More

    ಬಂದ್ ಕರೆ ಕೊಡುವ ಮುನ್ನ ಇತಿಹಾಸ ತಿಳಿಯಿರಿ: ಕನ್ನಡಪರ ಸಂಘಟನೆಗಳಿಗೆ ಡಿಸಿಎಂ ಕಾರಜೋಳ ಕಿವಿಮಾತು

    ವಿಜಯಪುರ: ಡಿ. 5 ರಂದು ಕರ್ನಾಟಕ ಬಂದ್ ಗೆ ಕರೆ ನೀಡುವ ಮುನ್ನ ಮರಾಠರ ಮೂಲ ಇತಿಹಾಸ ಅರಿಯಬೇಕೆಂದು ಡಿಸಿಎಂ ಗೋವಿಂದ ಕಾರಜೋಳ ಕನ್ನಡಪರ ಸಂಘಟನೆಗಳಿಗೆ ಕಿವಿ ಮಾತು ಹೇಳಿದ್ದಾರೆ.

    ಛತ್ರಪತಿ ಶಿವಾಜಿ ಮೂಲ ಪುರುಷ ಬೆಳ್ಳಿಯಪ್ಪ ಸೊರಟೂರಿನವರು. ಹೀಗಾಗಿ ಶಿವಾಜಿ ಸಹ ಕನ್ನಡದವರೇ. ಹೀಗಾಗಿ ಬಂದ್ ಹಿಂಪಡೆಯಲು ಅವರು ಮನವಿ ಮಾಡಿದರು.

    ಮರಾಠ ಅಭಿವೃದ್ದಿ ನಿಗಮ ಕೇವಲ ಸಮುದಾಯ ಆಧಾರಿತ.
    ಆದಿಜಾಂಬವ, ಅಂಬೇಡ್ಕರ್, ದೇವರಾಜ ಅರಸು ನಿಗಮದಂತೆ‌ ಅದು ಕೂಡ ಒಂದು.
    ಅವಕಾಶದಿಂದ ವಂಚಿತರಾದ ವಿದ್ಯಾರ್ಥಿಗಳಿಗೆ, ಬಡವರಿಗೆ ಅನುಕೂಲವಾಗಲಿ ಎಂದು ಈ ನಿಗಮ ಸ್ಥಾಪಿಸಲಾಗಿದೆ. ಇತಿಹಾಸ ಅರಿಯದ ವರು ಏನೇನೋ ಮಾತನಾಡುತ್ತಾರೆ. ಅದಕ್ಕೆಲ್ಲ ಕಿವಿ‌ಗೊಡಬಾರದು
    ಎಂದು ಸುದ್ದಿಗಾರರ ಪ್ರಶ್ನೆಗೆ ಕಾರಜೋಳ ಪ್ರತಿಕ್ರಿಯಿಸಿದರು.

    ಸಂಪುಟ ವಿಸ್ತರಣೆ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ
    ಇನ್ನೂ ನಾಲ್ಕು ದಿನ ಕಾಯ್ದು ನೋಡಿ ಎಂದರು.

    ರೋಷನ್ ಬೇಗ ಬಂಧನ ಅದೊಂದು ಕಾನೂನು ಪ್ರಕ್ರಿಯೆ.
    ಈಡಿ, ಸಿಬಿಐ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತವೆ.
    ಇದರಲ್ಲಿ ಸರ್ಕಾರದ ಹಸ್ತಕ್ಷೇಪ ಆಗಲಿ ಮೂಗು ತೋರಿಸುವುದಾಗಲಿ ಮಾಡಲ್ಲ.
    ತನಿಖೆ ನಡೆಯುತ್ತಿದ್ದು ಆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ ಎಂದರು.

    ಡಿಗ್ರಿ ಕಾಲೇಜ್ ಆರಂಭವಾಯಿತು ಹೈಸ್ಕೂಲ್ ಆರಂಭ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಕೋವಿಡ್ ಸಮಸ್ಯೆ ನೋಡಿಕೊಂಡೆ ಆರಂಭ ಮಾಡಬೇಕಾಗುತ್ತದೆ. ಅದರಿಂದ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಮಾಜಕ್ಕೆ ತೊಂದರೆ ಆಗುತ್ತೆ ಎನ್ನುವುದಾದರೆ ಪುನಃ ಪರಿಶೀಲನೆ ಆಗಲಿ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts