More

    ಪ್ರತಿಯೊಬ್ಬ ಪ್ರಜೆಯೂ ಕಾನೂನು ಅರಿತುಕೊಳ್ಳುವುದು ಅತಿ ಅವಶ್ಯ

    ರಾಯಬಾಗ, ಬೆಳಗಾವಿ: ಭಾರತೀಯರೆಲ್ಲರೂ ಸಮಾನರು ಎನ್ನುವುದನ್ನು ಸಂವಿಧಾನವು ಪ್ರತಿಪಾದಿಸಿದ್ದು, ಎಲ್ಲರೂ ಕಾನೂನು ಗೌರವಿಸಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶ ಬಸವರಾಜಪ್ಪ ಕೆ.ಎಂ. ಹೇಳಿದರು.

    ಪಟ್ಟಣದ ವಕೀಲರ ಸಂಘದ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನ ಆಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಂವಿಧಾನ ಎಲ್ಲ ಕಾನೂನುಗಳ ತಾಯಿ ಆಗಿದ್ದು, ದೇಶದ ಪ್ರತಿಯೊಬ್ಬ ನಾಗರಿಕ ಸಂವಿಧಾನ ಬಗ್ಗೆ ಅರಿತುಕೊಳ್ಳಬೇಕಿದೆ ಎಂದರು. ಯಾವುದೇ ಒಂದು ಸಂವಿಧಾನ ಒಳ್ಳೆಯದು ಅಥವಾ ಕೆಟ್ಟದ್ದು ಎಂದು ತೀರ್ಮಾನಿಸುವುದು ಅದನ್ನು ಜಾರಿಗೆ ತರುವ ಸರ್ಕಾರದ ಮೇಲೆ ನಿಂತಿರುತ್ತದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿರುವ ಮಾತು ಪ್ರಸ್ತುತವಾಗಿದೆ. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ವಕೀಲರ ಪಾತ್ರ ಹೆಚ್ಚು ಮಹತ್ವದ್ದಾಗಿದೆ ಎಂದರು.

    ವಕೀಲರಾದ ಡಿ.ಎಚ್.ಯಲ್ಲಟ್ಟಿ, ಅಕ್ಷಯ ಒಡೆಯರ ಮಾತನಾಡಿದರು. ಪ್ರಧಾನ ದಿವಾಣಿ ನ್ಯಾಯಾಧೀಶ ಅಲೋಕ ಎ.ಎನ್., ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಮಂಜುನಾಥ ಪಾನಘಂಟಿ, ವಕೀಲರ ಸಂಘದ ಅಧ್ಯಕ್ಷ ಆರ್.ಎಚ್.ಗೊಂಡೆ, ಎಪಿಪಿ ಶೇಖರ ಬಡಗಾಂವೆ, ಹನುಮಂತ ಅಚಮಟ್ಟಿ, ಸಂಘದ ಉಪಾಧ್ಯಕ್ಷ ಎಂ.ಎಂ.ಚಿಂಚಲಿಕರ, ಕಾರ್ಯದರ್ಶಿ ಆರ್.ಎಸ್.ಹೊಳೆಪ್ಪಗೋಳ, ಸಹಕಾರ್ಯದರ್ಶಿ ಎಸ್.ಆರ್. ಪಾಟೀಲ, ಹಿರಿಯ ವಕೀಲರಾದ ಎ.ಬಿ.ಮಂಗಸೂಳೆ, ವಿ.ಎ.ಮೊರೆ, ಎಂ.ಕೆ.ಖೊಂಬಾರೆ, ಆರ್.ಎಸ್ ಶಿರಗಾಂವೆ, ಪಿ.ಎಂ.ಪಾಟೀಲ, ಟಿ.ಕೆ.ಶಿಂಧೆ, ಎಸ್.ಕೆ.ರೆಂಟೆ, ಜಿ.ಡಿ.ಕುಲಕರ್ಣಿ, ಜಿ.ಎಸ್.ಪವಾರ, ಬಿ.ಎಸ್.ಪಾಟೀಲ, ಡಿ.ಟಿ.ಉಮ್ರಾಣಿ, ಎ.ಎಂ.ಗೆಜ್ಜೆ, ಎಸ್.ಪಿ.ಪಾಟೀಲ, ಎಂ.ಪಿ.ತೇಲಿ, ಆರ್.ಎ.ಗೆನ್ನೆನ್ನವ್ವರ, ಎಸ್.ಸಿ.ದೀಕ್ಷಿತ, ಆರ್.ಎಸ್.ಬುಗಡಿಕಟ್ಟಿ, ಎಸ್.ಟಿ.ಖೋತ, ವಿ.ಎಸ್.ಪೂಜಾರಿ, ಪಿ.ಎಂ.ದರೂರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts