More

    ಬಡವರಿಗೆ ಗುಣಮಟ್ಟದ ಆಹಾರ ನೀಡಿ

    ಯಡ್ರಾಮಿ: ತಾಲೂಕಿನಾದ್ಯಂತ ಧರ್ಮಸಿಂಗ್ ಫೌಂಡೇಷನ್ನಿಂದ ಬಡವರು, ನಿರ್ಗತಿಕರಿಗೆ ಆಹಾರ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲೂ ಇದೇ ಮಾದರಿಯಲ್ಲಿ ಕೆಲಸ ನಡೆಯಲಿ ಎಂದು ಶಾಸಕ ಡಾ. ಅಜಯಸಿಂಗ್ ತಿಳಿಸಿದರು.
    ಸುಂಬಡದಲ್ಲಿನ ಮೊರಾಜರ್ಿ ವಸತಿ ಶಾಲೆಗೆ ಭೇಟಿ ನೀಡಿ ಕ್ವಾರಂಟೈನ್ಗಾಗಿ ಮಾಡಿ ಕೈಗೊಂಡ ಸಿದ್ಧತೆ ಪರಿಶೀಲಿಸಿದ ಅವರು, ತಾಲೂಕಿನಲ್ಲಿ ಇಲ್ಲಿವರೆಗೂ ಧರ್ಮಸಿಂಗ್ ಫೌಂಡೇಷನ್ನಿಂದ ಒಟ್ಟು 13,500 ನಿರ್ಗತಿಕರಿಗೆ ನಿತ್ಯ ಎರಡು ಹೊತ್ತು ಊಟ ನೀಡಲಾಗುತ್ತಿದೆ. ಈ ಕಾರ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಸಿಬ್ಬಂದಿಗೂ ಅಭಿನಂದನೆಗಳು. ಲಾಕ್ಡೌನ್ ಮುಂದುವರಿದಲ್ಲಿ, ಧರ್ಮಸಿಂಗ್ ಫೌಂಡೇಷನ್ನಿಂದ ಆಹಾರ ವಿತರಣೆ ಕಾರ್ಯ ಮುಂದೆ ಸಾಗುತ್ತದೆ ಎಂದರು.ತಹಸೀಲ್ದಾರ್ ಬಸಲಿಂಗಪ್ಪ ನಾಯ್ಕೋಡಿ, ಪಿಎಸ್ಐ ಗಜಾನಂದ ಬಿರಾದಾರ, ಸೆಕ್ಟ್ರಲ್ ಮ್ಯಾಜಿಸ್ಟ್ರೇಟ್ ಸಾಯಬಣ್ಣ ಕಾಳೆ, ಪಿಡಿಒ ಬಾಬುಗೌಡ ಕುಳಗೇರಿ, ಪ್ರಮುಖರಾದ ನಿಂಗಣ್ಣ ನಾಯ್ಕೋಡಿ, ರುಕುಂ ಪಟೇಲ್ ಇಜೇರಿ, ರಜಾಕ್ ಮನಿಯಾರ, ನಾಗಣ್ಣ ಹಾಗರಗುಂಡಗಿ, ಕಾಸೀಂ ಪಟೇಲ್ ಮುದೋಳ, ವಿರೇಶ ಕುಂಬಾರ, ಮಡಿವಾಳಪ್ಪ ಗುರುಶೆಟ್ಟಿ ಇದ್ದರು.
    ಲಾಕ್ಡೌನ್ ನಿಯಮ ಉಲ್ಲಂಘನೆ, ಅಂಗಡಿ ಬಂದ್ಶಹಾಬಾದ್: ನಗರದ ಭೆಂಡಿ ಬಜಾರ್ ಪ್ರದೇಶದಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸಿ ಕಿರಾಣಿ ವ್ಯಾಪಾರ ನಡೆಸುತ್ತಿದ್ದ ಅಂಗಡಿಯನ್ನು ತಹಸೀಲ್ದಾರ್ ಸುರೇಶ ವಮರ್ಾ ಬಂದ್ ಮಾಡಿದ್ದಾರೆ. ಮಕ್ಬೂಲ್ ಹುಸೇನ್ ಎಂಬುವವರು ನಿಯಮ ಉಲ್ಲಂಘಿಸಿ ವ್ಯಾಪಾರ ನಡೆಸುತ್ತಿದ್ದರು, ಹೀಗಾಗಿ ತಹಸೀಲ್ದಾರ್ ಅವರು ಅಂಗಡಿ ಸೀಜ್ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಕುರಿತು ಶಹಾಬಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಧಕ್ಕಾ ತಾಂಡಾ ಪ್ರದೇಶದಲ್ಲಿ ಕಳ್ಳಬಟ್ಟಿ ಸರಾಯಿ ಮಾರುತ್ತಿದ್ದ ಸಾನಿಬಾಯಿ ಚವ್ಹಾಣ್ ಎಂಬ ಮಹಿಳೆಯನ್ನು ಬಂಧಿಸಿದ್ದು, ಆಕೆಯಿಂದ 8 ಲೀಟರ್ ಸಾರಾಯಿ ಜಪ್ತಿ ಮಾಡಲಾಗಿದೆ. ಶಹಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts