More

    ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹ

    ಧಾರವಾಡ: ಕರೋನಾ ಹೋರಾಟಕ್ಕಾಗಿ ಪ್ರಧಾನಮಂತ್ರಿ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಶಾಸಕ ಅರವಿಂದ ಬೆಲ್ಲದ ಮುಂದಾಳತ್ವದಲ್ಲಿ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ ಶುಕ್ರವಾರ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲಾಯಿತು.

    ಇಲ್ಲಿನ ಕಲ್ಯಾಣನಗರ, ಶಿವಗಿರಿ, ಉಳವಿ ಚೆನ್ನಬಸವೇಶ್ವರ ನಗರಗಳಲ್ಲಿ ಸಂಚರಿಸಿದ ಸಂದರ್ಭದಲ್ಲಿ ಕವಿ ಡಾ. ಚೆನ್ನವೀರ ಕಣವಿ ಸೇರಿ ಅನೇಕರಿಂದ 6 ಲಕ್ಷ ರೂ.ಗೂ ಅಧಿಕ ದೇಣಿಗೆ ಸಂಗ್ರಹಿಸಿದರು.

    ಡಾ. ಚೆನ್ನವೀರ ಕಣವಿ ಅವರು ಶಾಸಕ ಅರವಿಂದ ಬೆಲ್ಲದ ಅವರಿಗೆ 1 ಲಕ್ಷ ರೂ.ಗಳ ಚೆಕ್ ಹಸ್ತಾಂತರಿಸಿ ಮಾತನಾಡಿ, ಭಾರತ ಸೇರಿ ಇಡೀ ವಿಶ್ವ ಇಂದು ಕರೊನಾ ವೈರಸ್ ಕಾಟದಿಂದ ತತ್ತರಿಸಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೋಗ ಹರಡುವಿಕೆ ತಡೆಗಟ್ಟಲು ಎಲ್ಲ ಪ್ರಯತ್ನ ಮಾಡುತ್ತಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆಯನ್ನು ಆದ್ಯತೆಯಾಗಿ ಪರಿಗಣಿಸಿರುವ ಸರ್ಕಾರ ಅಪಾರ ಪ್ರಮಾಣದ ಹಣ ವ್ಯಯಿಸಬೇಕಿದೆ. ಲಾಕ್​ಡೌನ್​ನಿಂದ ವ್ಯಾಪಾರ ವಹಿವಾಟು ಸ್ಥಗಿತಗೊಳ್ಳುವುದು ಒಂದು ಕಡೆಯಾದರೆ, ಕರೊನಾ ಜಾಗೃತಿ, ತಪಾಸಣೆ, ಚಿಕಿತ್ಸೆ ಇತರ ವಲಯಗಳಿಗೆ ಬೃಹತ್ ಮಟ್ಟದ ಖರ್ಚು ನಿಭಾಯಿಸಬೇಕಿದೆ. ಹೀಗಾಗಿ ಉದ್ಯಮಿಗಳು, ವ್ಯಾಪಾರಸ್ಥರು, ಸಿರಿವಂತರು ಮಾತ್ರವಲ್ಲದೆ ಸಾರ್ವಜನಿಕರು ತಮ್ಮ ಕೈಲಾದಷ್ಟು ಪರಿಹಾರ ನಿಧಿಗೆ ಹಣ ನೀಡಬೇಕು ಎಂದು ಮನವಿ ಮಾಡಿದರು.

    ಮಾಜಿ ಮೇಯರ ಶಿವು ಹಿರೇಮಠ, ಉದ್ಯಮಿ ನಾಗರಾಜ ಯಲಿಗಾರ, ಪ್ರಾಚಾರ್ಯ ಶಶಿಧರ ತೋಡಕರ, ಕಿರಣ ಶಿಂಧೆ, ಪಂಚಾಕ್ಷರಯ್ಯ, ಇತರರು ಇದ್ದರು.

    ಕೋವಿಡ್ ಪರಿಹಾರ ನಿಧಿಗೆ ದೇಣಿಗೆ

    ಧಾರವಾಡ: ರಾಷ್ಟ್ರೀಯ ವಿಪತ್ತು ಎಂದು ಘೊಷಣೆಯಾಗಿರುವ ಕರೊನಾ ವಿರುದ್ಧದ ಹೋರಾಟಕ್ಕೆ ಜನರಿಂದ ಸಾಕಷ್ಟು ಬೆಂಬಲ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ಧಾರವಾಡ ಗಾಂಧಿನಗರದ ಶಿಕ್ಷಕಿ ಬಿ.ಎಚ್. ಪುಲಮಲೆ 25 ಸಾವಿರ ರೂ. ಹಾಗೂ ನುಗ್ಗಿಕೇರಿ ಹನುಮಂತ ದೇವಸ್ಥಾನದ ಸಾಂಸ್ಕೃತಿಕ ಭವನದ ಕೃಷ್ಣ ದೇಸಾಯಿ ಅವರು 1,01,000 ರೂ. ದೇಣಿಗೆಯನ್ನು ಶುಕ್ರವಾರ ಜಿಲ್ಲಾಧಿಕಾರಿಗೆ ಸಲ್ಲಿಸಿದರು.

    *ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಶಾಸಕ ಅಮೃತ ದೇಸಾಯಿ ಅವರು ನೀಡಿರುವ ಸ್ಯಾನಿಟೈಸರ್ ಹಾಗೂ ಮಾಸ್ಕ್​ಗಳನ್ನು ಧಾರವಾಡ ತಾಲೂಕಿನ ನರೇಂದ್ರ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರಿಗೆ ವಿತರಿಸಲಾಯಿತು. ರುದ್ರಪ್ಪ ಅರಿವಾಳ, ಶಶಿಮೌಳಿ ಕುಲಕರ್ಣಿ, ಶಂಕರ ಕೋಮಾರದೇಸಾಯಿ, ನಾಗನಗೌಡ ಪಾಟೀಲ, ಈರಪ್ಪ ಗಂಟಿ, ಚನ್ನವೀರಗೌಡ ಪಾಟೀಲ, ಇತರರು ಇದ್ದರು.

    *ಧಾರವಾಡದ ವಿಶ್ವಚೇತನ ಎಜುಕೇಶನ್ ಸೊಸೈಟಿ ಅಧ್ಯಕ್ಷೆ ಡಾ. ಸರ್. ಐ.ಎ. ಪಿಂಜಾರ ಅವರು ಪ್ರಧಾನಮಂತ್ರಿ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ನೀಡಿರುವ 51 ಸಾವಿರ ರೂ.ಗಳ ಚೆಕ್​ಅನ್ನು ಶಾಸಕ ಅರವಿಂದ ಬೆಲ್ಲದ ಅವರಿಗೆ ಶುಕ್ರವಾರ ಸಲ್ಲಿಸಿದರು. ಮಾಜಿ ಮೇಯರ ಶಿವು ಹಿರೇಮಠ, ಪ್ರಾಚಾರ್ಯ ವಾಣಿ ಪುರೋಹಿತ, ಚಂದ್ರಿಕಾ ದೇಶಪಾಂಡೆ, ನಾಗರಾಜ ಯಲಿಗಾರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts