More

    ಪ್ರತಿಯೊಬ್ಬರಿಗೂ ಬೇಕು ಕಾನೂನು ಜ್ಞಾನ

    ಯಾದಗಿರಿ : ಸಮಾಜದಲ್ಲಿನ ಪ್ರತಿಯೊಬ್ಬ ನಾಗರಿಕ ಕಾನೂನಿನ ಮಹತ್ವ ತಿಳಿಯುವ ಅಗತ್ಯವಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ನಂಜುAಡಯ್ಯ ಹೇಳಿದರು.

    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಹಾಗೂ ಶಿP್ಷÀಣ ಇಲಾಖೆ ಸಹಯೋಗದಡಿ ನಗರದ ಸರ್ಕಾರಿ ಪದವಿ ಮಹಾ ವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾನವ ಕಳ್ಳ ಸಾಗಣೆ ಕುರಿತ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಾದವರು ಅP್ಷÀರ ಜ್ಞಾನದೊಂದಿಗೆ ಕಾನೂನಿನ ಬಗ್ಗೆ ಅಧ್ಯಯನ ಮಾಡಬೇಕು. ಇದರಿಂದ ಅರಿತ ವಿಷಯವನ್ನು ಅನP್ಷÀರಸ್ಥರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

    ದೇಶದಲ್ಲಿ ನಿರ್ಭಯಾ ಪ್ರಕರಣ ನಂತರ ಫೋಕ್ಸೋ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ. ಕಲಂ ೩೭೬ ಮತ್ತು ೪೦೬ರಡಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗುತ್ತದೆ. ಅತ್ಯಾಚಾರ ಪ್ರಕರಣಗಳು ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡುತ್ತವೆ. ಅದಕ್ಕಾಗಿ ಪ್ರತಿಯೊಬ್ಬರೂ ಒಳ್ಳೆಯ ಮನಸ್ಸು ಹೊಂದಿದರೆ ಇಂತಹ ಘಟನೆ ತಪ್ಪಿಸಲು ಸಾಧ್ಯ ಎಂದರು.

    ಸAಚಾರ ಸಿಪಿಐ ಮೆಹಬೂಬ್ ಅಲಿ ಮಾತನಾಡಿ, ವಿದ್ಯಾರ್ಥಿಗಳು ಶಿP್ಷÀಣವನ್ನು ಕೇವಲ ಅಂಕ ಗಳಿಕೆಗಾಗಿ ಎಂದು ಭಾವಿಸಬಾರದು. ಮಾನವೀಯ ಮೌಲ್ಯಗಳು ಮತ್ತು ನೈತಿಕತೆಯನ್ನು ಬೆಳೆಸಿಕೊಳ್ಳುವುದು ಮುಖ್ಯ. ಕೆಟ್ಟ ಮನಸ್ಸಿನ ಬೆನ್ನು ಹತ್ತದೆ ಸನ್ಮಾರ್ಗದಲ್ಲಿ ಸಾಗಬೇಕು. ಅಂದಾಗಲೇ ರಾಷ್ಟçದ ಸಂಪತ್ತಾಗಲು ಸಾಧ್ಯ ಎಂದು ಹೇಳಿದರು.

    ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ನಿರ್ದೇಶಕ ರಿಯಾಜ್ ಪಟೇಲ್ ಮಾತನಾಡಿ, ಮಾನವ ಕಳ್ಳ ಸಾಗಣೆ ವಿಶ್ವದಾದ್ಯಂತ ಜಾಲವಾಗಿ ಹರಡಿದೆ. ಮುಂಬೈ, ಪುಣೆ, ಕೋಲ್ಕತದಂಥ ಬೃಹತ್ ನಗರಗಳಲ್ಲಿ ಹಣದ ಆಮಿಷಕ್ಕಾಗಿ ಮಕ್ಕಳನ್ನು ಮಾರಲಾಗುತ್ತಿದೆ. ಅಂತಹ ಮಕ್ಕಳನ್ನು ವಿಕಲಾಂಗಗೊಳಿಸಿ ಭಿಕ್ಷಾಟನೆಗೆ, ಸುಂದರ ಹೆಣ್ಮಕ್ಕಳಿದ್ದರೆ ವೇಶ್ಯಾವಾಟಿಕೆಗೆ ದೂಡಲಾಗುತ್ತಿದೆ. ಇದನ್ನು ತಡೆಗಟ್ಟಲು ಶಿP್ಷÀಣದಿಂದ ಮಾತ್ರ ಸಾಧ್ಯ ಎಂದರು.

    ನ್ಯಾಯವಾದಿ ಅನಂತರೆಡ್ಡಿ, ಕಲಂ ೩೭೦ರಿಂದ ೩೭೪ರವರೆಗೆ ಮಾನವ ಕಳ್ಳ ಸಾಗಣೆ ವಿರುದ್ಧ ಪ್ರಕರಣ ದಾಖಲಿಸಿ ಶಿಕ್ಷೆಗೆ ಗುರಿಪಡಿಸಬಹುದಾಗಿದೆ. ಈ ಬಗ್ಗೆ ಸೂಕ್ತ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
    ಪ್ರಾಚಾರ್ಯ ಡಾ.ಸುಭಾಶ್ಚಂದ್ರ ಕೌಲಗಿ ಮಾತನಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶ ರವೀಂದ್ರ ಹೊನೊಲೆ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಾಪಕಿ ಡಾ.ಕಮಲಮ್ಮ, ಶಹನಾಜ್ ಬೇಗಂ, ರಾಘವೇಂದ್ರ ಭೀಮನಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts