More

    ಪ್ಯಾಟಿ ಬಸವೇಶ್ವರ ದೇವಸ್ಥಾನದಲ್ಲಿ ಕಳವು

    ಕೊಡೇಕಲ್ : ಗ್ರಾಮದ ಪ್ಯಾಟಿ ಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ತಡರಾತ್ರಿ ಹುಂಡಿ ಮುರಿದು ಹಣ ದೋಚಲಾಗಿದೆ.
    ದೇವಸ್ಥಾನಕ್ಕೆ ಹೊಂದಿಕೊAಡಿರುವ ಹಿರೋಡೆ ದೇವರ ಬಳಿಯ ಹಳೆಯ ಬಾಗಿಲ ಮೂಲಕ ಒಳಬಂದ ಕಳ್ಳರು, ಕಬ್ಬಿಣದ ಹುಂಡಿ ಪೆಟ್ಟಿಗೆಯ ಲಾಕರ್ ಮುರಿದು ಹಣ ಕೊಂಡೊಯ್ದಿರುವ ಶಂಕೆ ಇದೆ.

    ಪಿಎಸ್‌ಐ ಶ್ರೀಶೈಲ ಅಂಬಾಟೆ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರೂ ಸುಳಿವು ಸಿಕ್ಕಿಲ್ಲ. ಜಿಲ್ಲಾ ಕೇಂದ್ರದಿAದ ಬೆರಳಚ್ಚು ತಜ್ಞರ ತಂಡ ಆಗಮಿಸಿ ಹುಂಡಿ ಪೆಟ್ಟಿಗೆ ಸೇರಿ ಅಗತ್ಯ ವಸ್ತುಗಳ ಪರಿಶೀಲನೆ ನಡೆಸಿದರು.

    ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಈ ದೇವಸ್ಥಾನದಿಂದ ಸಾಕಷ್ಟು ಆದಾಯವಿದ್ದರೂ ಸಿಸಿ ಕ್ಯಾಮರಾ ಜತೆಗೆ ಯಾವುದೇ ಮೂಲಸೌಲಭ್ಯ ಕಲ್ಪಿಸಿಲ್ಲ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಹುಣಸಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಹುಂಡಿ ಕಳ್ಳರ ಬಂಧನ ಶೀಘ್ರ : ಪ್ಯಾಟಿ ಬಸವೇಶ್ವರ ದೇವಸ್ಥಾನದ ಹುಂಡಿಯಲ್ಲಿನ ಹಣ ದೋಚಿದ ಕಳ್ಳರನ್ನು ಶೀಘ್ರ ಬಂಧಿಸುವುದಾಗಿ ತಹಸೀಲ್ದಾರ್ ಜಗದೀಶ ಚೌರ ಹೇಳಿದರು. ಪೀಠಾಧಿಪತಿ ಶ್ರೀ ವೃಷಭೇಂದ್ರ ಅಪ್ಪ ಸಮ್ಮುಖದಲ್ಲಿ ಭಕ್ತರು ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ಹುಣಸಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕಳ್ಳರು ಯಾರೇ ಇರಲಿ, ಶೀಘ್ರ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದರು. ಪಿಎಸ್‌ಐ ಶ್ರೀಶೈಲ್, ಗ್ರಾಮಸ್ಥರಾದ ಕನಕು ಜಿರಾಳ, ವಸಂತಗೌಡ ಮಾಲಿಗೌಡ್ರ, ಬಸನಗೌಡ ಮಾಲಿಗೌಡ್ರ, ಸೋಮಲಿಂಗಪ್ಪ ದೋರಿ, ಸಂಗಪ್ಪ ಶಿವಪುರ, ಬಸಪ್ಪ ಪಂಜಗಲ್, ಬಸವರಾಜ ಹೊಸ ಪೂಜಾರಿ, ಸಂಗಣ್ಣ ಪೂಜಾರಿ, ಬಸವರಾಜ ಗೊನಟಲ್, ಗೌಡಪ್ಪ ರಾಮನಗೌಡ್ರ, ಬಸಣ್ಣ ಹಳೇ ಪೂಜಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts