More

    ಪ್ರತಿಭಟನೆ ನಡೆಸಿ ಜನ್ಮದಿನ ಆಚರಣೆ; ಮೆಸ್ಕಾಂ ಬಿಲ್ ಕೌಂಟರ್ ಮುಚ್ಚದಂತೆ ಸಾಮಾಜಿಕ ಕಾರ್ಯಕರ್ತನ ಆಗ್ರಹ

    ಭದ್ರಾವತಿ: ಪ್ರತಿಯೊಬ್ಬರೂ ತಮ್ಮ ಜನ್ಮದಿನವನ್ನು ಅವರವರ ವಿವೇಚನೆಗೆ ತಕ್ಕಂತೆ ಆಚರಣೆ ಮಾಡಿಕೊಳ್ಳುತ್ತಾರೆ. ಕೆಲವರು ಕೇಕ್ ಕತ್ತರಿಸಿದರೆ, ಮತ್ತೆ ಕೆಲವರು ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಾಲು, ಹಣ್ಣು ಬ್ರೆಡ್ ವಿತರಣೆ, ಸಸಿ ವಿತರಣೆ, ರಕ್ತದಾನ ಸೇರಿದಂತೆ ಹಲವು ರೀತಿಯಲ್ಲಿ ಆಚರಣೆ ಮಾಡಿಕೊಳ್ಳುವುದು ಸಹಜ.
    ಆದರೆ ಇಲ್ಲಿನ ಜನ್ನಾಪುರದ ಹೋರಾಟಗಾರ, ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್.ವೇಣುಗೋಪಾಲ್ ಅವರು ಮೆಸ್ಕಾಂ ಬಿಲ್ ಕೌಂಟರ್ ಮುಂದುವರಿಸುವಂತೆ ಒತ್ತಾಯಿಸಿ ಸೋಮವಾರ ಪ್ರತಿಭಟನೆ ನಡೆಸುವ ಮೂಲಕ ತಮ್ಮ 65ನೇ ಜನ್ಮದಿನವನ್ನು ಆಚರಿಸಿಕೊಂಡು ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
    ಉಂಬ್ಳೇಬೈಲು ರಸ್ತೆಯ ಮೆಸ್ಕಾಂ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿ, ನ್ಯೂಟೌನ್ ಜನ್ನಾಪುರ ಎನ್‌ಟಿಬಿ ಕಚೇರಿಯಲ್ಲಿ 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಮೆಸ್ಕಾಂ ಬಿಲ್ ಕೌಂಟರ್‌ಅನ್ನು ಮುಂದಿನ ತಿಂಗಳಿನಿಂದ ಸ್ಥಗಿತಗೊಳಿಸುವ ಆದೇಶವನ್ನು ಮೆಸ್ಕಾಂ ಹೊರಡಿಸಿದೆ. ಈ ಬಿಲ್ ಕೌಟರ್ ನ್ಯೂಟೌನ್ ಭಾಗದ ಸ್ಥಳೀಯ ಜನ್ನಾಪುರ, ಹುತ್ತಾ ಕಾಲನಿ, ಸಿದ್ದಾಪುರ, ಹೊಸೂರು ತಾಂಡಾ ಸೇರಿದಂತೆ ಸುತ್ತಮುತ್ತಲ ಸ್ಲಂ ನಿವಾಸಿಗಳಿಗೆ ವಿದ್ಯುತ್ ಬಿಲ್ ಪಾವತಿಸಲು ಅನುಕೂಲವಾಗಿದೆ. ಈ ಹಿಂದೆ ಸಾರ್ವಜನಿಕರ ಅನುಕೂಲಕ್ಕಾಗಿ ಕೊಠಡಿಯ ಮುಂಭಾಗ ಶೆಲ್ಟರ್ ಸಹ ನಿರ್ಮಿಸಲಾಗಿದೆ. ಇದೀಗ ಏಕಾಏಕಿ ಕಚೇರಿ ಸ್ಥಗಿತಗೊಳಿಸುವ ಸೂಚನಾ ಫಲಕವನ್ನು ಎನ್‌ಟಿಬಿ ಕಚೇರಿ ಮುಂಭಾಗ ಹಾಕಲಾಗಿದೆ. ಮೆಸ್ಕಾಂ ಇಲಾಖೆ ಆ ಸೂಚನಾ ಫಲಕವನ್ನು ತೆಗೆಯುವುದರ ಮೂಲಕ ವಿದ್ಯುತ್ ಬಿಲ್ ಕೌಂಟರ್ ಯಥಾಸ್ಥಿತಿ ಮುಂದುವರಿಯುವಂತೆ ಆದೇಶಿಸಬೇಕು ಎಂದು ಆಗ್ರಹಿಸಿ ಮೆಸ್ಕಾಂ ಕಾರ್ಯಪಾಲಕ ಅಭಿಯಂತಗೆ ಮನವಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts