More

    ಪ್ರವಾಸಿ ತಾಣಕ್ಕೆ ಸೌಲಭ್ಯ ಕಲ್ಪಿಸಿ

    ಮೂಡಲಗಿ: ಗೊಡಚಿನಮಲ್ಕಿ ಜಲಪಾತ ಕಣ್ಮನ ಸೆಳೆಯುವ ಅತ್ಯಂತ ಸುಂದರ ರಮಣೀಯ ಪ್ರವಾಸಿ ತಾಣ. ಆದರೆ, ಜಲಪಾತದಲ್ಲಿ ಅಗತ್ಯ ಮೂಲಸೌಲಭ್ಯವಿಲ್ಲದ ಕಾರಣ ಪ್ರವಾಸಿಗರಿಗೆ ಸಮಸ್ಯೆಯಾಗುತ್ತಿದೆ. ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ತಾಲೂಕಾಧ್ಯಕ್ಷ ಶಿವರಡ್ಡಿ ಹುಚರಡ್ಡಿ ನೇತೃತ್ವದಲ್ಲಿ ಗುರುವಾರ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಗೋಕಾಕ ವಲಯ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಿಲಾಯಿತು.

    ಪ್ರವಾಸಿ ತಾಣ ವೀಕ್ಷಣೆಗೆ ರಾಜ್ಯ ಸೇರಿ ಸುತ್ತಮುತ್ತಲ ಅನೇಕ ರಾಜ್ಯಗಳು ಪ್ರವಾಸಿಗರು ಆಗಮಿಸುತ್ತಾರೆ. ಸೌಲಭ್ಯಗಳ ಕೊರತೆಯಿಂದಾಗಿ ಪ್ರವಾಸಿಗರ ಸಂಖ್ಯೆ ಕ್ಷೀಣಿಸುತ್ತಿದೆ. ಪ್ರವಾಸಿಗರು ಆಗಮಿಸುವುದರಿಂದ ಸ್ಥಳೀಯರ ಆರ್ಥಿಕ ಸ್ಥಿತಿ ಸಹ ಅಭಿವೃದ್ಧಿಹೊಂದುತ್ತದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಧರಣಿ ನಿರತರು ಆಗ್ರಹಿಸಿದರು.

    ಸಂಘಟನೆ ತಾಲೂಕಾಧ್ಯಕ್ಷ ಶಿವನಗೌಡ ಪಾಟೀಲ, ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಹುಚ್ಚಣ್ಣವರ, ಕುಮಾರ ಕಾತರಕಿ, ಮುತ್ತವ್ವ ಪಾಟೀಲ, ಲಕ್ಕವ್ವ ಚಿಪ್ಪರಗಿ, ಲಕ್ಷ್ಮೀ ಪಾಟೀಲ, ಶ್ರೀಕಾಂತ ಕರಿಗಾರ, ಭೀಮಶಿ ಕವಟಕೊಪ್ಪ, ಸಿದ್ಧಾರೂಢ ಮನ್ನಾಪುರ, ಅಪ್ಪಾಸಾಬ್ ನದಾಫ್, ಅರ್ಜುನ ಉಪಸ್ಥಿತರಿದ್ದರು.
    ರಸ್ತೆ ದುರಸ್ತಿಗೆ ಒತ್ತಾಯ

    ಬೈಲಹೊಂಗಲ: ಬೆಳವಡಿ ಹಾಗೂ ಬುಡರಕಟ್ಟಿ ಮಾರ್ಗಮಧ್ಯದ ರಸ್ತೆ ದುರಸ್ತಿಗೆ ಆಗ್ರಹಿಸಿ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಕಮತ ನೇತೃತ್ವದಲ್ಲಿ ಎಸಿಗೆ ಮನವಿ ಸಲ್ಲಿಸಿದರು. ಎಪಿಎಂಸಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಮಳೆಯಿಂದಾಗಿ ರಸ್ತೆಯಲ್ಲಿ ಭಾರಿ ಪ್ರಮಾಣದ ಗುಂಡಿಗಳು ನಿರ್ಮಾಣವಾಗಿವೆ. ಪರಿಣಾಮ ಈ ಭಾಗದಲ್ಲಿ ಸಂಚಾರ ಮಾಡುವ ವಾಹನ ಸವಾರರು ಹಾಗೂ ಪ್ರಯಾಣಿಕರು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. ಅನೇಕ ವಾಹನ ಸವಾರರು ಬಿದ್ದು ಗಾಯಮಾಡಿಕೊಂಡಿದ್ದಾರೆ.

    ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು. ಮಹಾಂತೇಶ ಕಮತ ಮಾತನಾಡಿ, ವಾರದ ಒಳಗೆ ದುರಸ್ತಿ ಕಾರ್ಯ ಆರಂಭಿಸದಿದ್ದರೆ ಬುಡರಕಟ್ಟಿ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಅನಿರ್ದಿಷ್ಟ ರಸ್ತೆ ತಡೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಮಹಾದೇವ ಕಲಬಾವಿ, ಶ್ರೀಪತಿ ಪಠಾಣಿ, ಈರಪ್ಪ ಹುಬ್ಬಳ್ಳಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts