶಿಗಳು ಬದ್ಧತೆಯಿಂದ ಕೆಲಸ ಮಾಡಿದಾಗ ಮಾತ್ರ ಸಹಕಾರ ಸಂಗಳು ಪ್ರಗತಿ ಸಾಧಿಸಲು ಸಾಧ್ಯ. ಆದರೆ ಆಡಳಿತ ಮಂಡಳಿ ಹಿಡಿತವ್ಲಿದ ಹಾಗೂ ಸಕಾಲಕ್ಕೆ ಸಭಾ ನಡಾವಳಿ ಇ್ಲದಿರುವ ಕಾರಣ ಕಾರ್ಯದರ್ಶಿಗಳು ದೊರೆಗಳಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts