More

     ಪ್ಲಾಸ್ಟಿಕ್ ತಯಾರಿಕಾ ಘಟಕ ರದ್ದತಿಗೆ ಪತ್ರ

    ಚಿಕ್ಕಮಗಳೂರು: ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಹೇರಿದ್ದರೂ ಹೊರ ಜಿಲ್ಲೆಗಳಿಂದ ವಾಹನಗಳ ಮೂಲಕ ನಗರಕ್ಕೆ ಪ್ಲಾಸ್ಟಿಕ್ ಸರಬರಾಜಾಗುತ್ತಿದೆ. ಹೊರ ಜಿಲ್ಲೆಗಳಲ್ಲಿರುವ ಪ್ಲಾಸ್ಟಿಕ್ ತಯಾರಿಕಾ ಘಟಕಗಳನ್ನು ರದ್ದುಪಡಿಸುವಂತೆ ನಗರಸಭೆ ಸಾಮಾನ್ಯ ಸಭೆಯಲ್ಲಿ ರ್ಚಚಿಸಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಪೌರಾಯುಕ್ತ ಬಿ.ಸಿ.ಬಸವರಾಜ್ ಹೇಳಿದರು.

    ನಗರಕ್ಕೆ ಮಂಗಳವಾರ ವಾಹನದಲ್ಲಿ ತಂದ 10 ಸಾವಿರ ಪ್ಲಾಸ್ಟಿಕ್ ಲೋಟಗಳನ್ನು ವಶಕ್ಕೆ ಪಡೆದು ಮಾತನಾಡಿದರು. ನಗರದಲ್ಲಿ ಪ್ಲಾಸ್ಟಿಕ್ ತಯಾರಿಕಾ ಘಟಕಗಳು ಇಲ್ಲದಿರಬಹುದು. ಆದರೆ ಶಿವಮೊಗ್ಗ, ಹಾಸನ ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿಂದ ಬೇರೆ ವಸ್ತುಗಳ ಜತೆ ಪ್ಲಾಸ್ಟಿಕ್ ಲೋಟ ಇನ್ನಿತರ ಪರಿಕರಗಳನ್ನು ತರಲಾಗುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಹಾಗಾಗಿ ಫ್ಯಾಕ್ಟರಿಗಳನ್ನು ಬಂದ್ ಮಾಡಿದರೆ ಮಾತ್ರ ತಡೆಗಟ್ಟಲು ಸಾಧ್ಯ ಎಂದರು. ಶಿವಮೊಗ್ಗದಿಂದ ಪೆನ್ಷನ್ ಮೊಹಲ್ಲಾ ಬಡಾವಣೆಗೆ ತಂದ ಪ್ಲಾಸ್ಟಿಕ್ ಲೋಟಗಳನ್ನು ವಶಪಡಿಸಿಕೊಂಡು 2 ಸಾವಿರ ರೂ. ದಂಡ ವಿಧಿಸಲಾಗಿದೆ. ಪ್ಲಾಸ್ಟಿಕ್ ವಸ್ತುಗಳು ಟ್ರಾನ್ಸ್​ಪೋರ್ಟ್​ವೊಂದರ ಮಾಲೀಕರು ತರಿಸಿ ಮಾರಾಟ ಮಾಡುತ್ತಿದ್ದಾರೆಂಬ ದೂರಿದೆ. ತನಿಖೆ ನಡೆಸಿ ಪ್ಲಾಸ್ಟಿಕ್ ಲೋಟಗಳು ಅವರದ್ದೇ ಆದರೆ ಅಂಗಡಿಗೆ ಬೀಗ ಹಾಕಿ ಕ್ರಿಮಿನಲ್ ಕೇಸ್ ದಾಖಲಿಸಿ ಪರವಾನಗಿ ರದ್ದುಪಡಿಸಲಾಗುತ್ತದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts