More

    ಪ್ರತಿಭಾನ್ವಿತರನ್ನು ಗುರುತಿಸಿ ಪ್ರೋತ್ಸಾಹಿಸಿ

    ಹುಮನಾಬಾದ್: ದೇಶದಲ್ಲಿ ಪ್ರತಿಭಾವಂತರಿಗೆ ಕೊರತೆ ಇಲ್ಲ. ಆದರೆ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮುವ ವೇದಿಕೆಯನ್ನು ನಿಮರ್ಿಸಿಕೊಡಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಜಾನಪದ ಕಲೆ, ಸಾಹಿತ್ಯ ಅಪಾರವಾಗಿದ್ದು, ಪ್ರತಿಭಾನ್ವಿತರನ್ನು ಗುರುತಿಸಿ ಪ್ರೋತ್ಸಾಹಿಸಬೇಕೆಂದು ಬೆಂಗಳೂರು ರಾಷ್ಟ್ರೀಯ ಶಿಕ್ಷಣ ತಜ್ಞ ಯು. ಭೀಮರಾವ್ ಹೇಳಿದರು.

    ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಬಾಲಭಾರತಿ ವಿದ್ಯಾಮಂದಿರ ಶಾಲಾ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯರ್ಾಲಯ, ಸಮೂಹ ಸಂಪನ್ಮೂಲ ಕೇಂದ್ರ ಹುಮನಾಬಾದ (ಉತ್ತರ) ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ-ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾವಿರಾರು ವರ್ಷಗಳ ಇತಿಹಾಸ ಇರುವ ಸುಂದರ ಸಾಂಸ್ಕೃತಿಕ ಹಿನ್ನಲೆ ಇರುವ ಭಾರತದಲ್ಲಿ ವಿಭಿನ್ನ ಸಂಸ್ಕೃತಿಗಳನ್ನು ಕಾಣಬಹುದು. ಈ ವೈವಿಧ್ಯಮಯ ಭಾರತದ ಹಲವು ಮುಖಗಳನ್ನು ಹಾಗೂ ಬಣ್ಣಗಳನ್ನು ಮಕ್ಕಳ ಪ್ರತಿಭಾ ಕಾರಂಜಿಯಲ್ಲಿ ಕಾಣುವಂತಾಗಿದೆ ಎಂದರು.

    ಸಮನ್ವಯ ಅಧಿಕಾರ ಪ್ರೀತಮಸಿಂಗ್ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಯೊಂದು ಮಗುವಿನಲ್ಲಿ ಒಂದು ಪ್ರತಿಭೆ ಅಡಗಿರುತ್ತದೆ. ಪ್ರತಿಭೆಯ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದ್ದು, ಇದನ್ನು ಸದುಪಯೋಗಮಾಡಿಕೊಂಡು ವಿದ್ಯಾಥರ್ಿಗಳು ಉನ್ನತ ಸಾಧನೆ ಮಾಡುವಂತೆ ಹೇಳಿದರು.

    ಸಂಸ್ಥೆ ಕಾರ್ಯದಶರ್ಿ ಶಿವಶಂಕರ ತರನಳ್ಳಿ, ಸಿಆರ್ಸಿ ಗೀತಾ ಮಾತನಾಡಿದರು.ಉತ್ತರ ವಲಯ ಕ್ಲಸ್ಟರ್ ಶಾಲೆಯ ಎಲ್ಲ ಮಕ್ಕಳು ತಮ್ಮ ಕಲೆಯ ಪ್ರದರ್ಶನ ಮಾಡಿದರು. ಅಕ್ಷರ ದಾಸೋಹ ಸಹಾಯಕ ನಿದರ್ೇಶಕ ಸಂಜಯಕುಮಾರ ಕಾಂಗೆ, ಮುಖ್ಯಗುರು ಇಂದುಮತಿ ಮಠ, ಬಿಐಆರ್ ಟಿ.ಏಲ್ಜಿಬತ್, ಶರಣಪ್ಪ ಕರಾಂಜಿ, ಉದರ್ು ವಲಯ ಸಿಆರ್ಪಿ ಮಹ್ಮದ್ ನುಬೀನ್, ದಕ್ಷಿಣ ವಲಯ ಸಿಆರ್ಪಿ ಮನೋಹರ ರಾಠೋಡ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts