More

    ಬಡವರಿಗೆ ದುಃಖದಲ್ಲೂ ಆರ್ಥಿಕ ಹೊರೆ

    ಸೋಮು ಲದ್ದಿಮಠ ರೋಣ

    ತಾಲೂಕು ವ್ಯಾಪ್ತಿಯಲ್ಲಿ ಅವಘಡದಿಂದಲೋ ಅಥವಾ ಆತ್ಮಹತ್ಯೆಯಿಂದಲೋ ಯಾರಾದರೂ ಸಾವಿಗೀಡಾದರೆ ದುಃಖದಲ್ಲೂ ಮೃತರ ಸಂಬಂಧಿಕರು ಮರಣೋತ್ತರ ಪರೀಕ್ಷೆಗಾಗಿ ಅಲೆದಾಡುವಂತಹ ಸ್ಥಿತಿ ನಿರ್ವಣವಾಗಿದೆ. ಪೋಸ್ಟ್ ಮಾರ್ಟಮ್ಾಗಿ ಸಾವಿರಾರು ರೂ. ಖರ್ಚು ಮಾಡಬೇಕಾಗಿರá-ವುದರಿಂದ ಬಡವರು ಅಕ್ಷರಶಃ ನಲá-ಗá-ವಂತಾಗಿದೆ.

    ರೋಣ ಹಾಗೂ ಗಜೇಂದ್ರಗಡ ಅವಳಿ ತಾಲೂಕುಗಳಲ್ಲಿ 2 ತಾಲೂಕು ಆಸ್ಪತ್ರೆ, 1 ಸಮುದಾಯ ಆರೋಗ್ಯ ಕೇಂದ್ರ, 11 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಅವುಗಳಲ್ಲಿ 10 ಕೇಂದ್ರಗಳಲ್ಲಿ ಮರಣೋತ್ತರ ಪರೀಕ್ಷೆಗೆ ಕಟ್ಟಡಗಳೇ ಇಲ್ಲ.

    ಅಪಘಾತ, ವಿಷ ಕುಡಿದು ಆತ್ಮಹತ್ಯೆ, ಕೊಲೆ ಇತ್ಯಾದಿಗಳು ನಡೆದಾಗ ಮರಣೋತ್ತರ ಪರೀಕ್ಷೆ ಮಾಡಬೇಕಾಗುತ್ತದೆ. ಆದರೆ, ಕೊಠಡಿಗಳಿಲ್ಲದ್ದರಿಂದ ಬಯಲು ಪ್ರದೇಶದಲ್ಲಿಯೇ ಶವ ಪರೀಕ್ಷೆ ಮಾಡುವುದು ಸಾಮಾನ್ಯವಾಗಿದೆ. ಯಾವಗಲ್ಲ, ಅಬ್ಬಿಗೇರಿ, ಸವಡಿ, ಬೆಳವಣಿಕಿ, ಹಿರೇಹಾಳ, ಮುಶಿಗೇರಿ, ಸೂಡಿ, ಶಾಂತಗೇರಿ, ನಿಡಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮರಣೋತ್ತರ ಪರೀಕ್ಷೆಯ ಕಟ್ಟಡಗಳೇ ಇಲ್ಲ.

    ಅವ್ಯವಸ್ಥೆಯ ಆಗರ: ರೋಣ, ಗಜೇಂದ್ರಗಡ, ನರೇಗಲ್ಲ ಹಾಗೂ ಹೊಳೆಆಲೂರಿನಲ್ಲಿ ಮರಣೋತ್ತರ ಪರೀಕ್ಷೆ ಕಟ್ಟಡಗಳಿದ್ದವು. ಈ ಪೈಕಿ ಹೊಳೆಆಲೂರು ಮತ್ತು ನರೇಗಲ್ಲದ ಕಟ್ಟಡಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದರಿಂದ ನೆಲಸಮ ಮಾಡಲಾಗಿದೆ. ಈಗ ಗಜೇಂದ್ರಗಡ ಹಾಗೂ ರೋಣದಲ್ಲಿ ಮಾತ್ರ ಪೋಸ್ಟ್ ಮಾರ್ಟಮ್ ಮಾಡಲಾಗá-ತ್ತಿದೆ. ಗಜೇಂದ್ರಗಡದಲ್ಲಿ ನೂತನ ಕಟ್ಟಡದ ವ್ಯವಸ್ಥೆ ಇರá-ವುದá-ರಿಂದ ಮರಣೋತ್ತರ ಪರೀಕ್ಷೆಗೆ ಯಾವುದೇ ಅಡ್ಡಿ ಇಲ್ಲ. ಆದರೆ, ರೋಣ ತಾಲೂಕು ಆಸ್ಪತ್ರೆಯಲ್ಲಿರá-ವ ಪೋಸ್ಟ್ ಮಾರ್ಟಮ್ ಕಟ್ಟಡ ಮಾತ್ರ ಸಂಪೂರ್ಣ ಅವ್ಯವಸ್ಥೆಯ ಆಗರವಾಗಿದೆ. ಇಲ್ಲಿನ ಕಟ್ಟಡ ಹಳೆಯದ್ದಾಗಿದ್ದರಿಂದ ಹೆಂಚá-ಗಳು ಒಡೆದು ಹಾಳಾಗಿವೆ. ಮಳೆ ಬಂದರೆ ಕಟ್ಟಡದಲ್ಲಿ ನೀರು ತುಂಬಿ ರಾಡಿಮಯವಾಗುತ್ತದೆ. ಮುಖ್ಯವಾಗಿ ಈ ಕಟ್ಟಡಕ್ಕೆ ನಿರ್ವಹಣೆಯೇ ಇಲ್ಲ. ನೀರು ಹಾಗೂ ಕರೆಂಟಿನ ಸೌಲಭ್ಯವಿಲ್ಲ. ಶವ ಮಲಗಿಸಲು ಸೂಕ್ತವಾದ ಕಟ್ಟೆ ಅಥವಾ ಮಂಚದ ವ್ಯವಸ್ಥೆ ಇಲ್ಲ. ಶವ ಪರೀಕ್ಷೆಗೆ ಅಗತ್ಯವಿರá-ವ ಸಲಕರಣೆಗಳನ್ನಿಡಲು ಅನá-ಕೂಲವೇ ಇಲ್ಲ. ಸುತ್ತಲೂ ಜಾಲಿ ಕಂಟಿ ಬೆಳೆದು ಸರಿಸೃಪಗಳ ತಾಣವಾಗಿ ಮಾರ್ಪಟ್ಟಿದೆ. ಇಷ್ಟೆಲ್ಲ ಸಮಸ್ಯೆಗಳ ಮಧ್ಯೆ ಅನಿವಾರ್ಯವಾಗಿ ಇದೇ ಕಟ್ಟಡದಲ್ಲಿ ಮರಣೋತ್ತರ ಪರೀ್ಷೆ ಮಾಡಲಾಗá-ತ್ತಿದೆ. ಹೀಗಾಗಿ, ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ಪೋಸ್ಟ್ ಮಾರ್ಟಮ್ ಮಾಡಲು ವ್ಯವಸ್ಥೆಯಾದರೆ ಬಡವರಿಗೆ ಆರ್ಥಿಕ ಹೊರ ತಪ್ಪುತ್ತದೆ. ತಾಲೂಕು ಆಸ್ಪತ್ರೆಯಲ್ಲಂತೂ ಅತ್ಯಾಧá-ನಿಕ ಸೌಲಭ್ಯವುಳ್ಳ ಪೋಸ್ಟ್ ಮಾರ್ಟಮ್ ಕಟ್ಟಡದ ಅಗತ್ಯ ಇರá-ವುದರಿಂದ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಮರಣೋತ್ತರ ಪರೀಕ್ಷೆಗೆ ನೂತನ ಕಟ್ಟಡ ನಿರ್ವಿುಸಿ ಸೌಲಭ್ಯ ಕಲ್ಪಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.

    ಸಾವಿರಾರು ರೂಪಾಯಿ ಖರ್ಚು: ರೋಣ ತಾಲೂಕಿನ ಸá-ಮಾರು ನೂರು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದಾದರೂ ದುರ್ಘಟನೆ ಸಂಭವಿಸಿ ವ್ಯಕ್ತಿಗಳು ಮೃತಪಟ್ಟರೆ, ಅಪಘಾತವಾದರೆ ಅಥವಾ ಯಾರಾದರೂ ಆತ್ಮಹತ್ಯೆ ಮಾಡಿಕೊಂಡರೆ, ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ವಾಹನ ಅಥವಾ ಖಾಸಗಿ ಆಂಬá-ಲೆನ್ಸ್ ಮೂಲಕ ರೋಣ ಪಟ್ಟಣದ ತಾಲೂಕು ಆಸ್ಪತ್ರೆಗೆ ಶವವನ್ನು ತಂದು ಮರಣೋತ್ತರ ಪರೀಕ್ಷೆ ಮಾಡಿಸಬೇಕು. ರೋಣ ತಾಲೂಕು ಆಸ್ಪತ್ರೆಯಲ್ಲಿ ಸೂಕ್ತ ಸೌಲಭ್ಯವಿಲ್ಲದ ಕಾರಣ ಪೋಸ್ಟ್ ಮಾರ್ಟಮ್ ಸಂದರ್ಭದಲ್ಲಿ ಅಗತ್ಯವಾಗಿ ಬೇಕಾಗá-ವ ಬಟ್ಟೆ, ಕೆಮಿಕಲ್, ಅಗತ್ಯ ಸಲಕರಣೆ ಸೇರಿದಂತೆ ಇತರೆ ವಸ್ತುಗಳನ್ನು ತರಿಸಲು ಮೃತರ ಸಂಬಂಧಿಕರಿಂದಲೇ ಒಂದು ಸಾವಿರ ರೂಪಾಯಿ ಪಡೆಯಾಗá-ತ್ತದೆ. ಹೀಗಾಗಿ ಮೃತರ ಸಂಬಂಧಿಕರು ದುಃಖದಲ್ಲೂ ಆರ್ಥಿಕ ಹೊರೆ ಹೊರಬೇಕಾದ ಅನಿವಾರ್ಯತೆ ಉಂಟಾಗಿದೆ.

    ನಮಗೆ ಜಿಪಂ ಹಾಗೂ ತಾಪಂನಿಂದ ಅನುದಾನ ಬರá-ತ್ತದೆ. ಆಸ್ಪತ್ರೆಗಳಲ್ಲಿ ಮರಣೋತ್ತರ ಪರೀಕ್ಷೆ ಕಟ್ಟಡ ಅತ್ಯಂತ ಅವಶ್ಯಕವಾಗಿದೆ. ಕಟ್ಟಡ ನಿರ್ವಣಕ್ಕೆ ತಾಪಂ ಹಾಗೂ ಜಿಪಂನ ಪ್ರತಿ ಸಭೆಯಲ್ಲಿಯೂ ಬೇಡಿಕೆ ಇಟ್ಟಿದ್ದೇವೆ. ಆದರೆ, ಇದುವರೆಗೂ ನಮಗೆ ಯಾವುದೇ ರೀತಿಯ ಅನುದಾನ ಬಿಡುಗಡೆಯಾಗಿಲ್ಲ. ಮುಂಬರುವ ದಿನಗಳಲ್ಲಿ ಅನುದಾನ ನೀಡಿದರೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮರಣೋತ್ತರ ಪರೀಕ್ಷೆ ಕಟ್ಟಡ ನಿರ್ವಿುಸಲಾಗá-ತ್ತದೆ.
    | ಡಾ. ರಘು ಹೊಸೂರ, ತಾಲೂಕು ಆಸ್ಪತ್ರೆ ವೈದ್ಯ

    ಗ್ರಾಮೀಣ ಭಾಗದಲ್ಲಿ ಅಪಘಾತ, ಆತ್ಮಹತ್ಯೆ ಕೊಲೆ ನಡೆದಾಗ ಶವ ಪರೀಕ್ಷೆ ಮಾಡಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮರಣೋತ್ತರ ಪರೀಕ್ಷೆ ಕೇಂದ್ರಗಳಿಲ್ಲ. ಹೀಗಾಗಿ, ರೋಣ ಪಟ್ಟಣದ ತಾಲೂಕು ಆಸ್ಪತ್ರೆಗೆ ಹೋಗಬೇಕಾಗುತ್ತದೆ. ಅಲ್ಲಿಗೆ ಹೋಗಲು ಆಂಬುಲೆನ್ಸ್ ಸೌಲಭ್ಯ ಕೂಡ ಇಲ್ಲ. ಗ್ರಾಮೀಣ ಭಾಗದ ಬಡ ರೈತ ಕುಟುಂಬಗಳಿಗೆ ಒಂದು ಕಡೆ ದುರ್ಮರಣದ ನೋವಿನ ಜತೆಗೆ ಶವ ಪರೀಕ್ಷೆ ಮಾಡಿಸá-ವುದು ಭಾರವಾಗಿ ಪರಿಣಮಿಸಿದೆ. ಹೀಗಾಗಿ ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮರಣೋತ್ತರ ಪರೀಕ್ಷೆಗಾಗಿ ಸೂಕ್ತ ಕಟ್ಟಡ ನಿರ್ವಿುಸಿ ಅಗತ್ಯ ಸೌಲಭ್ಯ ಕಲ್ಪಿಸಬೇಕು.
    | ಡಾ. ಶಶಿಧರ ಹಟ್ಟಿ, ಹಿರೇಹಾಳ ಗ್ರಾಮದ ಖಾಸಗಿ ಆಸ್ಪತ್ರೆಯ ವೈದ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts