More

    ಬರಲಿದೆ ಬ್ಲ್ಯಾಕ್ ಶೀಪ್; ಜೀವನ್ ಹಳ್ಳಿಕಾರ್ ನಿರ್ದೇಶಿಸಿ, ನಟಿಸುತ್ತಿರುವ ಚಿತ್ರ

    ಬೆಂಗಳೂರು: ‘ದೇವ್ ಸನ್ ಆ್ ಮುದ್ದೇಗೌಡ’ ಚಿತ್ರದಲ್ಲಿ ಮಿಂಚಿದ್ದ ನಟ ಜೀವನ್ ಹಳ್ಳಿಕಾರ್ ಇದೀಗ ಡೈರೆಕ್ಟರ್ ಕ್ಯಾಪ್ ಧರಿಸಿದ್ದಾರೆ. ಅವರು ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ಚಿತ್ರ ‘ಬ್ಲ್ಯಾಕ್ ಶೀಪ್’.

    ನಿರ್ದೇಶನದ ಜತೆಗೆ ಜೀವನ್, ಕಥೆ-ಚಿತ್ರಕಥೆ ಬರೆದು, ನಾಯಕನಾಗಿಯೂ ಕಾಣಿಸಿಕೊಳ್ಳಲಿದ್ದಾರೆ. ಮೂಲತಃ ಡಾನ್ಸರ್ ಆದ ಕಾರಣ ನೃತ್ಯ ಸಂಯೋಜನೆಯ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ. ‘ನಾಯಕ ಮತ್ತು ಖಳನಾಯಕನ ನಡುವೆ ಸಂಘರ್ಷ ನಡೆದು, ನಂತರ ಅದನ್ನು ಮರೆತು ಹೇಗೆ ಜೀವನ ನಡೆಸುತ್ತಾರೆ? ಎಂಬುದನ್ನು ಕುತೂಹಲಕಾರಿಯಾಗಿ ತೋರಿಸುವ ಪ್ರಯತ್ನ ಮಾಡಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ ಜೀವನ್. ಜೀವನ್ ಜತೆ ಯುವ ಪ್ರತಿಭೆಗಳಾದ ವಿಶಾಲ್ ಕಿರಣ್, ಪ್ರಶಾಂತ್, ವಿ. ಹರಿ, ನಿಶಾ ಹೆಗ್ಡೆ, ಶಿವಾಂಗ್ ತಾರಾಗಣದಲ್ಲಿದ್ದು, ಕೃಷ್ಣ ಹೆಬ್ಬಾಳೆ, ಕೆ.ಎಸ್. ಶ್ರೀಧರ್, ಸುದರ್ ವೀಣಾ, ಭಜರಂಗಿ ಪ್ರಸನ್ನ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

    ಉಳಿದಂತೆ ಚಿತ್ರಕ್ಕೆ ಪೀಪಲ್ ಟ್ರೀ ಸಂಗೀತ, ದೇವೂ ಛಾಯಾಗ್ರಹಣ, ಆಕಾಶ್. ಎಸ್. ಮಹೇಂದ್ರಕರ್ ಸಂಕಲನವಿರಲಿದೆ. ಈಗಾಗಲೇ, ಬೆಂಗಳೂರು, ಮಂಗಳೂರು, ಮುಂಬೈನಲ್ಲಿ ಚಿತ್ರೀಕರಣ ಮಾಡಲಾಗಿದ್ದು ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts