More

    ಮಾದಕ ವ್ಯಸನ ದುಷ್ಪರಿಣಾಮದ ಅರಿವು ಅಗತ್ಯ, ಮಾದಕ ವಸ್ತು ಸೇವನೆಯ ದುಷ್ಪರಿಣಾಮದ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಬರ್ಕೆ ಠಾಣೆಸಬ್ ಇನ್‌ಸ್ಪೆಕ್ಟರ್ ನಾಗೇಶ್ ಹಸ್ಲರ್ ಹೇಳಿಕೆ

    ಮಂಗಳೂರು : ಮಾದಕ ವ್ಯಸನ ಸೇವನೆಯಿಂದ ಏನೆಲ್ಲ ಸಮಸ್ಯೆಯಾಗುತ್ತದೆ ಎಂಬ ಅರಿವು ಪ್ರತಿಯೊಬ್ಬರಲ್ಲೂ ಮೂಡಬೇಕು. ಹದಿಹರೆಯ ಹಂತದ ಮಕ್ಕಳು ಈ ವ್ಯಸನಕ್ಕೆ ಒಳಗಾಗುವುದು ಶೋಚನೀಯ ಎಂದು ಬರ್ಕೆ ಠಾಣೆ ಸಬ್ ಇನ್‌ಸ್ಪೆಕ್ಟರ್ ನಾಗೇಶ್ ಹಸ್ಲರ್ ಹೇಳಿದರು.

    ಬರ್ಕೆ ಠಾಣೆಯ ನೇತೃತ್ವದಲ್ಲಿ ನಗರದ ಎಕ್ಸ್‌ಪರ್ಟ್ ಕಾಲೇಜಿನಲ್ಲಿ ಮಾದಕ ವಸ್ತು ಸೇವನೆಯ ದುಷ್ಪರಿಣಾಮದ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಅಪರಿಚಿತರ ಜತೆ ಮಾತನಾಡುವಾಗ ಜಾಗ್ರತೆಯಿಂದ ಇರಬೇಕು. ಮದ್ಯಪಾನ, ತಂಬಾಕು, ಮಾದಕ ದ್ರವ್ಯ ಸೇವನೆ ವ್ಯಸನಕ್ಕೆ ಒಳಗಾಗಿ ನಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು ಎಂದರು.

    ಸಂಪನ್ಮೂಲ ವ್ಯಕ್ತಿಯಾಗಿದ್ದ ಡಾ. ಕುಸುಮ್ ತಂತ್ರಿ ಮಾತನಾಡಿ ‘ ಮಾದಕ ವಸ್ತುಗಳ ಸೇವನೆಯ ಚಟಕ್ಕೆ ಒಳಗಾದವರನ್ನು ಗುರುತಿಸಿ ವ್ಯಸನ ಮುಕ್ತ ಕೇಂದ್ರಗಳ ಮೂಲಕ ಚಿಕಿತ್ಸೆ ನೀಡಬೇಕು. ಪಾಲಕರು ತಮ್ಮ ಕೆಲಸದ ಒತ್ತಡದಿಂದ ಮಾಡುವ ಸಣ್ಣ ನಿರ್ಲಕ್ಷೃವೂ ಮಕ್ಕಳು ಬದಲಾಗಲು ಕಾರಣವಾಗಬಹುದು ಎಂದರು.

    ಎಕ್ಸ್‌ಪರ್ಟ್ ಶಿಕ್ಷಣ ಮತ್ತು ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್ ನಾಯಕ್ ಮಾತನಾಡಿ‘ನಾವು ಉತ್ತಮ ಸಮಾಜವನ್ನು ನಿರ್ಮಾಣ ಮಾಡುವವರಾಗಬೇಕು. ಮಕ್ಕಳಿಗೆ ಬದುಕಿನ ಮಹತ್ವ ಏನು ಎಂಬುದನ್ನು ತಿಳಿಸಿ ಆರೋಗ್ಯಪೂರ್ಣ ಸಮಾಜಕ್ಕಾಗಿ ಕೈಜೋಡಿಸಬೇಕು ಎಂದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಮಚಂದ್ರ ಭಟ್‌ಉಪಸ್ಥಿತರಿದ್ದರು. ಪ್ರಜ್ಞಾ ಕೆ. ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts