More

    ಪ್ರಧಾನ ಅರ್ಚಕರಾಗಿ ರಂಜಿತ್ ಆಯ್ಕೆ: ಸುಖಾಂತ್ಯ ಕಂಡ ಅರ್ಚಕರ ನೇಮಕಾತಿ, ಇಒ ಸುಬ್ರಮಣಿಯಿಂದ ಅಧಿಕಾರ ಹಸ್ತಾಂತರ

    ಕೆಜಿಎಫ್: ಇತಿಹಾಸ ಪ್ರಸಿದ್ಧ ಪ್ರಸನ್ನ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದ ಪ್ರಧಾನ ಅರ್ಚಕರ ನೇಮಕಾತಿ ವಿಚಾರದಲ್ಲಿ ಭಕ್ತರು ಹಾಗೂ ಅಧಿಕಾರಿಗಳ ನಡುವೆ ವಾದ ವಿವಾದ ಉಂಟಾಗಿ ಅಂತಿಮವಾಗಿ ಕೋಲಾರ ಜಿಲ್ಲಾಧಿಕಾರಿಗಳ ಆದೇಶದಂತೆ ನೂತನವಾಗಿ ನೇಮಕಗೊಂಡಿರುವ ರಂಜಿತ್ ಅವರು ಅಧಿಕಾರ ಸ್ವೀಕರಿಸುವ ಮೂಲಕ ವಿವಾದಕ್ಕೆ ತೆರೆ ಬಿತ್ತು.

    ಕರೊನಾ ಸಂದರ್ಭದಲ್ಲಿ ದೇವಾಲಯದ ಮುಖ್ಯ ಅರ್ಚಕರಾಗಿದ್ದ ವೆಂಕಟೇಶಮೂರ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಯು ಪ್ರಧಾನ ಅರ್ಚಕರ ಹುದ್ದೆಗೆ ಸಂದರ್ಶನ ಕರೆದಿತ್ತು.

    ವಾಲೂರು ತಾಲೂಕು ಲಕ್ಕೂರಿನ ರಂಜಿತ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದರಿಂದ ಕೋಲಾರ ಜಿಲ್ಲಾಧಿಕಾರಿಗಳು 2 ತಿಂಗಳ ಹಿಂದೆ ಪ್ರಧಾನ ಅರ್ಚಕರಾಗಿ ಸೇವೆ ವಾಡುವಂತೆ ಆದೇಶ ಹೊರಡಿಸಿದ್ದರು. ಆದರೆ ಮೃತ ಕುಟುಂಬದ ಸದಸ್ಯರನ್ನೇ ಪ್ರಧಾನ ಅರ್ಚಕರನ್ನಾಗಿ ನೇಮಕ ವಾಡಬೇಕು ಎಂದು ಉತ್ಸವದಾರಿಗಳ ಸಮಿತಿಯ ಕಾರ್ಯನಿರ್ವಾಹಣಾಧಿಕಾರಿ, ಸುಬ್ರಮಣಿ ಮೇಲೆ ಒತ್ತಡ ಹಾಕಿದ್ದರಿಂದ ಇಒ ಅವರು ತಿಂಗಳ ಕಾಲಾವಕಾಶ ನೀಡಿದ್ದರು. ಆದರೆ ಜಿಲ್ಲಾಧಿಕಾರಿಗಳು ಸರ್ಕಾರದಿಂದ ನೇಮಕಗೊಂಡಿರುವ ರಂಜಿತ್ ಅವರಿಗೆ ಅಧಿಕಾರ ನೀಡುವಂತೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಸುಬ್ರಮಣಿ ಅವರು ಮೃತ ವೆಂಕಟೇಶ್‌ಮೂರ್ತಿ ಸ್ಥಾನದಲ್ಲಿ ಪೂಜೆ ನೆರವೇರಿಸುತ್ತಿದ್ದ ಅರ್ಚಕರಿಗೆ ದೇವಾಲಯದ ಕೀಲಿಕೈ ಹಸ್ತಾಂತರ ವಾಡುವಂತೆ ಸೂಚಿಸಿದರು.

    ಈ ಸಂದರ್ಭದಲ್ಲಿ ಆಗಮಿಸಿದ ದೇವಾಲಯದ ಭಕ್ತರಾದ ಮುರಳಿ, ಯಶವಂತ್, ನಗರ ಬಿಜೆಪಿ ವಾಜಿ ಅಧ್ಯಕ್ಷ ರಾಜಗೋಪಾಲ ದೇವಾಲಯದ ಕೀಲಿಕೈ ನೀಡುವುದು ಬೇಡ, ಈಗಾಗಲೇ ಮುಜರಾಯಿ ಸಚಿವೆಗೆ ವೆಂಕಟೇಶಮೂರ್ತಿ ಅವರ ಕುಟುಂಬದವರಿಗೆ ಪ್ರಧಾನ ಅರ್ಚಕ ಹುದ್ದೆ ನೀಡುವಂತೆ ಮನವಿ ವಾಡಿದ್ದು, ಸಚಿವರು ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ. ತನಿಖಾ ಹಂತದಲ್ಲಿರುವ ಸಂದರ್ಭದಲ್ಲಿ ದೇವಾಲಯದ ಕೀಲಿಕೈ ನೀಡುವಂತೆ ಏಕೆ ಅರ್ಚಕರ ಮೇಲೆ ಒತ್ತಡ ಹಾಕುತ್ತಿರುವುದು ಎಂದು ಆಕ್ಷೇಪ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಇಒ ಹಾಗೂ ಭಕ್ತರ ನಡುವೆ ವಾದ ವಿವಾದಗಳು ನಡೆದು, ಅಂತಿಮವಾಗಿ ಇಒ ಸುಬ್ರಮಣಿ ಅವರು ಡಿಸಿ ಆದೇಶವನ್ನು ನಾವು ಪಾಲಿಸಲೇಬೇಕಿದ್ದು ಮುಂದಿನ ದಿನಗಳಲ್ಲಿ ಅವರ ಪರವಾಗಿ ಆದೇಶ ತಂದರೆ ಅವರಿಗೆ ಪೂಜೆ ನೆರವೇರಿಸುವ ಅಧಿಕಾರ ನೀಡುವುದಾಗಿ ತಿಳಿಸಿದ ನಂತರ ಪ್ರಕರಣ ಸುಖಾಂತ್ಯ ಕಂಡಿತು. ದೇವಾಲಯದಲ್ಲಿ ದೇವರಿಗೆ ಬಳಕೆ ವಾಡಲಾಗುತ್ತಿದ್ದ ಪ್ರತಿಯೊಂದು ವಸ್ತುವನ್ನು ಅಧಿಕಾರಿಗಳು ವಶಕ್ಕೆ ಪಡೆದ ನಂತರ ಪ್ರಧಾನ ಅರ್ಚಕ ರಂಜಿತ್ ಅವರಿಗೆ ಹಸ್ತಾಂತರ ವಾಡಿದರು.

    ಇಒ ಸುಬ್ರಮಣಿ ವಾತನಾಡಿ, ದೇವಾಲಯಕ್ಕೆ ಆಗಮಿಸುವ ಭಕ್ತರಲ್ಲಿ ತಾರತಮ್ಯ ಮಾಡದೇ ಎಲ್ಲರನ್ನೂ ಸವಾನವಾಗಿ ಕಾಣಬೇಕು. ದೇವಾಲಯಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕು ಎಂದರು.

    ಈ ವೇಳೆ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು. ಪೇಷ್ಕರ್ ಅನ್ನವಯಲ್, ಶ್ರೀನಿವಾಸ್, ಹಾಗೂ ಭಕ್ತರಾದ ರೈಸ್ ಮುರಳಿ, ಜಗ್ಗಿ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts