More

    ಬಡ್ಡಿ ಮನ್ನಾ ಯೋಜನೆ ಲಾಭ ಪಡೆಯಿರಿ

    ಸೊರಬ: ರೈತರು ಜೂ.30ರೊಳಗೆ ಕೃಷಿ ಸಾಲಗಳ ಕಂತಿನ ಅಸಲನ್ನು ಪಾವತಿಸಿ ಬಡ್ಡಿ ಮನ್ನಾ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸೊರಬ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ನಾಗರಾಜ ಗೌಡ ಚಿಕ್ಕಾವಲಿ ತಿಳಿಸಿದರು.

    ಸೊರಬ ಬ್ಯಾಂಕ್​ನಲ್ಲಿ 5,409 ಸದಸ್ಯರಿದ್ದು, 535 ಸುಸ್ತಿ ಸಾಲಗಾರರಿದ್ದಾರೆ. ಇವರಲ್ಲಿ 197.95 ಲಕ್ಷ ರೂ. ಅಸಲು ಪಾವತಿಸಿದರೆ 224.41 ಲಕ್ಷ ರೂ. ಬಡ್ಡಿ ಮನ್ನಾ ಆಗುತ್ತದೆ. ಈಗಾಗಲೇ 148 ಜನ 45.78 ಲಕ್ಷ ರೂ. ಅಸಲು ಪಾವತಿಸಿ ಯೋಜನೆಯ ಲಾಭ ಪಡೆದಿದ್ದಾರೆ. ಇನ್ನುಳಿದ 387 ಮಂದಿ 152.17 ಲಕ್ಷ ಪಾವತಿಸಿದರೆ 184.92 ಲಕ್ಷ ರೂ. ಬಡ್ಡಿ ಮನ್ನಾ ಆಗಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ನಮ್ಮ ಬ್ಯಾಂಕ್​ನಲ್ಲಿ 6.43ರ ಬಡ್ಡಿ ದರದಲ್ಲಿ ಸಾಲ ಪಡೆದ 700 ಜನರಿದ್ದು ಇನ್ನೂ 202 ಜನ ಬಾಕಿದಾರರಿದ್ದಾರೆ. ಅವರು 63.54 ಲಕ್ಷ ಅಸಲು ಪಾವತಿಸಿದರೆ 29.32 ಲಕ್ಷ ರೂ. ಬಡ್ಡಿ ಮನ್ನಾ ಸೌಲಭ್ಯ ಪಡೆಯಬಹುದು. ಜಿಲ್ಲೆಯಲ್ಲಿರುವ 5,275 ಸುಸ್ತಿ ಸಾಲಗಾರರಿಂದ 2166.75 ಲಕ್ಷ ಅಸಲು ಪಾವತಿಯಾದರೆ 2564.10 ಲಕ್ಷ ರೂ. ಬಡ್ಡಿ ಮನ್ನಾ ಸೌಲಭ್ಯ ದೊರೆಯುತ್ತದೆ. ಇಲ್ಲೂ ಕೂಡ 1,965 ಜನರು 393.11 ಲಕ್ಷ ಅಸಲು ಪಾವತಿಸಿ 417.10 ಲಕ್ಷ ರೂ. ಬಡ್ಡಿ ಮನ್ನಾ ಸೌಲಭ್ಯ ಪಡೆದಿದ್ದಾರೆ. ಇನ್ನೂ 3,310 ಸುಸ್ತಿದಾರರಿದ್ದು ಇವರಿಂದ 1,773.60 ಲಕ್ಷ ಅಸಲು ಪಾವತಿಯಾದರೆ 2,147.04 ಲಕ್ಷ ರೂ. ಬಡ್ಡಿ ಮನ್ನಾ ಸೌಲಭ್ಯ ಪಡೆಯಬಹುದಾಗಿದೆ ಎಂದು ವಿವರಿಸಿದರು.

    ಜಿಲ್ಲಾ ಕಾಸಾರ್ಡ್ ವ್ಯವಸ್ಥಾಪಕ ಎಂ.ಡಿ.ಟಿಕೇಶಪ್ಪ, ಸದಸ್ಯ ವೀರೇಂದ್ರ ಸತೀಶ್, ಸರ್ವಮಂಗಳಾ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts