More

    ಪ್ರಯಾಣಿಕರಿಗಾಗಿ ನೀರಿನ ಘಟಕ ಸ್ಥಾಪನೆ

    ಚನ್ನರಾಯಪಟ್ಟಣ: ಸಾರಿಗೆ ಸಂಸ್ಥೆಯ ಬಸ್ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಉನ್ನತ ತಂತ್ರಜ್ಞಾನದ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪನೆ ಮಾಡಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

    ಪಟ್ಟಣದ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಸೋಮವಾರ 8 ಲಕ್ಷ ರೂ. ವೆಚ್ಚದಲ್ಲಿ ಉನ್ನತ ತಂತ್ರಜ್ಞಾನದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿನಿತ್ಯ 2 ಸಾವಿರಕ್ಕೂ ಹೆಚ್ಚು ಬಸ್ಸುಗಳು ನಿಲ್ದಾಣಕ್ಕೆ ಬಂದು ಹೋಗುತ್ತವೆ. ಜತೆಗೆ, ಸಾವಿರಾರು ಪ್ರಯಾಣಿಕರು ಇಲ್ಲಿಗೆ ಭೇಟಿ ನೀಡುತ್ತಾರೆ. ಅವರ ಅನುಕೂಲಕ್ಕಾಗಿ ಬಿಸಿನೀರು, ಶುದ್ಧವಾದ ನೀರು ಹಾಗೂ ತಂಪಾದ ನೀರಿನ ವ್ಯವಸ್ಥೆಯ ಉನ್ನತ ತಂತ್ರಜ್ಞಾನದ ಘಟಕವನ್ನು ಸ್ಥಾಪನೆ ಮಾಡಲಾಗಿದೆ. ಕುಡಿಯುವ ನೀರು ಶುದ್ಧವಾಗಿದ್ದರೆ ಎಷ್ಟೋ ಕಾಯಿಲೆಯನ್ನು ದೂರ ಮಾಡಬಹುದಾಗಿದೆ ಎಂದು ತಿಳಿಸಿದರು.

    ಕರೊನಾ ನಂತರದ ದಿನಗಳಲ್ಲಿ ಚನ್ನರಾಯಪಟ್ಟಣ ಘಟಕದಿಂದ 27 ಅನುಸೂಚಿ ಮಾರ್ಗಗಳನ್ನು ತಡೆಹಿಡಿದಿದ್ದು, ಬಸ್‌ಗಳ ಕೊರತೆಯಿಂದಾಗಿ ಮರು ಆರಂಭಿಸಲು ಸಾಧ್ಯವಾಗುತ್ತಿಲ್ಲ. ಈ ವಿಚಾರವಾಗಿ ಸಾರಿಗೆ ಸಚಿವರ ಬಳಿ ಚರ್ಚೆ ನಡೆಸಿದ್ದು, 4 ಸಾವಿರ ಬಸ್ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ನಾಲ್ಕು ತಿಂಗಳ ಒಳಗೆ ಘಟಕಕ್ಕೆ 30 ಹೊಸ ಬಸ್‌ಗಳನ್ನು ಕೊಡಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.

    ಜೆಡಿಎಸ್ ತಾಲೂಕು ಅಧ್ಯಕ್ಷ ಪರಮ ದೇವರಾಜೇಗೌಡ, ವಿಭಾಗಿಯ ಗುತ್ತಿಗೆದಾರ ರಕ್ಷಿತ್, ಆಕ್ವಾಶೈನ್ ಇಂಜಿನಿಯರ್ ಮನೀಶ್, ಚಂದನ್, ಸಂಚಲನಾಧಿಕಾರಿ ವಿ.ಸತೀಶ್, ವಿಭಾಗೀಯ ಯಾಂತ್ರಿಕ ಇಂಜಿನಿಯರ್ ನಂದಕುಮಾರ್, ಘಟಕ ವ್ಯವಸ್ಥಾಪಕಿ ಶಾಜೇಯಾ ಬಾನು, ಮೇಲ್ವಿಚಾರಕ ಮೃತ್ಯುಂಜಯ ಬಿ.ಎಂ, ಸಂಚಾರಿ ನಿರೀಕ್ಷಕ ಕೆ.ಎಲ್.ಕೃಪಾಕರ್, ಸಂಚಾರಿ ನಿಯಂತ್ರಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts