More

    ಪ್ರಗತಿಗೆ ಬಿಜೆಪಿ ಬೆಂಬಲಿಸಿ

    ಬೆಳಗಾವಿ: ಬೆಳಗಾವಿ ಉತ್ತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ರವಿ ಪಾಟೀಲ ಕ್ಷೇತ್ರದಲ್ಲಿ ಬುಧವಾರ ಭರ್ಜರಿ ಪ್ರಚಾರ ನಡೆಸಿ, ಬಿಜೆಪಿಯ ಜನಪರ ಯೋಜನೆ ಹಾಗೂ ಬೆಳಗಾವಿಗರಿಗೆ ತಾವು ಒದಗಿಸಬೇಕೆಂದಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ಮತಯಾಚನೆ ಮಾಡಿದರು.

    ಬೆಳಗ್ಗೆಯೇ ಮಹಾಂತೇಶ ನಗರದ ಗ್ಲಾಸ್ ಹೌಸ್‌ನಲ್ಲಿ ಚಾಯ್ ಪೇ ಚರ್ಚಾ ಮೂಲಕ ಜನರೊಂದಿಗೆ ಬೆರೆತು ಸಮಾಲೋಚನೆ ನಡೆಸಿ ಸಾರ್ವಜನಿಕರ ಕಷ್ಟ ಸುಖ ಕೇಳಿ, ಆಯ್ಕೆ ಮಾಡಿದರೆ ತ್ವರಿತವಾಗಿ ಸ್ಪಂದಿಸಿ ಅನುಕೂಲ ಒದಗಿಸಲಾಗುವುದು ಎಂದು ಭವರಸೆ ನೀಡಿದ ಅವರು, ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಭಾರತೀಯ ಜನತಾ ಪಾರ್ಟಿಗೆ ಬೆಂಬಲಿಸುವಂತೆ ಮನವಿ ಮಾಡಿದರು.

    ಬಿಜೆಪಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಹಿನ್ನೆಲೆಯಲ್ಲಿ ಅರ್ಹ ಅಭ್ಯರ್ಥಿಯಾಗಿರುವ ಡಾ.ರವಿ ಪಾಟೀಲ ಅವರಿಗೆ ಅಪಾರ ಬೆಂಬಲ ವ್ಯಕ್ತವಾಯಿತು. ಕಪಿಲೇಶ್ವರ ರಸ್ತೆಯ ರಾಮಾ ಮೇಸ್ತ್ರಿ ಬಡಾವಣೆ ಬಳಿ ರಣರಾಗಿನಿ ಮಹಿಳಾ ಸಂಘಟನೆ ಸದಸ್ಯೆಯರು ಮಹಿಳೆಯರ ಸ್ವಾವಲಂಬನೆ, ಸಶಕ್ತಿಕರಣಕ್ಕಾಗಿ ಬಿಜೆಪಿ ಬೆಂಬಲಿಸುವ ಭರವಸೆ ನೀಡಿದರು.

    ಸ್ಥಳೀಯ ಫುಲಬಾಗ್ ಪ್ರದೇಶದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಸಿಂಹಾಸನಾರೂಢ ಪ್ರತಿಮೆಗೆ ಡಾ.ರವಿ ಪಾಟೀಲ್ ಅವರು ಪುಷ್ಪಹಾರ ಸಮರ್ಪಿಸಿ ಪೂಜೆ ಸಲ್ಲಿಸಿದ ಅವರನ್ನು ಮತದಾರರು ಉತ್ಸಾಹದಿಂದ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಬಿಜೆಪಿ ಬೆಂಬಲಿಸಿ, ಡಾ.ರವಿ ಪಾಟೀಲ ಅವರಿಗೆ ತಮ್ಮ ಬಹುಮೂಲ್ಯ ಮತ ನೀಡುವುದಾಗಿ ಈ ಭಾಗದ ಜನ ಭರವಸೆ ನೀಡಿದರು. ಅಲ್ಲದೇ, ಡಾ.ರವಿ ಪಾಟೀಲ ಅವರನ್ನು ಸನ್ಮಾನಿಸಿ ಸಿಹಿ ತಿನ್ನಿಸಿ ಶುಭ ಹಾರೈಸಿದರು.

    ಬೆಳಗಾವಿ ಉತ್ತರ ವಿಧಾನ ಸಭಾ ಕ್ಷೇತ್ರದ ಕೋನವಾಳ ಗಲ್ಲಿಯಲ್ಲಿ ಬಿಜೆಪಿಗೆ ಅಪಾರ ಜನ ಬೆಂಬಲ ವ್ಯಕ್ತವಾಯಿತು.
    ಮತದಾರರು ಪುಷ್ಪವೃಷ್ಟಿಯ ಮೂಲಕ ಡಾ.ರವಿ ಪಾಟೀಲ ಅವರನ್ನು ಬರಮಾಡಿಕೊಂಡರು. ಜೊತೆಗೆ ಡಾ.ರವಿ ಪಾಟೀಲ ಅವರಿಗೆ ಮತ ನೀಡುವ ಮೂಲಕ ಬಿಜೆಪಿ ಗೆಲುವಿಗೆ ಕೈ ಜೋಡಿಸುವ ಭರವಸೆ ನೀಡಿದರು. ರಾಮಲಿಂಗ ಖಿಂಡ ಗಲ್ಲಿ, ಕಿರ್ಲೋಸ್ಕರ್ ರೋಡ್, ಅನಸೂರಕರ ಗಲ್ಲಿ, ಮಹಾದೇವ ಗಲ್ಲಿ, ಕೇಳಕರ ಬಾಗ್, ಕೊನವಾಳ ಗಲ್ಲಿ ಭಾಗದಲ್ಲಿ ಡಾ.ರವಿ ಪಾಟೀಲ ಅವರು ಮನೆ ಮನೆಗಳಿಗೆ ತೆರಳಿ ಮತಯಾಚನೆ ಮಾಡಿದರು. ಅದೇ ರೀತಿ ಈ ಭಾಗದ ವ್ಯಾಪಾರಿಗಳು, ವರ್ತಕರನ್ನು ಭೇಟಿಯಾಗಿ ಬಿಜೆಪಿ ಬೆಂಬಲಿಸುವಂತೆ ಕೋರಿದರು.

    ವೀರಭದ್ರ ನಗರ, ಶಿವಾಜಿ ನಗರ, ಸಾಯಿ ಬಾಬಾ ಮಂದಿರ, ಪ್ರಧಾನ ಗಲ್ಲಿ, ಜೈಲ್ ಕಾಲನಿ, ಶ್ರೀಲಕ್ಷ್ಮೀ ಮಂಡಳಿ, ರಾಮ ನಗರ ಪ್ರದೇಶಗಳಲ್ಲಿ ಸಹ ಪ್ರಚಾರ ನಡೆಸಿದ ಡಾ.ರವಿ ಪಾಟೀಲ ಅವರು ಬಿಜೆಪಿಯನ್ನು ಬೆಂಬಲಿಸುವಂತೆ ಮತದಾರರಲ್ಲಿ ಮತಯಾಚನೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts