More

    ಪ್ರತಿ ವಾರ್ಡ್‌ನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಿ

    ಹುಕ್ಕೇರಿ: ಪಟ್ಟಣದ 23 ವಾರ್ಡ್‌ಗಳಲ್ಲಿ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ 8.50 ಕೋಟಿ ರೂ. ಅನುದಾನ ಮಂಜೂರಾಗಿದ್ದ್ದು, ಪ್ರತಿಯೊಬ್ಬ ಸದಸ್ಯರು ವಾರ್ಡ್ ಜನರ ಅಭಿಪ್ರಾಯ ಪಡೆದು ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

    ಇಲ್ಲಿನ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಸೋಮವಾರ ಜನರ ಕುಂದು ಕೊರತೆ ಆಲಿಸಿ ಮಾತನಾಡಿದ ಅವರು, ದಿ. ಉಮೇಶ ಕತ್ತಿ ಅವರೇ ಅನುದಾನ ಮಂಜೂರಾತಿ ಮಾಡಿಸಿದ್ದಾರೆ ಎಂದು ತಿಳಿಸಿದರು. ಈ ಅನುದಾನ ಜತೆಗೆ ಇನ್ನೂ 1.50 ಕೋಟಿ ರೂ. ಅನುದಾನ ಮಂಜೂರು ಸೇರಿ ಒಟ್ಟು 10 ಕೋಟಿ ರೂ. ಅನುದಾನದಲ್ಲಿ ಚರಂಡಿ, ರಸ್ತೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು ಎಂದು ಸೂಚಿಸಿದರು. ಹಲವು ಗ್ರಾಮಸ್ಥರು ರಸ್ತೆ ಸುಧಾರಣೆ ಹಾಗೂ ಕೆನಾಲ್ ರಸ್ತೆ ಅಭಿವೃದ್ಧಿ ಪಡಿಸಬೇಕಿದೆ ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ರಮೇಶ ಕತ್ತಿ, ಜಿಪಂ ಇಂಜಿನಿಯರಿಂಗ್ ವಿಭಾಗದವರಿಗೆ ಸೂಚನೆ ನೀಡಿದರು. ಹುಕ್ಕೇರಿ ಪಟ್ಟಣದಲ್ಲಿ ಅನಧಿಕೃತ ಲೇಔಟ್‌ಗಳನ್ನು ನಿರ್ಮಿಸಿ ಜನರಿಗೆ ಮಾರಾಟ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಅಂತಹ ಅನಧಿಕೃತ ಬಡಾವಣೆಗಳಿಗೆ ಕಾನೂನಾತ್ಮಕವಾಗಿ ಮೂಲ ಸೌಲಭ್ಯ ಒದಗಿಸಲು ಆಗುವುದಿಲ್ಲ. ಕಾರಣ, ನಿವೇಶನ ಖರೀದಿದಾರರು ಇಂತಹ ಅನಧಿಕೃತ ನಿವೇಶನಗಳನ್ನು ಖರೀದಿಸಬಾರದು.

    ಅನಧಿಕೃತ ಲೇಔಟ್‌ಗಳಿಗೆ ನಿವೇಶನದ ಉತಾರ ನೀಡಬೇಡಿ. ಒಂದು ವೇಳೆ ಉತಾರ ನೀಡಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳು ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ, ಬೆಮುಲ್ ನಿರ್ದೇಶಕ ರಾಯಪ್ಪ ಡೂಗ, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಹಿರಾ ಶುಗರ್ಸ್‌ ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ, ಬಸವರಾಜ ಮರಡಿ, ಸುರೇಂದ್ರ ದೊಡ್ಡಲಿಂಗನವರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಸುಭಾಷ ಪಾಟೀಲ, ನಿರ್ದೇಶಕ ಪರಗೌಡ ಪಾಟೀಲ, ಲಲಿತಾ ಮರಡಿ, ಮುಖಂಡರಾದ ಬಾಳಾಸಾಹೇಬ ನಾಯಿಕ, ಗುರುರಾಜ ಕುಲಕರ್ಣಿ, ಶಿವರಾಜ ನಾಯಿಕ, ಬಿಸ್ಕೀಟ್ ಈಶ್ವರ ಪಾಟೀಲ, ಚನ್ನಪ್ಪ ಗಜಬರ, ಲಾಜಮ್ ನಾಯಿಕವಾಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts