More

    ಫಾಸ್ಟ್ಯಾಗ್ ಕಡ್ಡಾಯದಿಂದ ಸಾಲುಗಟ್ಟಿ ನಿಂತ ವಾಹನಗಳು- ಚೆಕ್ ಪೋಸ್ಟ್ ಸಿಬ್ಬಂದಿ ಜೊತೆ ಕಂದಾಯ ಅಧಿಕಾರಿ ಕಾರ್ ಚಾಲಕ ಕಿರಿಕ್

    ವಿಜಯಪುರ: ವಾಹನಗಳ ದಟ್ಟಣೆ ತಗ್ಗಿಸಲೆಂದು ಫೆ.15 ರ ಮಧ್ಯರಾತ್ರಿಯಿಂದಲೇ ಫಾಸ್ಟ್ಯಾಗ್ ಕಡ್ಡಾಯಗೊಳಿಸಿ ಸರ್ಕಾರ ಆದೇಶಿಸಿದೆ‌. ಆದರೆ, ತದ್ವಿರುದ್ದವೆಂಬಂತೆ ಮಂಗಳವಾರ ವಿಜಯಪುರ ನಗರ ಹೊರವಲಯದ ಟೋಲ್ ಗೇಟ್ ಬಳಿ ವಾಹನಗಳ ದಟ್ಟಣೆ ಹೆಚ್ಚಿದ್ದು ಕಂಡು ಬಂತು.

    ಮಧ್ಯರಾತ್ರಿ ಯಿಂದಲೇ ಆದೇಶ ಜಾರಿಗೆ ಬಂದಿದ್ದು ಬೆಳ್ಳೆಂಬೆಳಗ್ಗೆ ಚೆಕ್ ಪೋಸ್ಟ್ ಬಳಿ ವಾಹನಗಳ ದಟ್ಟಣೆ ಹೆಚ್ಚಿರುವುದು ಕಂಡು ಬಂತು.
    ಇನ್ನು ಕಂದಾಯ ಇಲಾಖೆ ಅಧಿಕಾರಿ ವಾಹನ ಚಾಲಕನೋರ್ವ ಟೋಲ್ ಸಿಬ್ಬಂದಿ ಜೊತೆ ಕಿರಿಕ್ ಮಾಡಿಕೊಂಡಿದ್ದಾನೆ‌.
    ಅಧಿಕಾರಿಯ ಗುರುತಿ ಲನ ಚೀಟಿ ತೋರಿಸಿ ವಾಹನ ಬಿಡುವಂತೆ ಆವಾಜ್ ಹಾಕಿದ್ದಾನೆ.
    ಮನಗೂಳಿ ಪಪಂ ಅಧಿಕಾರಿ ಗಾಯತ್ರಿ ವಾಲೀಕಾರ್ ಕಾರ್ಡ್ ಬಳಿಸಿ ಚಾಲಕ ಗಲಾಟೆ ಮಾಡಿದ್ದಾನೆ. ಇನ್ನೂ ತಾನೇ ಅಧಿಕಾರಿ ಅನ್ನೋ ರೀತಿಯಲ್ಲಿ ಸರ್ಕಾರಿ ಅಧಿಕಾರಿಯ ಐಡಿ ಕಾರ್ಡ ತೋರಿಸಿ ವಾಗ್ವಾದ ಮಾಡಿದ್ದಾನೆ. ವಾಹನಕ್ಕೆ ಫಾಸ್ಟ್ಯಾಗ್ ಇದ್ದರೂ ಅಕೌಂಟ್ ನಲ್ಲಿ ಹಣ ಇರದ ಕಾರಣ ವಾಹನ ಬಿಡದ ಟೋಲ್ ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿದ್ದಾನೆ. ಕೊನೆಗೆ ಟೋಲ್ ಸಿಬ್ಬಂದಿ ತಿಳಿ ಹೇಳಿದ ಬಳಿಕ ದುಡ್ಡು ಕಟ್ಟಿ ಹೋಗಿರುವುದು ಬೆಳಕಿಗೆ ಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts